ಚಿನ್ನದ ಸರ ಕಿತ್ತು ದುಷ್ಕರ್ಮಿ ಪರಾರಿ

IMG-20241010-WA0180
ಹೊಳೆನರಸೀಪುರ ಪಟ್ಟಣದ ಬನಶಂಕರಿ ಬಡಾವಣೆಯ ದೇವಕಿ ಮನೆಗೆ ಭೇಟಿ ನೀಡಿ ಪರಿಶೀಲಿಸುಸುತ್ತಿರುವ ಪೊಲೀಸ್ ತಂಡ.
Published on

ಹೊಳೆನರಸೀಪುರ: ಪಟ್ಟಣದ ದೇವಾಂಗ ಬಡಾವಣೆಯ ಬನಶಂಕರಿ ಬೀದಿ ನಿವಾಸಿ ದೇವಸ್ಥಾನಕ್ಕೆ ತೆರಳಿ ಮನೆಗೆ ಹಿಂತಿರುತ್ತಿದ್ದ ವೇಳೆ ಅವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಿತ್ತು ದುಷ್ಕರ್ಮಿ ಪರಾರಿಯಾಗಿದ್ದಾನೆ.

ದೇವಕಿ ಅವರು ಚೌಡೇಶ್ವರಿ ದೇವಾಲಯದಲ್ಲಿ ಗುರುವಾರ ಮಧ್ಯಾಹ್ನ ಪೂಜೆ ಮುಗಿಸಿ ಮನೆಗೆ ಬಂದಾಗ ಹಿಂದಿನಿಂದ ಬಂದ ಯುವಕನೊಬ್ಬ 30 ಗ್ರಾಂ ತೂಕದ ಮಾಂಗಲ್ಯ ಸರ ಕಿತ್ತು ಬೈಕಿನಲ್ಲಿ ಪರಾರಿ ಆಗಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ವಿಷಯ ತಿಳಿದ ತಕ್ಷಣ ನಗರ ಠಾಣೆ ಪಿಎಸ್‌ಐ ಅಭಿಜಿತ್, ಅಪರಾಧ ವಿಭಾಗದ ರಂಗಸ್ವಾಮಿ, ಮಂಜೇಗೌಡ ಸ್ಥಳಕ್ಕೆ ತೆರಳಿ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಪಟ್ಟಣದಲ್ಲಿ ದಿನೆ ದಿನೇ ಕಾನೂನು ಸುವ್ಯವಸ್ಥೆ, ಸಂಚಾರ ವ್ಯವಸ್ಥೆ ಹದಗೆಟ್ಟಿದೆ. ಕಳ್ಳತನ ಹೆಚ್ಚಾಗುತ್ತಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಕಾನೂನು-ಸುವ್ಯವಸ್ಥೆ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net