ದಾಂಡೇಲಿ ನಗರಸಭೆಯ 1.22 ಕೋಟಿ ರೂಪಾಯಿ ಉಳಿತಾಯ ಬಜೆಟ್

18DND1
Published on

ದಾಂಡೇಲಿ: ನಗರಸಭೆಯ 2021-22ನೇ ಸಾಲಿನ 1.22 ಕೋಟಿ ರೂಪಾಯಿ ಉಳಿತಾಯ ಬಜೆಟ್ ಅನ್ನು ಸ್ಥಾಯಿ ಸಮಿತಿ ಅಧ್ಯಕ್ಷ ಆದಂ ದೇಸೂರ ಗುರುವಾರ ಮಂಡಿಸಿದರು.

ಸಭೆಯಲ್ಲಿ ಅವರು ವಿವಿಧ ವಿಭಾಗಗಳಿಂದ ನಗರಸಭೆಗೆ ಬರುವ ಒಟ್ಟು 100.75 ಕೋಟಿ ರೂಪಾಯಿ ಆದಾಯ ನಿರೀಕ್ಷಿಸಲಾಗಿದೆ. ಹಾಗೂ ವೆಚ್ಚ 99.53 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು, 1.22 ಕೋಟಿ ರೂ. ಉಳಿತಾಯವಾಗುವ ನಿರೀಕ್ಷೆ ಇದೆ ಎಂದರು. ಸರ್ಕಾರದ ಅನುದಾನ ಹಾಗೂ ಸ್ಥಳೀಯ ಮೂಲಗಳಿಂದ ಬರುವ ಆದಾಯ ಮತ್ತು ಮೂಲಸೌಕರ್ಯ ಮತ್ತಿತರ ಸೇವೆಗಳಿಗೆ ಬಳಕೆಯಾಗುವ ಅನುದಾನ ಕುರಿತು ವಿವರಣೆ ನೀಡಿದರು.

ನಗರಸಭೆ ವ್ಯಾಪ್ತಿಯ ಲಭ್ಯವಿರುವ ಸಂಪನ್ಮೂಲಗಳ ಮೂಲಕ ನಗರದ ಪ್ರಗತಿಗೆ, ಸೌಂದಯೀಕರಣ, ಮೂಲ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.

ಬಜೆಟ್ ಚರ್ಚೆ ಮೊದಲು ದಾಂಡೇಲಿ ಸಮೀಪದ ಅಂಬೇವಾಡಿ ನಿಲ್ದಾಣಕ್ಕೆ ದಾಂಡೇಲಿ ಎಂದು ನಾಮಕರಣದ ಪ್ರಸ್ತಾವನೆಯನ್ನು ಜಿಲ್ಲಾಧಿಕಾರಿ ಮುಖಾಂತರ ಮುಂದಿನ ಕ್ರಮಕ್ಕೆ ಸಲ್ಲಿಸಲು ತೀರ್ವನಿಸಲಾಯಿತು. ಅದೇ ರೀತಿ ಅಂಬೇವಾಡಿಯ ಕೆಪಿಪಿಸಿಯ 182 ಮನೆಗಳ ಹರಾಜಿಗಾಗಿ ಚರ್ಚೆ ನಡೆಯಿತು. ಮೋಹನ ಹಲವಾಯಿ ಅವರು ಹಳೆ ಮನೆಗಳನ್ನು ನೆಲಸಮಗೊಳಿಸಿ ಹೊಸ ಲೇ-ಔಟ್ ನಿರ್ವಿುಸಬೇಕೆಂಬ ಸಲಹೆ ನೀಡಿದರು.

ನಗರಸಭೆ ವ್ಯಾಪ್ತಿಯಲ್ಲಿರುವ ಖಾಲಿ ನಿವೇಶನಗಳನ್ನು ಹರಾಜು ಮಾಡಲು ತಿರ್ವನಿಸಲಾಯಿತು. ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ನಗರಸಭೆಯ ವಿರೋಧ ಪಕ್ಷದವರು, ತೃಪ್ತಿಕರವಾಗಿದೆ ಎಂದರು.

ಅಧ್ಯಕ್ಷೆ ಸರಸ್ವತಿ ರಜಪುತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ, ಪೌರಾಯುಕ್ತ ಗಣಪತಿ ಶಾಸ್ತ್ರಿ, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net