ಮರಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

1Muragod1
Published on

ಮುರಗೋಡ: ಇಲ್ಲಿನ ಮುರಗೋಡ-ಸೊಗಲ ಮತ್ತು ಮುರಗೋಡ-ಬೈಲಹೊಂಗಲ ಮುಖ್ಯರಸ್ತೆ ಪಕ್ಕದಲ್ಲಿ ನೂರಾರು ವರ್ಷಗಳ ಹಿಂದೆ ನೆಟ್ಟಿದ್ದ ಆಲದ ಮರ ಹಾಗೂ ಬೇವಿನಮರಗಳಿಗೆ ದುಷ್ಕರ್ಮಿಗಳು ಬೆಂಕಿ ಹಾಕಿ ಮರಗಳನ್ನು ಧರೆಗುರುಳಿಸಿದ್ದಾರೆ.

ಗಿಡಗಳಿಗೆ ಬೆಂಕಿ ಹಚ್ಚಿದ ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದರು.

ಇದರಿಂದ ಮುಂದಾಗಬಹುದಾಗಿದ್ದ ಅನಾಹುತ ತಪ್ಪಿಸಿದರು. ಮರಗಳನ್ನು ನಾಶಪಡಿಸಿದವರನ್ನು ಕೂಡಲೇ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net