

ಅಥಣಿ ಗ್ರಾಮೀಣ: ದೇಶ ಕಾಯುವ ಸೈನಿಕರು ನಮ್ಮ ಆತ್ಮರಕ್ಷಕರು ಎಂದು ಅಥಣಿ ತಾಲೂಕು ಮಾಜಿ ಸೈನಿಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಗುರಪ್ಪ ಮಗದುಮ್ಮ ಹೇಳಿದರು.
ಅಥಣಿ ತಾಲೂಕಿನ ಅಡಹಳ್ಳಟ್ಟಿ ಗ್ರಾಮದಲ್ಲಿ ಸಾಯಿತೇಜ್ 24್ಡ7 ಸ್ಟಡಿ ಲೈಬ್ರರಿ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸೈನಿಕರಿಗೊಂದು ಸಲಾಂ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಥಣಿ ತಾಲೂಕಿನ ಕಿರಣಗಿ ಗ್ರಾಮದ ಕಾಶೀನಾಥ ಕಾಂಬಳೆ ವೀರಚಕ್ರ ಪಡೆದ ಏಕೈಕ ಹೆಮ್ಮೆಯ ಸೈನಿಕನಾಗಿದ್ದು, ಮಧ್ಯಪ್ರದೇಶದ ಜಬಲಪುರದಲ್ಲಿ ಕಾಶೀನಾಥ ಮಾರ್ಗವೆಂದು ಒಂದು ಮುಖ್ಯ ರಸ್ತೆಗೆ ಹೆಸರಿಡಲಾಗಿದೆ. ಅಥಣಿ ಭೋಜರಾಜ ಕ್ರೀಡಾಂಗಣ ಬಳಿ ಯುದ್ಧ ಸ್ಮಾರಕ ನಿರ್ಮಿಸುವ ಸಂಕಲ್ಪವಿದ್ದು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಖೋತನಟ್ಟಿಯ ಡಾ.ಸಿದ್ಧಲಿಂಗೇಶ್ವರ ಮಹಾರಾಜರು ಮಾತನಾಡಿ, ಸೈನಿಕ, ಶಿಕ್ಷಕ, ಕೃಷಿಕ ದೇಶದ ಅಮೂಲ್ಯ ರತ್ನಗಳು ಎಂದರು. ಬೆಳಗಾವಿ ಮಾಜಿ ವೈಬಿಕೆ ೌಂಡೇಷನ್ ಅಧ್ಯಕ್ಷ ಶಿವಮಲ್ಲಪ್ಪ ಕುಳಲಿ, ಎಸ್.ಎಸ್. ಗುಡ್ಡಾಪುರ ಹಾಗೂ ಸಿದ್ದರಾಜ ಬೋರಾಡೆ ಮಾತನಾಡಿದರು. ಸುಬೇದಾರ ಶ್ರೀಶೈಲ ಹೊನವಾಡ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಬಸವಂತ ಗುಡ್ಡಾಪುರ ಅಧ್ಯಕ್ಷತೆ ವಹಿಸಿದ್ದರು. ಅಪ್ಪು ಕೋಹಳ್ಳಿ, ಹಣಮಂತ ಪೂಜಾರಿ, ಸಂಗಪ್ಪ ಕೇರಿ, ಸೋಮಲಿಂಗ ಬಿದರಟ್ಟಿ, ಮಹಾಂತೇಶ ಪಾಟೀಲ, ಸಾಗರ ಕೋಹಳ್ಳಿ ಸೇರಿ 100ಕ್ಕೂ ಹೆಚ್ಚು ಸೈನಿಕರನ್ನು ಸತ್ಕರಿಸಲಾಯಿತು. ಭೀಮಪ್ಪ ಬಿದರೊಳ್ಳಿ ಡಾ. ಭೀಮಣ್ಣ ಬಿದರೊಳ್ಳಿ, ಶೇಖರ ಚಂಡಕಿ ಇತರರಿದ್ದರು.