ಅಹಿಂಸಾತ್ಮಕ ಹೋರಾಟದಿಂದ ದೇಶ ಸುಭೀಕ್ಷ

Distribution of tools and equipment to the disabled
ಗಾಂಧಿ ಜಯಂತಿ ಪ್ರಯುಕ್ತ ಶಾಸಕರ ಕಚೇರಿಯಲ್ಲಿ ನುಗ್ಗಿ ಗ್ರಾಪಂ ವ್ಯಾಪ್ತಿಯ 17 ಜನರಿಗೆ ಶಾಸಕ ಟಿ.ಡಿ.ರಾಜೇಗೌಡ ಹಕ್ಕುಪತ್ರಗಳನ್ನು ವಿತರಿಸಿದರು.
Published on

ಕೊಪ್ಪ: ಅಹಿಂಸಾತ್ಮಕ ಹೋರಾಟದಿಂದ ಮಾತ್ರ ಸ್ವಾತಂತ್ರೃ ದೊರೆಯಿತು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸಿ ಜಯಂತಿ ಅಂಗವಾಗಿ ಶಾಸಕರ ಕಚೇರಿಯಲ್ಲಿ ಸೋಮವಾರ ಅಂಗವಿಕಲರಿಗೆ ಸಾಧನ, ಸಲಕರಣೆ ವಿತರಿಸಿ ಮಾತನಾಡಿ, ಸ್ವಾತಂತ್ರೃಕ್ಕಾಗಿ ಯುದ್ಧ ಮಾಡಿದರೆ ಜನ ಸತ್ತು ದೇಶ ಬರಿದಾಗುತ್ತಿತ್ತು. ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟದಿಂದ ದೇಶ ಸುಭೀಕ್ಷವಾಗಿದೆ. ಇದು ನೆಲ್ಸನ್ ಮಂಡೇಲಾ ಅವರ ಹೋರಾಟಕ್ಕೂ ಪ್ರೇರಣೆಯಾಗಿತ್ತು ಎಂದರು.
ನಮ್ಮ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸಿದೆ. ಗೃಹಲಕ್ಷ್ಮಿ ಯೋಜನೆಗೆ ಹಣ ಪಡೆಯಲು ಅರ್ಜಿ ಸಲ್ಲಿಸಿ ಹಣ ಬಾರದಿದ್ದರೆ ನೋಂದಣೆಯನ್ನು ಇನ್ನೊಮ್ಮೆ ಪರಿಶೀಲಿಸಿ ಸರಿಪಡಿಸಿಕೊಂಡರೆ ಹಣ ಜಮೆಯಾಗುತ್ತದೆ. ಶಾಸಕರ ಕಚೇರಿಯಲ್ಲಿ ಯಾವ ಪಕ್ಷದವರೂ ಬಂದು ಕೆಲಸ ಮಾಡಿಸಿಕೊಳ್ಳಲು ಅವಕಾಶವಿದೆ ಎಂದು ತಿಳಿಸಿದರು.
ನುಗ್ಗಿ ಗ್ರಾಪಂ ವ್ಯಾಪ್ತಿಯಲ್ಲಿ 50 ವಷರ್ಗಳಿಂದ ಹಕ್ಕುಪತ್ರಕ್ಕಾಗಿ ಹೋರಾಟ ಮಾಡುತ್ತಿದ್ದವರಿಗೆ ಮಂಜೂರಾತಿ ಪತ್ರ ವಿತರಿಸಲಾಗುತ್ತಿದೆ. ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಜನರಿಗೆ ಹಕ್ಕುಪತ್ರ ಸಿಗದಿದ್ದರೆ ಇನ್ನೇರಡು ವರ್ಷಗಳಲ್ಲಿ ಕಾನೂನಾತ್ಮಕವಾಗಿ ಹಕ್ಕುಪತ್ರ ನೀಡುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪಪಂ ಸದಸ್ಯರಾದ ವಿಜಯಕುಮಾರ್, ಗಾಯತ್ರಿ, ಗಾಯತ್ರಿ ಶೆಟ್ಟಿ, ರಶೀದ್, ಹೇಮಾವತಿ, ಮೈತ್ರಾ ಗಣೇಶ್, ಶ್ರೀನಿವಾಸ ಶೆಟ್ಟಿ, ಹರಂದೂರು ಗ್ರಾಪಂ ಅಧ್ಯಕ್ಷ ಸುರೇಶ್, ಮುಖಂಡರಾದ ಎಚ್.ಶಶಿಕುಮಾರ್, ಅನ್ನಪೂರ್ಣ ನರೇಶ್, ಓಣಿತೋಟ ರತ್ನಾಕರ್, ಕೆ.ಟಿ.ಮಿತ್ರಾ, ಬರ್ಕತ್ ಆಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net