

ಬಿಡದಿ: ಕೃಷಿಯಲ್ಲಿ ಕೇವಲ ಒಂದು ಬೆಳೆ ಅವಲಂಬಿಸಿದರೆ ಸದ್ಯದ ಕಾಲಟ್ಟದಲ್ಲಿ ನಿರೀತ ಆದಾಯ ಕಷ್ಟಸಾಧ್ಯ ಎಂಬುದನ್ನರಿತ ವಾಜರಹಳ್ಳಿ ರೈತ ಸಮಗ್ರ ಕೃಷಿ ಮೂಲಕ ಉತ್ತಮ ಆದಾಯಗಳಿಸುತ್ತಿದ್ದಾರೆ.
ಹೌದು...! ವಾಜರಹಳ್ಳಿ ರೈತ ಶ್ರೀನಿವಾಸ್ 10 ಎಕರೆ ಕೃಷಿ ಭೂಮಿಯಲ್ಲಿ ಹತ್ತಾರು ಬೆಳೆ ಬೆಳೆದು ಉತ್ತಮ ಆದಾಯಗಳಿಸುತ್ತಿದ್ದಾರೆ. ವಿವಿಧ ಬೆಳೆ ಬೆಳೆಯುವ ಜತೆಗೆ ಹೈನುಗಾರಿಕೆ ಮೂಲಕವೂ ಆದಾಯದ ಮೂಲ ಕಂಡುಕೊಂಡಿದ್ದಾರೆ.
ಭತ್ತ, ರಾಗಿಗೆ ಆದ್ಯತೆ ರಾಗಿ ಹಾಗೂ ಭತ್ತದ ಬೇಸಾಯಕ್ಕೆ ಶ್ರೀನಿವಾಸ್ ಅವರು ಒತ್ತು ನೀಡಿದ್ದು, 3 ಎಕರೆಯಲ್ಲಿ ಪ್ರತಿ ವರ್ಷ 100 ಮೂಟೆ ರಾಗಿ ಹಾಗೂ ಭತ್ತ ಬೆಳೆದು ಸೈ ಎನಿಸಿಕೊಂಡಿದ್ದಾರೆ. ಭತ್ತ ನಾಟಿ ಮಾಡಲು, ಹೊಟ್ಟಿಲು ಹಾಕಿ, ಭೂಮಿ ಹದ ಮಾಡಿ ಭತ್ತವನ್ನು ಸಾಂಪ್ರದಾಯಿಕವಾಗಿ ನಾಟಿ ಮಾಡಿಸುವ ಜತೆಗೆ ರಾಗಿಯನ್ನೂ ಉತ್ತಮವಾಗಿ ಬೆಳೆಯುತ್ತಿದ್ದಾರೆ. ಕಲ್ಪತರುವಾದ ತೆಂಗು ವಾಣಿಜ್ಯ ಬೆಳೆಗಳಾದ ತೆಂಗು ಹಾಗೂ ಅಡಕೆಯನ್ನೂ ಶ್ರೀನಿವಾಸ್ ಬೆಳೆದಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ತೆಂಗಿನ ಕಾಯಿ ಕೊಯ್ಲಿಗೆ ಬರುತ್ತದೆ. ಅದೇ ರೀತಿ ಅಡಕೆಯೂ ಆದಾಯ ತಂದುಕೊಡುತ್ತಿದೆ. ಹೈನುಗಾರಿಕೆಗೆ ಒತ್ತು ನೀಡಿದ "ಜಿಲ್ಲಾ ಉತ್ತಮ ಹಾಲು ಉತ್ಪಾದಕ' ಮಣ್ಣಿನೊಂದಿಗೆ ಮಣ್ಣಾಗಿ ದುಡಿದರೆ ಹೊನ್ನು ಖಚಿತ. ದನಗಳೊಂದಿಗೆ ದನಗಳಾಗಿ ದುಡಿದು ಸಾಕಿದರೆ ಸುಖ ಸಮೃದ್ಧಿಯ ಬದುಕು ನಿಶ್ಚಿತ ಎಂಬ ಮಾತಿದೆ. ಆದರೆ, ಅನೇಕ ರೈತರು ಬೆಳೆ ಬೆಳೆದು ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದೆ, ನಷ್ಟ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲೂ ಶ್ರೀನಿವಾಸ್ ಅವರು ಹೈನುಗಾರಿಕೆ ಲಾಭದಾಯಕ ಎಂಬುದನ್ನು ಮನಗಾಣಿಸಿಕೊಟ್ಟಿದ್ದಾರೆ. ಆರಂಭದಲ್ಲಿ ಮುರಾ ಎಮ್ಮೆಗಳನ್ನು ಸಾಕಿ ದಿನಕ್ಕೆ 20 ಲೀಟರ್ ಹಾಲು ಕರೆಯುತ್ತಿದ್ದ ಶ್ರೀನಿವಾಸ್ ಅವರು, ಜಮೀನಿನಲ್ಲೇ ಪ್ರತ್ಯೇಕ ಎರಡು ಕೊಟ್ಟಿಗೆ ನಿರ್ಮಿಸಿ, ಮುರಾ ತಳಿಯ ಎಮ್ಮೆಗಳ ಬದಲು 25ಕ್ಕೂ ಹೆಚ್ಚು ಸೀಮೆ ಹಸುಗಳನ್ನು ಸಾಕಣೆ ಮಾಡಿದ್ದಾರೆ. ಮೇವಿಗಾಗಿ ಹಸುಗಳನ್ನು ಹೊರಗಡೆ ಬಿಡದೆ ಜೋಳ, ಸೀಮೆ ಹುಲ್ಲು, ರಾಗಿ ಹಾಗೂ ಭತ್ತದ ಒಣ ಮೇವನ್ನು ಯಂತ್ರದ ಮೂಲಕ ಕಟಾವು ಮಾಡಿ, ನೀಡುತ್ತಾರೆ. ಅಲ್ಲದೇ ಯಂತ್ರದ ಮೂಲಕವೇ ಹಾಲು ಕರೆಯುತ್ತಾರೆ. ನಿತ್ಯ 100 ಲೀ ಹಾಲನ್ನು ಡೇರಿಗೆ ಪೂರೈಸುವ ಶ್ರೀನಿವಾಸ್, ಕೊಟ್ಟಿಗೆ ಬಳಿ ರಣೆಗೂ ಆದ್ಯತೆ ನೀಡಿ, ಹೈನುಗಾರಿಕೆಯಲ್ಲಿ ಆಧುನಿಕ ತಂತ್ರಾನ ಬಳಸಿಕೊಂಡು, ಯಶಸ್ಸು ಕಂಡಿದ್ದು, ಜಿಲ್ಲಾ ಉತ್ತಮ ಹಾಲು ಉತ್ಪಾದಕ ಎಂಬ ಪ್ರಶಸ್ತಿಯನ್ನೂ ಪಡೆದಿದ್ದಾರೆ.
ಕೃಷಿ ಮಾಡಿ ಕೆಟ್ಟವರು ಯಾರು ಇಲ್ಲ. ಕಷ್ಟ ಕಾಲದಲ್ಲೂ ಕೃಷಿಯನ್ನು ಆರಂಭಿಸಬಹುದು. ಇದಕ್ಕೆ ಯಾವುದೇ ಪೈಪೋಟಿ ಇಲ್ಲ. ವರ್ಷವಿಡೀ ಬೆಳೆ ತೆಗೆದು ಆದಾಯ ಪಡೆಯಬಹುದು. ಆದರೆ ವೈಾನಿಕ ಕೃಷಿಯಿಂದ ಆದಾಯ ಹೆಚ್ಚು. ಪತ್ನಿ ಲೀಲಾವತಿ ನನ್ನ ಕೈ ಜೋಡಿಸಿದ್ದಾರೆ. ಅವರು ಸಹ ಕೃಷಿ ಚಟುವಟಿಕೆಯಲ್ಲಿ ನನ್ನೊಂದಿಗೆ ಹೆಗಲಾಗಿ ದುಡಿಮೆ ಮಾಡುತ್ತಾರೆ. > ಶ್ರೀನಿವಾಸ್ ರೈತ