ನಿಶ್ಚಿತಾರ್ಥಕ್ಕೆ ಮುನ್ನ ದಿನ ತಂದೆ ಸಾವು

30sor5
ಸಾಗರ-ಸೊರಬ ರಸ್ತೆಯಲ್ಲಿ ಬಸ್ ಮತ್ತು ಬೈಕ್ ಅಪಘಾತವಾಗಿರುವುದು.
Published on

ಸೊರಬ: ತಾಲೂಕಿನ ಮಳಲೆಗದ್ದೆಯಲ್ಲಿ ಶನಿವಾರ ಬೆಳಗ್ಗೆ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಮಳಲಗದ್ದೆ ಕೃಷ್ಣಪ್ಪ (46) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೃಷ್ಣಪ್ಪ ಅವರು ಗ್ರಾಮದ ಗುಡ್ಡೆಕೆರೆ ಹಾಲಿನ ಡೇರಿಗೆ ಹಾಲು ಹಾಕಿ ವಾಪಸ್ ಬರುವಾಗ ಗುಡ್ಡೆಕೆರೆ ಸರ್ಕಲ್ ಹತ್ತಿರ ಮುಖ್ಯರಸ್ತೆಯನ್ನು ದಾಟುವಾಗ ಸಾಗರ ಕಡೆಯಿಂದ ಸೊರಬ ಕಡೆಗೆ ಬರುತ್ತಿದ್ದ ಹುಬ್ಬಳ್ಳಿ-ಧಾರವಾಡ- ವಿಜಯಪುರ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ಭಾನುವಾರ ಕೃಷ್ಣಪ್ಪ ಅವರ ಎರಡನೇ ಮಗಳ ನಿಶ್ಚಿತಾರ್ಥ ಕಾರ್ಯಕ್ರಮವಿದ್ದು ಸಿದ್ಧ್ದತೆ ನಡೆಯುತ್ತಿರುವಾಗಲೇ ಅಪಘಾತದಲ್ಲಿ ಮನೆಯ ಯಜಮಾನ ಮೃತಪಟ್ಟಿರುವುದು ಕುಟುಂಬ ಸದಸ್ಯರ ಆಕ್ರಂದನಕ್ಕೆ ಕಾರಣವಾಗಿದೆ. ಕೃಷ್ಣಪ್ಪ ಗ್ರಾಮ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಸೊರಬ ಪಿಎಸ್‌ಐ ನಾಗರಾಜ್, ಸಾಗರ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ರಾಜಪ್ಪ ಭೇಟಿ ನೀಡಿ ಪರಿಶೀಲನೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net