ಸಿಲಿಂಡರ್ ಸ್ಫೋಟಿಸಿ ಎರಡು ಮನೆಗಳು ಭಸ್ಮ

burn
ಬಾಣೂರು ಗ್ರಾಮದಲ್ಲಿ ಮನೆಗೆ ಹೊತ್ತಿಕೊಂಡ ಬೆಂಕಿಯನ್ನು ಅಗ್ನಿಶಾಮಕ ದಳದ ಸಿಬ್ಬಂದಿ ನಂದಿಸಿದರು.
Published on

ತರೀಕೆರೆ: ಅಜ್ಜಂಪುರ ತಾಲೂಕು ಶಿವನಿ ಸಮೀಪದ ಬಾಣೂರು ಗ್ರಾಮದಲ್ಲಿ ಸಿಲಿಂಡರ್ ಸ್ಫೋಟಿಸಿ ಮನೆ, ಹಣ, ಒಡವೆ, ವಸ್ತುಗಳು ಸುಟ್ಟು ಕರಕಲಾಗಿವೆ.

ಬಾಣೂರು ಗ್ರಾಮದ ಬಿ.ಕೆ.ಯಶೋಧರ ಎಂಬುವವರ ಮನೆಯಲ್ಲಿ ಮಂಗಳವಾರ ಮಧ್ಯಾಹ್ನ ಸಿಲಿಂಡರ್ ಸ್ಫೋಟಿಸಿ ವಾಸದ ಎರಡು ಮನೆ, ಕೊಟ್ಟಿಗೆ ಹಾಗೂ ಕೊಬ್ಬರಿ ಗೋದಾಮಿಗೆ ಬೆಂಕಿ ತಗುಲಿದೆ. ಎರಡು ಎಮ್ಮೆ, ಕರು, ಕುರಿಮರಿ, ಮನೆಯಲ್ಲಿದ್ದ ಹಣ, ಒಡವೆ, ಬೆಲೆಬಾಳುವ ವಸ್ತುಗಳು, ಮನೆಯಂಗಳದಲ್ಲಿ ಬೆಳೆಸಿದ್ದ ಅಡಕೆ ಸಸಿಗಳು ಬೆಂಕಿಗೆ ಆಹುತಿಯಾಗಿವೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವ ವೇಳೆಗೆ ಎಲ್ಲವೂ ಸುಟ್ಟು ಕರಕಲಾಗಿದ್ದವು. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅವಘಡ ತಪ್ಪಿಸಿದರು.
ಬಾಣೂರು ಗ್ರಾಮದ ಯಶೋಧರ ಎಂಬುವವರ ಚಿಕ್ಕಪ್ಪನ ಮನೆಯಲ್ಲಿ ಸೋಮವಾರ ತಡರಾತ್ರಿ ಅವರ ತಾತ ನಿಧನರಾದ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನ ಮನೆಯವರು ತಾತನ ಶವ ಸಂಸ್ಕಾರಕ್ಕೆ ಮನೆಯಿಂದ ಸ್ವಲ್ಪ ದೂರದ ಜಮೀನಿಗೆ ಹೋಗಿದ್ದರು. ಆ ವೇಳೆ 2 ಸಿಲಿಂಡರ್ ಸ್ಫೋಟಿಸಿ ಮನೆಗೆ ಬೆಂಕಿ ಹೊತ್ತಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net