

ವಿಜಯವಾಣಿ ಸುದ್ದಿಜಾಲ ಗೋಳಿಯಂಗಡಿ
ಕಲಿತ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ನೀಡುವ ಕೊಡುಗೆಗಳು ಅತ್ಯಂತ ಶ್ರೇಷ್ಠತೆಯೊಂದಿಗೆ ಮಹತ್ವ ಪಡೆಯುತ್ತವೆ. ವಿದ್ಯೆಯೊಂದಿಗೆ ಜೀವನದಲ್ಲಿ ಉತ್ತಮ ಭವಿಷ್ಯ ರೂಪಿಸಲು ಸಹಕಾರಿಯಾದ ಶಾಲೆಗಳ ಪಾತ್ರ ಅಮೂಲ್ಯವಾದುದು ಎಂದು ಕರ್ನಾಟಕ ರಾಜ್ಯ ಹೊಟೇಲ್ ಮಾಲೀಕರ ಸಂಘ ಅಧ್ಯಕ್ಷ, ಉದ್ಯಮಿ ಜಿ.ಕೆ.ಶೆಟ್ಟಿ ಹೇಳಿದರು.
ಗೋಳಿಯಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ನೂತನ ಆವರಣಗೋಡೆಯ ನಾಮಫಲಕ ಉದ್ಘಾಟಿಸಿ ಮಾತನಾಡಿದರು.
ರೋಟರಿ ಇಂಟರ್‌ನ್ಯಾಶನಲ್ ಬೆಂಗಳೂರು ಜಿಲ್ಲಾ ನಿಕಟ ಪೂರ್ವ ಗವರ್ನರ್ ಬಿ.ಎಲ್.ನಾಗೇಂದ್ರ ಪ್ರಸಾದ್ ನೂತನ ಆವರಣ ಗೋಡೆ ಉದ್ಘಾಟಿಸಿದರು.
ಕುಂದಾಪುರ ಶಾಸಕ ಎ.ಕಿರಣ್‌ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದರು.
ಉದ್ಯಮಿ ಜಿ.ಕೆ ಶೆಟ್ಟಿ, ಇಂಜಿನಿಯರ್ ಪವನ್ ಶೆಟ್ಟಿ ಗೋಳಿಯಂಗಡಿ, ಉದ್ಯಮಿ ಹರೀಶ್ ಶೆಟ್ಟಿ ಗೋಳಿಯಂಗಡಿ, ಹಳೇ ವಿದ್ಯಾರ್ಥಿ ರತ್ನಾಕರ ನಾಯ್ಕ ಅವರನ್ನು ಗೌರವಿಸಲಾಯಿತು.
ರೋಟರಿ ಇಂಟರ್‌ನ್ಯಾಶನಲ್ ಬೆಂಗಳೂರು ಜಿಲ್ಲಾ ಪದಾಧಿಕಾರಿ ರಾಜರಾಮ್ ಭಟ್, ಕರ್ಣಾಟಕ ಬ್ಯಾಂಕ್ ನಿರ್ದೇಶಕ ಬಾಲಕೃಷ್ಣ ಅಲ್ಸೆ ಸೆಟ್ಟೋಳಿ, ಬೆಳ್ವೆ ಶ್ರೀ ಗಣೇಶ್ ಕ್ಯಾಶ್ಯೂ ಸಮೂಹ ಸಂಸ್ಥೆಗಳ ಉದ್ಯಮಿ ಬಿ.ಗಣೇಶ್ ಕಿಣಿ ಬೆಳ್ವೆ, ಆವರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನ ಅಂಜುಮ್, ಹಳೇ ವಿದ್ಯಾರ್ಥಿ ಸಂಘ ಗೌರವಾಧ್ಯಕ್ಷ ಸುರೇಶ ಶೆಟ್ಟಿ ಬೆಳ್ವೆ, ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಆವರ್ಸೆ, ಗೋಳಿಯಂಗಡಿ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗ್ಡೆ ಹಿಲಿಯಾಣ, ಪ್ರಾಂಶುಪಾಲ ನಾಗರಾಜ ವೈದ್ಯ, ಪ್ರಭಾರ ಮುಖ್ಯ ಶಿಕ್ಷಕ ರಾಘವೇಂದ್ರ ಗಾಣಿಗ, ಹಳೇ ವಿದ್ಯಾರ್ಥಿಗಳು, ಉಪನ್ಯಾಸಕ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಪ್ರಾಂಶುಪಾಲ ನಾಗರಾಜ ವೈದ್ಯ ಸ್ವಾಗತಿಸಿದರು. ಪ್ರಭಾರ ಮುಖ್ಯ ಶಿಕ್ಷಕ ರಾಘವೇಂದ್ರ ಗಾಣಿಗ ವಂದಿಸಿದರು. ಶಿಕ್ಷಕ ಸುಧಾಕರ ನಾಯ್ಕ ನಿರೂಪಿಸಿದರು.
ದಾನಿಗಳು, ಹಳೇ ವಿದ್ಯಾರ್ಥಿಗಳ ಕೊಡುಗೆಗಳಿಂದ ಸರ್ಕಾರಿ ಶಾಲೆಗಳಲ್ಲಿ ಉತ್ತಮ ವ್ಯವಸ್ಥೆಗಳೊಂದಿಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಅನುಕೂಲವಾಗುತಿದೆ. ಶಿಕ್ಷಕರ ಪ್ರಮಾಣಿಕ ಸೇವೆ, ವಿದ್ಯಾರ್ಥಿಗಳ ಶ್ರಮ ಸಾಧನೆಗಳಿಂದ ಉತ್ತಮ ಫಲಿತಾಂಶದೊಂದಿಗೆ ಶಾಲೆಗಳ ಬೆಳವಣಿಗೆಗೆ ಸಾಧ್ಯವಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರ ಹೊಣೆಗಾರಿಕೆ ಮಹತ್ವದ್ದು ಎ.ಕಿರಣ್‌ಕುಮಾರ್ ಕೊಡ್ಗಿ, ಕುಂದಾಪುರ ಶಾಸಕ https://www.vijayavani.net/inspirational-work-in-the-religious-and-social-fields https://www.vijayavani.net/nempu-narasimha-bhatts-achievement-is-unique