ತಾಯಿ ಸಾವಿನಿಂದ ಮನನೊಂದ ಮಗಳು ನೇಣಿಗೆ ಶರಣು

Crime Logo
Published on

ಹುಬ್ಬಳ್ಳಿ: ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಮನನೊಂದ ಯುವತಿಯೊಬ್ಬಳು ನೇಣಿಗೆ ಶರಣಾದ ಘಟನೆ ನಗರದ ಗೋಕುಲ ರಸ್ತೆಯ ಲೋಹಿಯಾನಗರದಲ್ಲಿ ನಡೆದಿದೆ. ಸುಮಿತ್ರಾ ಗೋನಾಳ (19) ಮೃತ ಯುವತಿ. ಕಳೆದ 15 ದಿನಗಳ ಹಿಂದೆ ಯುವತಿಯ ತಾಯಿ ಮೃತಪಟ್ಟಿದ್ದರು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಳೇ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ಇನ್ ಸ್ಪೆಕ್ಟರ್ ಅಲಿ ಎ ಶೇಖ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net