ಮಹಿಳೆ ಸ್ವಾವಲಂಬಿಯಾದಾಗ ದೇಶದ ಪ್ರಗತಿ ಸಾಧ್ಯ

GJD GOVT MAHILA
Published on

ಗಜೇಂದ್ರಗಡ: ವಿದ್ಯಾರ್ಥಿನಿಯರು ತಮ್ಮ ಸಾಧನೆಯತ್ತ ಗಮನಹರಿಸಿ ಗುರಿ ತಲುಪಲು ಎದುರಾಗುವ ಅಡೆತಡೆಗಳನ್ನು ದಾಟಿ ಸಾಧನೆಯ ಶಿಖರವೇರುವತ್ತ ಗಮನ ಹರಿಸಬೇಕು ಎಂದು ಕೊಪ್ಪಳ ಮಹಿಳಾ ಅಭಿವೃದ್ಧಿ ನಿಗಮದ ನಿರೀಕ್ಷಕಿ ಪೂರ್ಣಿಮಾ ಯೇಳುಬಾವಿ ಹೇಳಿದರು.

ಪಟ್ಟಣದ ಬಿಎಸ್​ಎಸ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಿದಾಗಲೇ ದೇಶದ ಪ್ರಗತಿಯಾಗುತ್ತದೆ. ಮಹಿಳೆಯರು ಆರ್ಥಿಕ ಪ್ರಗತಿಗೆ ಎದುರಾಗುವ ತೊಂದರೆಗಳನ್ನು ನಿವಾರಿಸಿಕೊಳ್ಳುವ ವಿಧಾನ ಅರಿತು ಪ್ರಗತಿ ಸಾಧಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಮಹೇಂದ್ರ ಜಿ. ಮಾತನಾಡಿದರು. ಮಹಿಳಾ ದೌರ್ಜನ್ಯ ತಡೆ ಘಟಕದ ಸಂಚಾಲಕಿ ಜೀವಿತಾ, ಉಪನ್ಯಾಸಕರಾದ ಎಸ್.ಎಚ್. ಪವಾರ, ಸಿದ್ದೇಶ ಕೆ., ವಿಶ್ವನಾಥ ಕೆ.ಎಸ್., ಗೀತಾ ಅಂಗಡಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net