

ಆನೇಕಲ್: ಕಿತ್ತಗಾನಹಳ್ಳಿಯಲ್ಲಿ ಸಿಲಿಂಡರ್ ಲೀಕೇಜ್ ಆಗಿ ಸ್ಫೋಟಗೊಂಡಿದ್ದು, ಕಟ್ಟಡದ ಒಂದು ಮಹಡಿ ಧ್ವಂಸವಾಗಿ ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಮನೆಯಲ್ಲಿ ವಾಸ ಇದ್ದ ಕೇರಳ ಮೂಲದ ವಿಷ್ಣು ಜಯರಾಜ್(30), ತಮಿಳುನಾಡು ಮೂಲದ ಸನಿಲ್ ಜೋಸ್ೆ (31) ಗಂಭೀರ ಗಾಯಗೊಂಡಿದ್ದು, ಇಬ್ಬರನ್ನೂ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲು ಮಾಡಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ. ಇಬ್ಬರೂ ಇದೇ ಆಸ್ಪತ್ರೆಯಲ್ಲಿಯೇ ಕೆಲಸ ಮಾಡುತ್ತಿದ್ದರು. ಒಂದೇ ಮನೆಯಲ್ಲಿ ಬಾಡಿಗೆಗೆ ಇದ್ದರು ಎನ್ನಲಾಗಿದೆ.
ಸೋಮವಾರ ಬೆಳಗ್ಗೆ 8.20ರ ಸುಮಾರಿಗೆ ಮನೆಯಲ್ಲಿ ಸಿಲಿಂಡರ್ ಲೀಕೇಜ್ ಆಗಿದ್ದು, ಸ್ನಾನ ಮಾಡಲು ಲೈಟ್ ಸ್ವಿಚ್ ಆನ್ ಮಾಡಿದಾಗ ಸಿಲಿಂಡರ್ ಸ್ಫೋಟಗೊಂಡಿದೆ. ರಭಸಕ್ಕೆ 50 ಮೀಟರ್‌ಗೂ ಅಧಿಕ ದೂರವಿದ್ದ ಎದುರುಗಡೆ ಮನೆಗೂ ಹಾನಿ ಆಗಿದ್ದು, ಕಟ್ಟಡದ ಅವಶೇಷಗಳು ಬಿದ್ದು ನಾಲ್ಕೈದು ಬೈಕ್‌ಗಳು, ಒಂದು ಕಾರು ಜಖಂಗೊಂಡಿದೆ.
ಮನೆಯಲ್ಲಿ ಇದ್ದ ಇಬ್ಬರ ಪೈಕಿ ಒಬ್ಬ ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಇನ್ನೊಬ್ಬ ಮನೆಯ ಒಳಗೆ ಇದ್ದು ಬೆಂಕಿಯ ತೀವ್ರತೆಗೆ ದೇಹದ ಬಹುತೇಕ ಭಾಗ ಸುಟ್ಟಿದೆ. ಖಾಲಿಯಾಗುವ ಮಟ್ಟದಲ್ಲಿದ್ದ ಸಿಲಿಂಡರ್ ಲಿಕೇಜ್ ಆಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಸೂರ್ಯ ನಗರ ಪೊಲೀಸರು, ಅಗ್ನಿಶಾಮಕ ದಳ ಬಾಂಬ್ ನಿಷ್ಕ್ರಿಯ ದಳ ಹಾಗೂ ಎ್ಎಸ್‌ಎಲ್ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಮಾಹಿತಿ ಕಲೆ ಹಾಕಿದೆ.
