ಮೊಬೈಲ್ ಪತ್ತೆ ಹಚ್ಚಿದ ಸೈಬರ್ ಪೊಲೀಸರು

saiber crime
Published on

ಮಡಿಕೇರಿ: ಆಟೋರಿಕ್ಷಾದಲ್ಲಿ ಕಳೆದು ಹೋಗಿದ್ದ ಮೊಬೈಲ್ ಫೋನ್ ನ್ನು ಕೊಡಗು ಸೈಬರ್ ಅಪರಾಧ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ.


ಎರಡು ತಿಂಗಳ ಹಿಂದೆ ಮಡಿಕೇರಿ ಮಾರುಕಟ್ಟೆ ವ್ಯಾಪಾರಿ ಎಂ.ಎ.ರಜಾಕ್ ಅವರು ಶ್ರೀ ರಾಜರಾಜೇಶ್ವರಿ ನಗರದ ರಸ್ತೆಯಲ್ಲಿ ಆಟೋರಿಕ್ಷಾವೊಂದರಲ್ಲಿ ಮೊಬೈಲ್ ಫೋನ್ ಕಳೆದುಕೊಂಡಿದ್ದರು. ಈ ಬಗ್ಗೆ ಸೈಬರ್ ಅಪರಾಧ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎರಡು ತಿಂಗಳ ತನಿಖೆಯ ನಂತರ ಮೊಬೈಲ್ ಫೋನ್ ಪತ್ತೆಯಾಗಿದ್ದು, ಠಾಣಾಧಿಕಾರಿ ಶ್ರೀಕಾಂತ್ ಅವರು ಶನಿವಾರ ಎಂ.ಎ.ರಜಾಕ್ ಅವರಿಗೆ ಹಸ್ತಾಂತರಿಸಿದರು.


ಪೊಲೀಸರ ಕಾರ್ಯದಕ್ಷತೆಯ ಬಗ್ಗೆ ರಜಾಕ್ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸೈಬರ್ ಅಪರಾಧ ಠಾಣೆಯ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net