ಜವಾಬ್ದಾರಿ ಪ್ರವಾಸೋದ್ಯಮದ ಕೂಗು

The cry for responsible tourism
Published on

ಮಡಿಕೇರಿ
ಪ್ರಾಕೃತಿಕ ಸಂಪತ್ತಿನಿAದ ಶ್ರೀಮಂತವಾಗಿರುವ ಕೊಡಗು ಈಗಾಗಲೇ ಪ್ರವಾಸಿತಾಣವಾಗಿ ವಿಶ್ವ ಪ್ರಸಿದ್ದಿ ಪಡೆದುಕೊಂಡಿದೆ. ದೇಶ-ವಿದೇಶದ ಪ್ರವಾಸಿಗರು ಇಲ್ಲಿಯ ಸೌಂದರ್ಯ ಅಸ್ವಾದಿಸಲು ಬರುತ್ತಾರೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಜಿಲ್ಲೆಯ ಪ್ರಮುಖ ಆರ್ಥಿಕ ಮೂಲವಾಗಿ ಗುರುತಿಸಲಾಗುತ್ತಿದ್ದು, ಪ್ರಾಕೃತಿಕ ವಿಕೋಪ ಮತ್ತು ಕರೋನಾ ಸಂಕಷ್ಟದ ನಂತರ ಚೇತರಿಕೆಯ ಹಾದಿಯಲ್ಲಿದೆ. ಆದರೆ ಇಲ್ಲಿಯ ಬಹುತೇಕ ಚಟುವಟಿಕೆಗಳು ಪರಿಸರಕ್ಕೆ ಮಾರಕ ಎನ್ನುವುದು ಪರಿಸರವಾದಿಗಳ ಆರೋಪ. 2018, 19, 20ರಲ್ಲಿ ನಡೆದ ಪ್ರಾಕೃತಿಕ ವಿಕೋಪಗಳಿಗೆ ಇಂಥ ಪರಿಸರಕ್ಕೆ ಪೂರಕವಲ್ಲದ ಅನಿಯಂತ್ರಿತ ಚಟುವಟಿಕೆಗಳೇ ಕಾರಣ ಎನ್ನುತ್ತಾರೆ ಪರಿಸರವಾದಿಗಳು.
ಹಾಗಾಗಿ ಪ್ರವಾಸಿ ಜಿಲ್ಲೆಯಾಗಿರುವ ಕೊಡಗಿನಲ್ಲಿ ಪ್ರವಾಸೋದ್ಯಮ ದಾರಿ ತಪ್ಪುತ್ತಿದೆ ಎನ್ನುವ ಆರೋಪಗಳು ಸಾಮಾನ್ಯವಾಗಿದೆ. ಈ ಬೆನ್ನಲ್ಲೇ ಜವಾಬ್ದಾರಿಯುತ ಪ್ರವಾಸೋದ್ಯಮ (ರೆಸ್ಪಾನ್ಸಿಬಲ್ ಟೂರಿಸಂ) ಎನ್ನುವ ಪರಿಕಲ್ಪನೆಯನ್ನು ಪರಿಚಯಿಸುವ ಕೆಲಸ ನಡೆಯುತ್ತಿದೆ. ಕೊಡಗಿನ ಪ್ರವಾಸೋದ್ಯಮದ ಲಾಭ ಪಡೆದುಕೊಳ್ಳುತ್ತಿರುವ ಉದ್ಯಮಗಳನ್ನೂ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡುವ ಮೂಲಕ ಅವರನ್ನೂ ಇದರಲ್ಲಿ ತೊಡಗಿಸಿಕೊಳ್ಳುವ ಪ್ರಯತ್ನ ನಡೆದಿದೆ.
ಜವಾಬ್ದಾರಿಯುತ ಪ್ರವಾಸೋದ್ಯಮ, ಈ ಮೂಲಕ ಸುಸ್ಥಿರ ಪ್ರವಾಸೋದ್ಯಮ ಪರಿಸರದ ಸೂಕ್ಷö್ಮ ಜಿಲ್ಲೆಯಾಗಿರುವ ಕೊಡಗಿನ ಇಂದಿನ ಅಗತ್ಯ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಕೊಡಗಿನ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆ ದೊಡ್ಡದಿದೆ. ಹಾಗಾಗಿ ಪ್ರವಾಸೋದ್ಯಮವೇ ಬೇಡ ಎನ್ನಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸುಸ್ಥಿರ ಪ್ರವಾಸೋದ್ಯಮಕ್ಕೆ ಕೊಡಗಿನಲ್ಲಿ ಒತ್ತುಕೊಡಬೇಕು ಎನ್ನುವ ಕೂಗು ಒಂದು ವಲಯದಿಂದ ಕೇಳಿಬರುತ್ತಿದೆ. ಈ ಬಗ್ಗೆ ಲೌಡ್‌ಸ್ಪೀಕರ್‌ನಲ್ಲಿ ವಿಜಯವಾಣಿ ಓದುಗರು ಅಭಿಪ್ರಾಯ ಹಂಚಿಕೊAಡಿದ್ದಾರೆ.

