

ಗುಳೇದಗುಡ್ಡ : ಕ್ಷೇತ್ರದ ಗ್ರಾಮಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಹಂತ ಹಂತವಾಗಿ ಅನುದಾನ ತರಲಾಗುತ್ತಿದ್ದು, ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಕನಸನ್ನು ನನಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಕಷ್ಟು ಅನುದಾನ ನೀಡುತ್ತಿದ್ದಾರೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ತಾಲೂಕಿನ ಹಂಗರಗಿ ಗ್ರಾಮದಲ್ಲಿ ಪಿಡಬ್ಲೂಡಿ ಹಾಗೂ ಆರ್‌ಡಿಪಿಆರ್ ಯೋಜನೆಯಡಿಲ್ಲಿ ತಲಾ 10 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ನಿರ್ಮಾಣಕ್ಕೆ ಹಾಗೂ ಸಮುದಾಯ ಭವನಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಬಾದಾಮಿ ಮತಕ್ಷೇತ್ರ ಅಭಿವೃದ್ಧಿಪಡಿಸಲು ಇನ್ನಷ್ಟು ಅನುದಾನವನ್ನು ತರಲಾಗುತ್ತಿದೆ. ಈಗಾಗಲೇ ಕ್ಷೇತ್ರದ ಗ್ರಾಮಗಳ ಅಭಿವೃದ್ಧಿಗೆ ಪೂರಕವಾದ ಅನೇಕ ಕಾಮಗಾರಿಗಳು ಜಾಲ್ತಿಯಲ್ಲಿವೆ ಎಂದರು.
ಸೋಮನಕೊಪ್ಪದ ರಾಮನಂದ ಸ್ವಾಮೀಜಿ, ಗ್ರಾ.ಪಂ. ಅಧ್ಯಕ್ಷೆ ರುಕ್ಮವ್ವ ಪಾದರಿ, ಮುಖಂಡರಾದ ಪ್ರಕಾಶ ಮೇಟಿ, ಮಹೇಶ ಹೊಸಗೌಡರ, ಪ್ರಮೋದ ಕವಡಿಮಟ್ಟಿ, ಕೀರಪ್ಪ ತಳವಾರ, ರಾಚಯ್ಯ ಹಾದಿಮನಿ, ಹನಮಂತ ಬಿಳಕಲ್ಲ, ಮಲ್ಲಪ್ಪ ಕುರಿ, ಬಸವರಾಜ ಹಾನಾಪುರ ಇದ್ದರು.