ಪ್ರಾಂತ್ಯವಾರು ಹಂಚಿಹೋಗಿದ್ದ ನಾಡು ಒಟ್ಟುಗೂಡಿ ಕರ್ನಾಟಕವಾಯ್ತು

IMG-20251106-WA0030
Published on

* ಸಾಹಿತಿ ಡಾ.ವಿಜಯ್​ ರಾಂಪುರ ಹೇಳಿಕೆ

* ಕನ್ನಡ ಉತ್ಸವಕ್ಕೆ ಚಾಲನೆ

ಬಿಡದಿ

ಪ್ರಪಂಚದಲ್ಲಿ ಭಾಷೆಗಾಗಿ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ ಎಂದರೆ ಅದು ಕನ್ನಡಕ್ಕಾಗಿ ಮಾತ್ರ. ಇಂತಹ ಕನ್ನಡ ಭಾಷೆ 2,500 ವರ್ಷಗಳ ಇತಿಹಾಸ ಹೊಂದಿದ್ದು, ಪ್ರಾಂತ್ಯವಾರು ಹಂಚಿಹೋದಾಗ ನಾಡನ್ನು ಅನೇ ಸಾಹಿತಿಗಳು ಸೇರಿ ಮತ್ತೇ ಒಟ್ಟುಗೂಡಿಸಿದ ಪ್ರತಿಫಲವೇ ಕರ್ನಾಟಕ ಏಕೀಕರಣ ಎಂದು ಸಾಹಿತಿ ಡಾ.ವಿಜಯ್​ ರಾಂಪುರ ಹೇಳಿದರು.

ತಿಮ್ಮೇಗೌಡನದೊಡ್ಡಿಯ ಎಚ್​.ಎನ್​.ಅನಂತಕುಮಾರ್​ ಮತ್ತು ಬಸವೇಶ್ವರ ಪದವಿ ಕಾಲೇಜುಗಳಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಕನ್ನಡ ಉತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಪ್ರಾಂತ್ಯಗಳನ್ನು ಒಗ್ಗೂಡಿಸಿ ರಾಜ್ಯ ಸ್ಥಾಪಿಸಬೇಕೆಂಬ ಆಶಯದಿಂದ ಹುಯಿಲಗೋಳ ನಾರಾಯಣರಾವ್​ ಅವರು ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಗೀತೆ ರಚಿಸಿರು. ಕರ್ನಾಟಕ ಏಕೀಕರಣಕ್ಕಾಗಿ ಎಲ್ಲರನ್ನೂ ಒಂದುಗೂಡಿಸಿದ ಕಾರಣ ಆಲೂರು ವೆಂಕಟರಾವ್​ ಅವರನ್ನು ಕರ್ನಾಟಕ ಕುಲಪುರೋಹಿತ ಎಂದು ಸ್ಮರಿಸುತ್ತಿದ್ದೇವೆ.

ಇವರಂತೆ ಇನ್ನೂ ಅನೇಕ ಸಾಹಿತಿಗಳು, ಕನ್ನಡ ಭಾಷಿಕರು, ಸಂ&ಸಂಸಂಸ್ಥೆಗಳು ಸೇರಿ ಹಲವರು ಏಕೀಕರಣಕ್ಕೆ ಶ್ರಮಿಸಿದ್ದಾರೆ. ಸುಮಾರು 50 ದೇಶಗಳಲ್ಲಿ ಕನ್ನಡ ಸಂಗಳಿರುವುದು ನಮ್ಮ ಭಾಷೆಗಿರುವ ಜನಮನ್ನಣೆಯನ್ನು ತಿಳಿಸುತ್ತದೆ. ಆದರು ಏಕೀಕರಣ ಸಂದರ್ಭದಲ್ಲಿ ಕನ್ನಡ ಭಾಷೆಯನ್ನಾಡುವ ಸೊಲ್ಲಾಪುರ, ಜತ್ತ, ಕಾಸರಗೂಡು ಇನ್ನೂ ಅನೇಕ ಪ್ರದೇಶಗಳನ್ನು ಕಳೆದುಕೊಂಡಿದ್ದೇವೆ. ಈ ಪ್ರದೇಶಗಳಲ್ಲಿ ಇಂದಿಗೂ ಕನ್ನಡ ಭಾಷಿಕರೇ ಇದ್ದಾರೆ ಎಂದು ತಿಳಿಸಿದರು.

ಪ್ರಾಂಶುಪಾಲ ಡಾ.ರಾಜೇಶ್​.ಬಿ ಮಾತನಾಡಿ, ಕನ್ನಡ ನಾಡಿನಲ್ಲಿ ಜನಿಸಲು ಪುಣ್ಯ ಮಾಡಿದ್ದೇವೆ. ದೇಶ ಅಥವಾ ಪ್ರಪಂಚದ ಯಾವುದೇ ಮೂಲೆಗೆ ಹೋದರೂ, ಎಲ್ಲ ಕ್ಷೇತ್ರಗಳಲ್ಲೂ ಕನ್ನಡಿಗರಿದ್ದಾರೆ. ಅಂತೆಯೇ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಕನ್ನಡಕ್ಕಾಗಿ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮಕ್ಕೂ ಮುನ್ನ ಬಿವಿವಿ ಸಂದ ಅಂಗ ಸಂಸ್ಥೆಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಟ್ಣದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಕನ್ನಡಪರ ೂಷಣೆ ಕೂಗಿದರು. ಕಾರ್ಯಕ್ರಮಕ್ಕೆ ಪಟ್ಟಣದ ಆರಕ ಠಾಣೆಯ ಪಿಎಸ್​ಐ ಜಯರಾಜ್​ ಅವರು ಕನ್ನಡ ಬಾವುಟ ಬೀಸುವ ಮೂಲಕ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net