ನಾಡಿನ ಗೌರವ ಹೆಚ್ಚಿಸಿದ ವಿಜಯರತ್ನ

29blh5 vijayaratna
filter: 0; fileterIntensity: 0.0; filterMask: 0; hdrForward: 0; highlight: true; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 40;
Published on

ಬೈಲಹೊಂಗಲ: ವಿಆರ್​ಎಲ್​ ಸಮೂಹದ ಮೂಲಕ ಪ್ರಖ್ಯಾತಿ ಗಳಿಸಿದ ಉದ್ಯಮಿ ಡಾ.ವಿಜಯ ಸಂಕೇಶ್ವರ ಸಾರಥ್ಯದ ವಿಜಯವಾಣಿ ದಿನಪತ್ರಿಕೆ ಬೈಲಹೊಂಗಲದ ಉದ್ಯಮಿ ಸಿದ್ದರಾಮ ಲಿಂಗಶೆಟ್ಟಿ ಅವರಿಗೆ ವಿಜಯರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದು, ನಾಡಿನ ಗೌರವ ಹೆಚ್ಚಿಸಿದೆ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.

ಪಟ್ಟಣದ ಬೆಳಗಾವಿ ರಸ್ತೆಯ ಕರ್ರೀಲಿವ್​ ಹೋಟೆಲ್​ನಲ್ಲಿ ಬೈಲಹೊಂಗಲದ ಬಸವೇಶ್ವರ ಟ್ರೇಡರ್ಸ್​, ಸಾಗರ ಇಲೆಕ್ಟ್ರಿಕಲ್ಸ್​ ಮಾಲೀಕ, ಉದ್ಯಮಿ ಸಿದ್ದರಾಮ ಲಿಂಗಶೆಟ್ಟಿ ಅವರಿಗೆ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ವಿಜಯರತ್ನ ಪ್ರಶಸ್ತಿ ನೀಡಿದ ಪ್ರಯುಕ್ತ 1984ರ ಪ್ರೌಢಶಾಲೆಯ ಗೆಳೆಯರ ಬಳಗದಿಂದ ಭಾನುವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸಿದ್ಧರಾಮ ಲಿಂಗಶೆಟ್ಟಿ ಹಾಗೂ ಅವರ ಪತ್ನಿ ಕಸ್ತೂರಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಪರಿಶ್ರಮಿಯಾದ ಸಿದ್ದರಾಮ ಬಡತನ ನುಂಗಿ ಹೆಸರಾಂತ ಉದ್ಯಮಿಯಾಗಿರುವುದು ಯುವಜನರಿಗೆ ಮಾದರಿಯಾಗಿದೆ ಎಂದರು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಲಿಂಗಶೆಟ್ಟಿ ಚಿಕ್ಕ ವ್ಯವಹಾರ ಪ್ರಾರಂಭಿಸಿ ಪ್ರಸ್ತುತ ನಮ್ಮ ಭಾಗದಲ್ಲೇ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದು, ಅಮೋ ಸಾಧನೆ ಎಂದರು.

ವಿಜಯವಾಣಿ ವರದಿಗಾರ ಬಸವರಾಜ ಕಲಾದಗಿ ಮಾತನಾಡಿದರು. ಶಾಸಕ ಮಹಾಂತೇಶ ಕೌಜಲಗಿ ಲಿಂಗಶೆಟ್ಟಿಗೆ ಶುಭಾಶಯ ತಿಳಿಸಿದರು. ಜೆಡಿಎಸ್​ ಜಿಲ್ಲಾಧ್ಯ ಶಂಕರ ಮಾಡಲಗಿ, ತಾಲೂಕು ಪತ್ರಕರ್ತರ ಸಂದ ಅಧ್ಯ ಮಹಾಂತೇಶ ತುರಮರಿ, ಪುರಸಭೆ ಮಾಜಿ ಅಧ್ಯ ಬಸವರಾಜ ಜನ್ಮಟ್ಟಿ, ಬಿಜೆಪಿ ಮಂಡಲಾಧ್ಯ ಸುಭಾಷ ತುರಮರಿ, ವಿರೂಪಾ ವಾಲಿ, ಡಾ.ಸುರೇಶ ಯಳ್ಳೂರ, ಮಹಾಬಳೇಶ್ವರ ಬೋಳಣ್ಣವರ, ಸಾಗರ ಲಿಂಗಶೆಟ್ಟಿ, ಸುಧಾ ಮಲಬಾದಿ, ಯೋಗೀಶ ಮಲಬಾದಿ, ಲೆಕ್ಕ ಪರಿಶೋಧಕ ಎಸ್​.ಬಿ.ಬಿಳ್ಳೂರ, ಬಿ.ಬಿ.ಸಂಗನಗೌಡರ, ರವಿ ಪರವಿನಾಯ್ಕರ, ಆನಂದಕುಮಾರ ಮೂಗಬಸವ, ರುದ್ರಪ್ಪ ಮೂಲಿಮನಿ, ಶ್ರೀಕಾಂತ ಶಿರಹಟ್ಟಿ, ಸುರೇಶ ಕುಲಕರ್ಣಿ, ಸಿದ್ದರಾಮ ಶೀಗಿಹಳ್ಳಿ, ಅಶೋಕ ಶಿರಸಂಗಿ, ಗಿರಿಜಾ ಹಿರೇಮಠ, ವಿಜಯಾ ಪಟ್ಟಣಶೆಟ್ಟಿ, ಜಯಶ್ರೀ ಖನ್ನಿನಾಯ್ಕರ, ಸುಶೀಲಾ ಕಡಕೋಳ, ಪಾರ್ವತಿ ಕಲಗೌಡರ, ಶಿವಲಿಂಗ ಗಾಳಿಮರಡಿ, ಶಿಕ ಐ.ಎಸ್​.ಕಲಗೌಡ್ರ, ಶಿಕಿ ಡಿ.ವಿ.ಗೌಡಪ್ಪನವರ, ಪತ್ರಕರ್ತ ಮಹಾಂತೇಶ ರಾಜಗೋಳಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net