

ವಿಜಯಪುರ: ಭಾರತ ದೇಶ ಭವ್ಯ ಸಂಸತಿಯ ದೇಶ. ಇಲ್ಲಿನ ಹಬ್ಬಗಳು ದೇಶದ ಸಂಸತಿ ಸಾರುತ್ತವೆ ಎಂದು ಬಸವರಾಜ ರೊಳ್ಳಿ ಹೇಳಿದರು.
ನಾಗಠಾಣ ಗ್ರಾಮದ ಶಿವಾವತಾರಿ ಸಿದ್ಧಾರೂಢ ಶಿಕ್ಷಣ ಸಂಸ್ಥೆಯ ಚಂದ್ರಶೇಖರ ಮಹಾರಾಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ನವರಾತ್ರಿ ದಸರಾ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ನವರಾತ್ರಿ ಉತ್ಸವ ಮಕ್ಕಳಲ್ಲಿ ದೇವಿಯ ಮಹತ್ವದ ಜತೆಗೆ ಸಾಂಪ್ರದಾಯಿಕ ಬಗ್ಗೆ ತಿಳಿಸುತ್ತದೆ. ಹಬ್ಬಗಳು ಮಕ್ಕಳ ಕಲಿಕೆಗೆ ಹಾಗೂ ದೇಶದ ಸಂಸತಿಗೆ ಪೂರಕವಾಗಿವೆ ಎಂದರು.
ನವರಾತ್ರಿ ಉತ್ಸವದ ಅಂಗವಾಗಿ ನಡೆದ ವೇಷಭೂಷಣ ಕಾರ್ಯಕ್ರಮ ನಡೆಯಿತು. ಮುಖ್ಯಶಿಕ್ಷಕ ಆರ್.ಎಲ್. ಚಾಕರೆ, ಶಿಕ ಆರ್.ಎಸ್. ಲೋಣಿ, ಎಸ್.ಆರ್. ಅಂಕಲಗಿ, ಪಿ.ಜೆ. ಜೇವೂರ, ಕೆ.ಎ. ಅಂಕಲಗಿ, ಜಿ.ಆರ್. ಗದ್ಯಾಳ, ಎ.ಎಸ್. ಔರಸಂಗ, ಎಸ್.ವಿ. ಹಂಡಿ ಮತ್ತಿತರರಿದ್ದರು.
ನಾಗಠಾಣ ಗ್ರಾಮದ ಶ್ರೀ ಚಂದ್ರಶೇಖರ ಮಹಾರಾಜ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಮಕ್ಕಳಿಂದ ಛದ್ಮವೇಷ ಗಮನ ಸೆಳೆಯಿತು.