ಅಪ್ರಾಪ್ತರಿಗೆ ದಂಡ ವಿಧಿಸಿದ ಕೋರ್ಟ್

crime
Published on

ಹುಬ್ಬಳ್ಳಿ: ಸಂಚಾರ ನಿಯಮ ಉಲ್ಲಂಘಿಸಿದ ನಾಲ್ವರು ಅಪ್ರಾಪ್ತರಿಗೆ ಇಲ್ಲಿಯ ಜೆಎಂಎಸ್​ಸಿ 3ನೇ ನ್ಯಾಯಾಲಯವು ದಂಡ ವಿಧಿಸಿದೆ. 19, 22 ಹಾಗೂ 24ರಂದು ಅಪ್ರಾಪ್ತರಿಗೆ ಕ್ರಮವಾಗಿ 25 ಸಾವಿರ ರೂ. ಹಾಗೂ 21ರಂದು 26 ಸಾವಿರ ರೂ. ದಂಡ ವಿಧಿಸಿದೆ.

ಪಾಲಕರು ಮಕ್ಕಳಿಗೆ ಓಡಾಡಲು ವಾಹನಗಳನ್ನು ಕೊಡುತ್ತಿದ್ದು, ಪೊಲೀಸರು ಕೂಡ ಪಾಲಕರಿಗೆ ತಿಳಿಹೇಳಿದರೂ ಕೇಳುತ್ತಿಲ್ಲ.

ಇತ್ತೀಚೆಗೆ ಈ ಪ್ರಕರಣಗಳ ಸಂಖ್ಯೆ ಅವಳಿ ನಗರದಲ್ಲಿ ಹೆಚ್ಚುತ್ತಿದೆ. ಪರಿಣಾಮ ಕೋರ್ಟ್ ದಂಡ ವಿಧಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net