

ಸುಳ್ಯ: ನಗರದ ಚೆನ್ನಕೇಶವ ದೇವಸ್ಥಾನದಲ್ಲಿ ಅಡುಗೆ ಕೆಲಸ ಮಾಡುತ್ತಿರುವ ಹರೀಶ್ ಭಟ್ ಎಂಬುವರು ದೇವಸ್ಥಾನದ ಮ್ಯಾನೇಜರ್ ಕೃಷ್ಣ ಭಟ್ ಎಂಬುವರ ವಿರುದ್ಧ ಥಳಿಸಿ ಬೆದರಿಕೆ ಹಾಕಿರುವ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ. ತಾನು ಸಂಬಳ ಕೇಳಿದಾಗ ಮ್ಯಾನೇಜರ್ ಕೃಷ್ಣ ಸೋಮಯಾಜಿ ತನಗೆ ಹೊಡೆದು ಹೊರಗೆ ಹಾಕುವುದಾಗಿ ಬೆದರಿಕೆ ಒಡ್ಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.