ಸ್ಫೋಟಕ್ಕೆ ಹಾರಿದ ಗೋಡೆಗಳುಮೂರು ಮಹಡಿಗಳ ಕಟ್ಟಡದಲ್ಲಿ ಒಟ್ಟು ಆರು ಮನೆಗಳಿದ್ದು, ಎರಡನೇ ಮಹಡಿಯಲ್ಲಿ ಅಕ್ಕ ಪಕ್ಕದಲ್ಲಿದ್ದ ಮನೆ ಗೋಡೆಗಳು ಕುಸಿದಿವೆ. ಸ್ಫೋಟದ ತೀವ್ರತೆಗೆ ಗೋಡೆಗಳು, ಕಾಂಪೌಂಡ್, ಕಬ್ಬಿಣದ ಸರಳುಗಳು ಎದುರಿನ ಕಟ್ಟಡಗಳಿಗೆ ಬಡಿದಿದ್ದವು.ಮಾಲೀಕನಿಗೆ ಸಂಕಷ್ಟಕಟ್ಟಡ ಭದ್ರವಾಗಿರಲಿ ಎಂದು ಎಂಟು ಪಿಲ್ಲರ್ ಹಾಕಿ ಭದ್ರವಾಗಿ ಬಿಲ್ಡಿಂಗ್ ನಿರ್ಮಾಣ ಮಾಡಿದ್ದೆ. ಆದರೆ ಗ್ಯಾಸ್ ಲೀಕೇಜ್ನಿಂದ ಇಡೀ ಕಟ್ಟಡ ಹಾಳಾಗಿದೆ ಎಂದು ಮಾಲೀಕ ಕಣ್ಣೀರಿಟ್ಟರು.ಜನನಿಬಿಡ ಪ್ರದೇಶದಲ್ಲಿ ಅವಘಡಕಿತ್ತಗಾನಹಳ್ಳಿ ಸುತ್ತಮುತ್ತ ವಾಸ ಇರುವವರು ಬಹುತೇಕ ಬೊಮ್ಮಸಂದ್ರ ಹಾಗೂ ನಾರಾಯಣ ಹೆಲ್ತ್ ಸಿಟಿ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದು, ಒಂದು ಗಂಟೆ ತಡವಾಗಿ ದುರ್ಘಟನೆ ಆಗಿದ್ದರೆ ಭಾರಿ ಸಾವು ನೋವು ಸಂಭವಿಸುವ ಸಾಧ್ಯತೆ ಹೆಚ್ಚಾಗಿತ್ತು. ಸ್ಫೋಟದ ಸ್ಥಳದಲ್ಲಿ ಸಾಕಷ್ಟು ಜನ ಜಮಾಯಿಸಿದ್ದರು. ಬಹುತೇಕರು ಬಾಂಬ್ ಬ್ಲಾಸ್ಟ್ ಆಗಿದೆ ಎಂದು ಭಾವಿಸಿದ್ದರು. ಹೀಗಾಗಿ ಭದ್ರತೆಯ ದೃಷ್ಟಿಯಿಂದ ಪೊಲೀಸರು ಸ್ಥಳದಲ್ಲೇ ಇದ್ದರು.ತೆರವು ಕಾರ್ಯಾಚರಣೆ ಮುಂದೂಡಿಕೆಕಟ್ಟಡದ ಬಹುತೇಕ ಭಾಗ ಹಾನಿ ಆಗಿರುವ ಹಿನ್ನೆಲೆಯಲ್ಲಿ ತೆರವು ಕಾರ್ಯಾಚರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದು, ಬೆಳಗ್ಗೆ ತಜ್ಞರ ತಂಡದಿಂದ ಕಟ್ಟಡ ತೆರವು ಕಾರ್ಯಾಚರಣೆ ಆಗಲಿದೆ. ಎರಡು ತಿಂಗಳಲ್ಲಿ ಇದೇ ರೀತಿ ಗ್ಯಾಸ್ ಲೀಕೇಜ್ ಪ್ರಕರಣಗಳು ಬೇಗೂರು ಸೇರಿ ಒಟ್ಟು ನಾಲ್ಕು ಕಡೆ ಆಗಿವೆ.
ಪ್ರಾಥಮಿಕವಾಗಿ ತನಿಖೆ ನಡೆಸಿದಾಗ ಮೇಲ್ನೋಟಕ್ಕೆ ಸಿಲಿಂಡರ್ ಲೀಕೇಜ್ ಆಗಿ ದುರ್ಘಟನೆ ನಡೆದಿರುವುದು ಕಂಡುಬಂದಿದೆ. ಘಟನೆಗೆ ಸಂಬಂಧಪಟ್ಟ ಒಂದಷ್ಟು ಸಾಕ್ಷಿಗಳನ್ನು ಕಲೆ ಹಾಕಿದ್ದು ತನಿಖೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ. -ನಾಗೇಶ್ ಅಗ್ನಿಶಾಮಕ ದಳದ ಅಧಿಕಾರಿ