ಪ್ರವಾಸೋದ್ಯಮದಿಂದ ಅನುಕೂಲಕ್ಕಿಂತ ಪರಿಸರಕ್ಕೆ ಗಂಭೀರ ಸ್ವರೂಪದ ದುಷ್ಪರಿಣಾಮವೇ ಹೆಚ್ಚು. ಮಂಗಳೂರು ಹೆದ್ದಾರಿಯಲ್ಲಿ ಮಡಿಕೇರಿ ಇಂದ ಸುಮಾರು 10ಕಿಮೀ ವರೆಗೆ ರಸ್ತೆಯ ಎರಡೂ ಬದಿಗಳಲ್ಲಿ ಪ್ಲಾಸ್ಟಿಕ್‌ಗಳು ಯಥೇಚ್ಛಚ್ಚವಾಗಿ ಬಿದ್ದಿರುತ್ತವೆ. ಮೊದಲ ಮಳೆಗೆ ಸಂಪೂರ್ಣವಾಗಿ ಹರಿದುಬಂದು ಜಲ ಮೂಲ ಸೇರುತ್ತವೆ. ಈ ಪ್ರವಾಸೋದ್ಯಮದ ಜತೆಗೆ ಪ್ರಮುಖವಾಗಿ ರಸ್ತೆಯ ಬದಿಗಳಲ್ಲಿ ಪ್ಲಾಸ್ಟಿಕ್ ಅಥವಾ ಕಸ ಎಸೆಯದಂತೆ ಸೂಚನಾ ಫಲಕಗಳನ್ನು ಅಲ್ಲಲ್ಲಿ ಅಳವಡಿಸುವುದು ತುಂಬಾ ಉಪಯುಕ್ತ. ದಂಡವನ್ನೂ ವಿಧಿಸಬೇಕು.
ಹುಲಿಮನೆ ಬಿಂದು, ಮದೆ ಗ್ರಾಮ

ಕೊಡಗಿನ ಅಭಿವೃದ್ಧಿಗೆ ಪ್ರವಾಸೋದ್ಯಮ ಪೂರಕವಾಗಿದೆ. ಆದರೆ ಇಲ್ಲಿ ಬರುವಂಥ ಪ್ರವಾಸಿಗರು ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುವುದರೊಂದಿಗೆ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದು ಪರಿಸರ ಮಾಲಿನ್ಯ ಮಾಡುತ್ತಿದ್ದಾರೆ. ಇನ್ನೊಂದೆಡೆ ಪವಿತ್ರ ಕ್ಷೇತ್ರಗಳನ್ನು ಕೂಡ ಮೋಜು ಮಸ್ತಿಯ ತಾಣವೆಂಬAತೆ ಪರಿಗಣಿಸುತ್ತಿದ್ದಾರೆ. ಈ ಮೂಲಕ ಕೊಡಗಿನ ನಿವಾಸಿಗಳ ಭಾವನೆಗೆ ಧಕ್ಕೆ ತರುವಂಥÀ ಕೆಲಸ ನಡೆಯುತ್ತಿದೆ.
ದಿನೇಶ್ ಎ., ಮೈತಾಡಿ, ವಿರಾಜಪೇಟೆ.

