ಕಂದಕ ಸ್ವಚ್ಚತೆಗೆ ಪಾಲಿಕೆ ಮುಂದು *ನಿತ್ಯ 20 ರಿಂದ 25 ಟನ್ ಪ್ಲಾಸ್ಟಿಕ್ ಸಂಗ್ರಹ * ಪಾಲಿಕೆ ಅಭಿವೃದ್ದಿಗೆ ಜಿಲ್ಲಾಡಳಿತ ಸಾಥ್!

RAICHUR
RAICHUR
Published on

ರಾಚಯ್ಯ ಸ್ವಾಮಿ ಮಾಚನೂರು

 ರಾಯಚೂರು ಮಳೆ ಬಂದರೆ ಸಾಕು ರಾಯಚುರು ನಗರದ ಸಾಕಷ್ಟು ಬಡಾವಣೆಯ ನಿವಾಸಿಗಳು ಮನೆ ನೀರಿನಲ್ಲಿ ಕಾಲ ಕಳೆಯುವ ಪರಸ್ಥಿತಿ ಎದುರಾಗುವುದು ಸರ್ವೇ ಸಾಮಾನ್ಯವಾಗುತ್ತಿತ್ತು. ಆದರೆ ಇದೀಗ ಸರ್ಕಾರ ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆರಿದ ನಂತರ ಸುಮಾರು 17 ವರ್ಷಗಳಿಂದ ಶೇಖರಣೆಗೊಂಡಿದ್ದ ತ್ಯಾಜ್ಯವನ್ನು ಏಕಾಏಕಿ ತೆರವು ಮಾಡಲಾಗುತ್ತಿರುವುದರಿಂದ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ನಗರದ ಬಡಾವಣೆಯ ಸಣ್ಣ ಕಾಲುವೆ, ರಾಜ್ ಕಾಲುವೆ (ಕಂದಕ) ಸೇರಿದಂತೆ ವಿವಿಧಕಡೆ ಪಾಲಿಕೆ ಸಿಬ್ಬಂದಿಗಳು ಕಸ ವಿಲೇವಾರಿ ಹಾಗೂ ಹೂಳೆತ್ತುವ ಕೆಲಸದಲ್ಲಿ ನಿರತರಾಗಿದ್ದು, ಈಗಾಗಲೇ ಜಿಲ್ಲಾಡಳಿತದಿಂದ ಹೂಳೆತ್ತುವ ಕೆಲಸ ಸೇರಿ ಕೋಟೆ ಅಭಿವೃದ್ದಿಗೆ ಮೂರು ಕೋಟಿ ರೂ.ಮಂಜೂರು ಮಾಡಲಾಗಿದ್ದರಿಂದ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ.

ಡಿಸಿ,ಆಯುಕ್ತರಿಂದ ಸಿಟಿ ಸಂಚಾರ ನಗರದಲ್ಲಿ ಕಂದಕ ಒತ್ತುವರಿ, ಕೋಟೆ ಅಭಿವೃದ್ದಿ ಕುರಿತು ಮೇ.03 ರಂದು ಜಿಲ್ಲಾಧಿಕಾರಿ ಕೆ. ನಿತೀಶ್ ಹಾಗೂ ಪಾಲಿಕೆ ಆಯಕ್ತ ಜುಬಿನ್ ಮೊಹಪಾತ್ರ ಅವರು ನಗರಾಧ್ಯಂತ ಸಂಚಾರದ ಜತೆಗೆ ಕೋಟೆ ಪ್ರದೇಶವನ್ನು ಸುತ್ತಾಡಿದ ವೇಳೆ ಕಂದಕದಲ್ಲಿ ಬೆಳೆದುನಿಂತ ಗಿಡಗಂಟಿಗಳು, ಕೊಳಚೆ ನೀರು, ಒತ್ತುವರಿ ಸೇರಿದಂತೆ ಅವ್ಯವಸ್ಥೆ ಕಂಡು ಕೋಟೆ ಹಾಗೂ ಕಂದಕ ಅಭಿವೃದ್ದಿಗಾಗಿ ಸರ್ಕಾರಕ್ಕೆ ಪತ್ರ ಬರೆದ ಕೆಲವೆ ದಿನಗಳಲ್ಲಿ ‘‘ವಿಜಯವಾಣಿಯಲ್ಲಿ ಕೋಟೆ ಅಭಿವೃದ್ದಿಗೆ ಕೂಡಿದ ಕಾಲ! ’’ ಎಂದು ಮೇ 6 ರಂದು ವರದಿ ಪ್ರಕಟ ಮಾಡಿದ ಬೆನ್ನಲ್ಲೆ ಅಭಿವೃದ್ದಿಗೆ ಮುಂದಾಗಿದ್ದಾರೆ.

