ಹಿಂದುಗಳೆಲ್ಲ ಒಗ್ಗಟ್ಟಾದರೆ ಮಾತ್ರ ದೇಶದ ಉಳಿವು

26 nlt-1
ನಾಲತವಾಡದ ಬಸವೇಶ್ವರ ವೃತ್ತದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಹಲ್ಗಾಮ್‌ದಲ್ಲಿ ಮೃತಪಟ್ಟವರಿಗೆ ಮೋಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು.
Published on

ನಾಲತವಾಡ: ಹಿಂದುಗಳೆಲ್ಲ ಒಳಪಂಗಡಗಳ ಭೇದಭಾವ ಮರೆತು ಒಂದಾಗುವ ತನಕ ಭಾರತೀಯರಿಗೆ ಉಳಿಗಾಲ ಇಲ್ಲ ಎಂದು ನಿವೃತ್ತ ಯೋಧ ಪಿ.ಜಿ. ಬಿರಾದಾರ ಹೇಳಿದರು.

ಕಾಶ್ಮೀರದ ಪಹಲ್ಗಾಮ್‌ದಲ್ಲಿ ಭಾರತದ ಹಿಂದು ನಾಗರಿಕರ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿ ಖಂಡಿಸಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಮೋಂಬತ್ತಿ ಬೆಳಗಿಸಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

25 ವರ್ಷಗಳ ಹಿಂದೆಯೇ ಪಾಪಿ ಪಾಕಿಸ್ತಾನ್‌ವನ್ನು ತುಳಿಯುವ ಅವಕಾಶವಿದ್ದರೂ ಹೊಲಸು ರಾಜಕಾರಣದಿಂದ ಉಳಿದುಕೊಂಡಿದ್ದಾರೆ. ಅವರ ಹುಟ್ಟಡಗಿಸುವ ತನಕ ಸರ್ಕಾರ ವಿಶ್ರಮಿಸಬಾರದು ಎಂದರು.

ಬಿಜೆಪಿ ಮುಖಂಡ ಮುತ್ತು ಸಾಹುಕಾರ ಅಂಗಡಿ ಮಾತನಾಡಿ, ಕಾಶ್ಮೀರದಲ್ಲಿ ನಡೆದ ಉಗ್ರಗಾಮಿಗಳ ದಾಳಿಗೆ 26 ಅಮಾಯಕರ ಹತ್ಯೆಯಾಗಿದೆ. ಹಲವಾರು ಜನರು ಗಾಯಗೊಂಡಿದ್ದಾರೆ. ಉಗ್ರಗಾಮಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪಣ್ಣ ಬಿರಾದಾರ, ಸಂಗಮೇಶ ಮೇಟಿ, ಎಂ.ಎಸ್. ಸಜ್ಜನ ಮಾತನಾಡಿದರು.

ದಾಸಿಮಯ್ಯ ಬಂಟನೂರ ದೇಶಭಕ್ತಿ ಗೀತೆ ಹಾಡಿದರು.

ಬಸನಗೌಡ ಎಸ್. ಪಾಟೀಲ, ಕೆ.ಆರ್. ಬಿರಾದಾರ, ಮಲ್ಲಿಕಾರ್ಜುನ ಚಿನಿವಾರ, ಮಣಿಕಂಠ ಮಲ್ಲು ಗಂಗನಗೌಡ್ರ, ಮಹಾಂತೇಶ ಗಂಗನಗೌಡ್ರ, ಸಂಗಮೇಶ ಮೇಟಿ, ಮಹಾಂತೇಶ ಗಡೇದ, ರಾಜು ಚಿನಿವಾಲರ, ವೀರಪ್ಪಣ್ಣ ಚಿನಿವಾಲರ, ಸಂಗಣ್ಣ ದುದ್ದಗಿ, ರವಿ ಸೀರಿ, ಸಿದ್ದಪ್ಪ ಅಂಗಡಿ, ಚೆನ್ನಪ್ಪಗೌಡ ಹಾದಿಮನಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net