

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಭರಮದೇವರ ದೇವಸ್ಥಾನದಲ್ಲಿ ಭಾನುವಾರ ತೊಟ್ಟಿಲೋತ್ಸವ ಕಾರ್ಯಕ್ರಮ ಸಂಭ್ರಮದಿಂದ ಜರುಗಿತು.
ಬೆಳಗ್ಗೆಯಿಂದ ಭರಮ ದೇವರ ಗದ್ದುಗೆಗೆ ಮಹಾಭಿಷೇಕ, ವಿಶೇಷ ಪೂಜೆ ಕಾರ್ಯಕ್ರಮ ನೆರವೇರಿದವು. ಬಳಿಕ ಮಹಿಳೆಯರು ತೊಟ್ಟಿಲಿಗೆ ಅಲಂಕರಿಸಿ, ಸೋಬಾನ ಪದ ಹಾಡುತ್ತ ಭರಮ ದೇವರ ತೊಟ್ಟಿಲೋತ್ಸವ ಜರುಗಿತು. ನಂತರ ಡೊಳ್ಳಿನ ಪ್ರದರ್ಶನ ನಡೆಯಿತು.
ಅರ್ಚಕ ಹನುಮಂತ ಪೂಜಾರಿ, ಭೀಮಪ್ಪ ಬಾಗೆಣ್ಣವರ, ಸಿದ್ದಪ್ಪ ಇಚೇರಿ, ಮಹಾದೇವ ಕುಳ್ಳೊಳ್ಳಿ, ಮುರಿಯಪ್ಪ ಇಚೇರಿ, ನಿಂಗಪ್ಪ ದೇವಕಾತಿ, ಮಹಾದೇವ ಈಚೇರಿ, ಸಿದ್ದಪ್ಪ ಪಾಟೀಲ, ಮಲ್ಲಪ್ಪ ಪಡೋಲಕರ, ತಿಪ್ಪಣ್ಣ ಲಾಯಗೋಳ, ಮಾಯವ್ವ ಈಚೇರಿ, ಲಕ್ಕವ್ವ ಲಾಯಗೋಳ, ತಮ್ಮಣ್ಣ ಹುಲಗಬಾಳಿ ಇತರರಿದ್ದರು.