ಜಿಲ್ಲೆಯಲ್ಲಿ ಸಮತೋಲಿತ ಪರಿಸರ ನಿರ್ಮಾಣಕ್ಕೆ ಮುಂದಾಗಬೇಕು. ಪರಿಸರ ಸ್ನೇಹಿ ಪ್ರವಾಸೋದ್ಯಮದಿಂದ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿ ಸಾಧಿಸಲು ಸಾಧ್ಯ. ಪ್ರವಾಸಿಗರಿಗೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿದಾಗ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಜಿಲ್ಲೆಯ ಪವಿತ್ರ ಸ್ಥಳಗಳು ಸೇರಿದಂತೆ ಪ್ರವಾಸಿ ಸ್ಥಳಗಳಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ಇರಬೇಕು.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ

ಜಿಲ್ಲೆಯಲ್ಲಿ ಪರಿಸರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ವಾರಾಂತ್ಯದಲ್ಲಿ ಜಿಲ್ಲೆಗೆ 1 ಲಕ್ಷ ಜನರು ಭೇಟಿ ನೀಡುತ್ತಾರೆ. ಆದ್ದರಿಂದ ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು.
ತಲಕಾವೇರಿ, ಭಾಗಮಂಡಲ ಕ್ಷೇತ್ರವನ್ನು ಪವಿತ್ರ ಸ್ಥಳವೆಂದು ಪ್ರಕಟಿಸಬೇಕು, ಆ ನಿಟ್ಟಿನಲ್ಲಿ ಪ್ರವಾಸಿಗರಿಗೆ ಮಾಹಿತಿ ದೊರೆಯಬೇಕು. ಪ್ರವಾಸಿಗರ ಜೊತೆ ಸೌಜನ್ಯದಿಂದ ನಡೆದುಕೊಂಡಲ್ಲಿ ಅವರು ಮತ್ತೊಬ್ಬರಿಗೆ ಕೊಡಗಿನ ಮಹತ್ವದ ಬಗ್ಗೆ ಹೇಳುತ್ತಾರೆ.
ಬಿ.ಆರ್. ನಾಗೇಂದ್ರ ಪ್ರಸಾದ್, ಅಧ್ಯಕ್ಷ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್

ಕೊಡಗು ಜಿಲ್ಲೆಗೆ ಪ್ರತಿ ವರ್ಷ ಸುಮಾರು 47 ರಿಂದ 50 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಕೊಡಗು ಜಿಲ್ಲೆಯ ಕಲೆ, ಪರಂಪರೆ ಸಾಂಪ್ರಾದಾಯಗಳ ಜೊತೆ ಇಲ್ಲಿನ ಅತಿಥ್ಯಕ್ಕೆ ಪ್ರವಾಸಿಗರು ಹೆಚ್ಚು ಆಕರ್ಷಿತಾರಾಗುತ್ತಾರೆ. ಪ್ರವಾಸೋದ್ಯಮ ಇಲಾಖೆಯ ಅನುದಾನದಿಂದ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ರೂ.2813.9 ಲಕ್ಷಗಳ ಅನುದಾನದಲ್ಲಿ ವಿವಿಧ ಕಾಮಗಾರಿ ಹಾಗೂ ಮೂಲಭೂತ ಸೌಕರ್ಯ ನಿರ್ಮಿಸಲಾಗಿದೆ. ಸುಸ್ಥಿರ ಪ್ರವಾಸೋದ್ಯಮ ಮತ್ತು ಪ್ರವಾಸೋದ್ಯಮ ಕುರಿತ ಭಿತ್ತಿಪತ್ರ ಬಿಡುಗಡೆ ಮಾಡಲಾಗಿದ್ದು, ‘ಶೂನ್ಯ ತ್ಯಾಜ್ಯ ಪ್ರವಾಸ ಜಾಗೃತಿ’ಗೂ ಈಗಾಗಲೇ ಚಾಲನೆ ನೀಡಲಾಗಿದೆ.
ಅನಿತಾ ಭಾಸ್ಕರ್, ಉಪ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ

ಸುಸ್ಥಿರ ಪ್ರವಾಸೋದ್ಯಮದ ಬಗ್ಗೆ ಜಿಲ್ಲೆಯ ಪ್ರವಾಸೋದ್ಯಮಿಗಳು ಆಸಕ್ತಿ ತೋರಿಸಬೇಕಿದೆ. ಕೊಡಗಿನ ರಸ್ತೆ ರಸ್ತೆಗಳಲ್ಲಿ ಮದ್ಯ ಸೇವಿಸಿ ಎಲ್ಲೆಂದರಲ್ಲಿ ಬಾಟಲ್, ಪ್ಲಾಸ್ಟಿಕ್ ಬಿಸಾಡಿ ಪ್ರವಾಸಿಗರು ಹೋಗುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಜನರು ನೆಮ್ಮದಿ ಕಳೆದುಕೊಂಡಿದ್ದಾರೆ ಇದರ ಬಗ್ಗೆ ಸಂಬAಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಾಗಿದೆ
ವಿನೀಲ್, ಜನಪರ ಸಂಘ, ಮಾಲ್ದಾರೆ

ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಕೊಡಗು ಪ್ರವಾಸೋದ್ಯಮಕೇಂದ್ರವಾಗಿ ಅಭಿವೃದ್ಧಿ ಹೊಂದಬೇಕು. ಆದರೆ ಪ್ರಕೃತಿ ನಾಶವಾಗಬಾರದು. ಪರಿಸರ ಪೂರಕ ಪ್ರವಾಸೋದ್ಯಮಕ್ಕೆ ಒತ್ತು ನೀಡಬೇಕು. ಪ್ರವಾಸಿಗರನ್ನು ಸೆಳೆಯುವ ಯೋಜನೆಗಳು ರೂಪಿಸಬೇಕು. ಉತ್ತಮ ರಸ್ತೆಗಳು ನಿರ್ಮಾಣವಾಗಬೇಕು.
ವೈ.ಎಸ್. ಸತೀಶ್, ಕೃಷಿಕ. ಯಡೂರು ಗ್ರಾಮ

ಕೊಡಗಿನಲ್ಲಿ ಜವಾಬ್ದಾರಿಯುತ ಮತ್ತು ಸುಸ್ಥಿರ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿವೆ. ಪರಿಸರ ಸೂಕ್ಷö್ಮ ಜಿಲ್ಲೆಯಾಗಿರುವ ಕೊಡಗಿನ ಪಾಲಿಗೆ ಇದು ಇಂದಿನ ಅಗತ್ಯವೂ ಹೌದು. ಈ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ. ಕೃಷಿ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿ ಕೊಡಗಿನಲ್ಲಿ ಭತ್ತದ ಗದ್ದೆಗಳಿಗೆ ಪುನಶ್ಚೇತನ ಕೊಡುವ ಕೆಲಸವನ್ನೂ ಪ್ರಾರಂಭಿಸಿದ್ದೇವೆ.
ಡಾ. ಸಿ.ಜಿ. ಕುಶಾಲಪ್ಪ, ಅಧ್ಯಕ್ಷ, ಕೊಡಗು ಕೃಷಿ ವಿಜ್ಞಾನ ವೇದಿಕೆ

ಕೊಡಗು ಜಿಲ್ಲೆ ಪ್ರಕೃತಿ ಸೌಂದರ್ಯದ ತವರೂರು. ಇದನ್ನು ಮುಂದಿನ ಪೀಳಿಗೆಗೆ ಉಳಿಸಬೇಕಾದರೆ ನಾವು ನೈಸರ್ಗಿಕ ಸಂಪತ್ತಿಗೆ ಧಕ್ಕೆ ಆಗದಂತೆ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕು. ರಸ್ತೆಗಳ ಅಭಿವೃದ್ಧಿಯೊಂದಿಗೆ ಅರಣ್ಯ ಸಂಪತ್ತನ್ನು ಉಳಿಸಬೇಕು. ಆಗ ದಕ್ಷಿಣ ಕಾಶ್ಮೀರವೆಂಬ ಹೆಸರು ಸಾರ್ಥಕವನಿಸುತ್ತದೆ.
ವಿದ್ಯಾ ಹಂಸರಾಜ್, ಶಿಕ್ಷಕಿ, ಶನಿವಾರಸಂತೆ

ಕೊಡಗಿನಲ್ಲಿ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಾ ಇದೆ. ಆದರೆ ಪ್ರವಾಸಿಗರು ಕೊಡಗಿನ ಸೌಂದರ್ಯ ಸವಿಯುವುದರ ಜತೆಗೆ ಮೋಜು-ಮಸ್ತಿಯಿಂದ ಸ್ವಚ್ಛತೆ ಎಂಬುದು ಮರೆಯಾಗುತ್ತಿದೆ. ಇದರಿಂದ ಪರಿಸರದ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತಿದೆ. ಹೀಗಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರವಾಸೋದ್ಯಮಿಗಳ ಮೇಲಿದೆ.
ರಕ್ಷಿತ್, ಶಿವರಳ್ಳಿ ಗ್ರಾಮ, ಶನಿವಾರಸಂತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net