ದೇಶ ಸರಿ ದಾರಿಯತ್ತ ಸಾಗುತ್ತಿದೆ

h8-tenginakai
Published on

ಹುಬ್ಬಳ್ಳಿ: ಇಲ್ಲಿಯ ವಾರ್ಡ್ ನಂ. 53ರ ಹೇಮರೆಡ್ಡಿಮಲ್ಲಮ್ಮ ಕಾಲನಿ, ಭಾರತ ನಗರ ಬ್ಯಾಂಕರ್ಸ್ ಕಾಲನಿ, ಸಹದೇವನಗರ ಹಾಗೂ ಸನ್ಮಾನ ಕಾಲನಿ, ವಾರ್ಡ್ ನಂ. 57ರ ದೇಶಪಾಂಡೆ ನಗರದ ಹೊಸೂರು, ಭವಾನಿ ನಗರ ಇತರೆಡೆ ಶಾಸಕ ಮಹೇಶ ಟೆಂಗಿನಕಾಯಿ ಇತ್ತೀಚೆಗೆ ಭರ್ಜರಿ ಪ್ರಚಾರ ನಡೆಸಿದರು.
ನಂತರ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಲ್ಲಿ ದೇಶ ಸರಿ ದಾರಿಯಲ್ಲಿ ಸಾಗಿದೆ. ಜಗತ್ತಿನ ಶ್ರೇಷ್ಠ ನಾಯಕ ನರೇಂದ್ರ ಮೋದಿ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದರು.
ಮಾಜಿ ಮಹಾಪೌರ ಪ್ರಕಾಶ ಕ್ಯಾರಕಟ್ಟಿ, ಪಾಲಿಕೆ ಸದಸ್ಯೆ ಮೀನಾಕ್ಷಿ ಒಂಟಮುರಿ, ಪ್ರಮುಖರಾದ ಮುಕುಂದ ಗುಗ್ಗರಿ, ದೀಪಕ ಜಿತೂರಿ, ಟಿ.ಎನ್. ಶಿವನಗೌಡ್ರ, ಮಹೇಶ ಉಳ್ಳಿಕಾಶಿ, ಸುಮಾ ಶಿವನಗೌಡ್ರ, ಸಂಗೀತ ಬದ್ದಿ, ಶಿವು ಗಚ್ಚನ್ನವರ, ರಮೇಶ ದಿವಟಗಿ, ಜಗದೀಶ ದೇವತೆ, ರವಿ ನಾಯಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net