ಕಳೆದ ಒಂದು ವಾರದಿಂದ ಸ್ವಚ್ಚತೆ ಕಾರ್ಯ

ಕಂದಕ ಸ್ವಚ್ಚತೆಗೆ ಜೆಸಿಬಿ, ಇಟಾಚಿ ಯಂತ್ರಗಳನ್ನು ಬಳಸಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ನಿತ್ಯ 20-25 ಟನ್ ಪ್ಲಾಸ್ಟಿಕ್ ಸಂಗ್ರಹಗೊಳ್ಳುತ್ತಿದೆ. ನಗರದ ಡಾ,.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಗಾಂಧಿ ವೃತ್ತದವರೆಗೆ ಕಂದಕದ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗಿದೆ. ಕಂದಕಗಳಿಗೆ ಚರಂಡಿ ನೀರಿನ ಸಂಪರ್ಕ ನೀಡಲಾಗಿದೆ. ಅಲ್ಲದೇ ಮಾವಿನ ಕೆರೆಯಿಂದ ಹರಿಯುವ ನೀರು ಕೂಡ ಇದೇ ಕಂದಕಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಇರುವಂತ ಅನೇಕ ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳ ಎಲ್ಲ ಪ್ಲಾಸ್ಟಿಕ್ ತ್ಯಾಜ್ಯವನ್ನು ಇಲ್ಲಿಯೇ ವಿಲೇವಾರಿ ಮಾಡುತ್ತಿದ್ದಾರೆ. ಇದರಿಂದ ಚರಂಡಿ ನೀರು ಸರಾಗವಾಗಿ ಹರಿಯಲು ಕೂಡ ಸಾಧ್ಯವಾಗದ ಸ್ಥಿತಿಯಿತ್ತು. ಇದನ್ನರಿತ ಪಾಲಿಕೆ ಹಾಗೂ ಜಿಲ್ಲಾಡಳಿತ ಕೊನೆಗೂ ತೆರವಿಗೆ ಮುಂದಾಗಿದೆ. ಕೆಲವೆಡೆ 10-12 ಅಡಿ ಆಳವಿದ್ದು, ಪಾಲಿಕೆ ಸಿಬ್ಬಂದಿ ಅಪಾಯಕಾರಿ ಹಂತದಲ್ಲಿ ಕೆಲಸ ಮಾಡುತ್ತಿದ್ದಾರೆ.

ಚರಂಡಿಗಳ ನೀರು ಕಂದಕಕ್ಕೆ ಸಂಪರ್ಕ

ಹೊಸ ಪಾಲಿಕೆ ಕಚೇರಿ ಎದುರು ಅನೇಕ ಹೋಟೆಲ್ ಗಳ ಮಾಲೀಕರು ತಮ್ಮ ತ್ಯಾಜ್ಯದ ನೀರನ್ನು ನೇರವಾಗಿ ಕಂದಕಗಳಿಗೆ ಬಿಡುತ್ತಿದ್ದಾರೆ. ಇನ್ನೂ ಅನೇಕ ತಮ್ಮ ತ್ಯಾಜ್ಯವನ್ನೆಲ್ಲ ರಾಜಾರೋಷವಾಗಿ ವಿಲೇವಾರಿ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕದ ವಿನಃ ಕಂದಕಗಳ ಸ್ವಚ್ಛತೆ ಕೋಟೆ ಸಂರಕ್ಷಣೆ ಅಸಾಧ್ಯದ ಮಾತು ಎನ್ನುವಂತಾಗಿದೆ. ಸಮಸ್ಯೆಗೆ ಮುಖ್ಯ ಕಾರಣ ಪ್ಲಾಸ್ಟಿಕ್ ಎನ್ನುವುದು ಸ್ಪಷ್ಟವಾಗಿದ್ದು, ಇದಕ್ಕೆ ಕಡಿವಾಣ ಹಾಕಲು ಪಾಲಿಕೆ ಕಠಿಣ ಕ್ರಮಕೈಗೊಳ್ಳಲು ಮುಂದಾಗಿದೆ. ಇನ್ನುಮುಂದೆ ಯಾರಾದರೂ ಪ್ಲಾಸ್ಟಿಕ್ ವಿಲೇವಾರಿ ಮಾಡಿದರೆ ಅಂತವರಿಗೆ ದಂಡ ವಿಧಿಸುವುದರ ಜತೆಗೆ ಪ್ರಕರಣ ದಾಖಲಿಸಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಕಂದಕದ ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳನ್ನು ಮಾಡಿಕೊಂಡಿರುವ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ. ಕೇಳದಿದ್ದ ಪಕ್ಷದಲ್ಲಿದಂಡವಿಧಿಸಲು ನಿರ್ಧರಿಸಲಾಗಿದೆಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಿಕೆಯಿಂದ ಕೋಟೆ 13 ಜನ ಸಿಬ್ಬಂದಿ ಹಾಗೂ ಮೂರು ಜೆಸಿಬಿಯಿಂದ ಸ್ವಚ್ಚತೆ ಕಾರ್ಯ ಪ್ರಾರಂಭ ಮಾಡಿದ್ದು, ವಿಜಯಪುರದಿಂದ 65 ಫೀಟ್ ಉದ್ದದ ಜೆಸಿಬಿಯನ್ನು ತರಲಾಗಿದ್ದು,10 ಜನರು ಮಾಡುವ ಕೆಲಸ ಒಂದೇ ಜೆಸಿಬಿ ಮಾಡಲಿದೆ. ಇದರ ಜತೆಗೆ ಕಂದಕದಲ್ಲಿ ಯಾರದರು ಕಸ ಮತ್ತು ಪ್ಲಾಸ್ಟೀಕ್ ಹಾಕಿದರೆ ಕಾನೂನು ಕ್ರಮದ ಜತೆಗೆ 500 ರಿಂದ 5 ಲಕ್ಷ ರೂ.ದಂಡ ವಿಧಿಸಲಾಗುವುದು.

ಜುಬೇನ್ ಮೊಹಪಾತ್ರ ಆಯಕ್ತರು ಮಹಾನಗರ ಪಾಲಿಕೆ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net