ವಚನ ಸಾಹಿತ್ಯಕ್ಕೆ ಶರಣೆಯರ ಕೊಡುಗೆ ಅಪಾರ

14 KMP 01
ಕಂಪ್ಲಿ ಗುರುಮಠದಲ್ಲಿ ಆಯೋಜಿಸಿದ್ದ 245ನೇ ಹುಣ್ಣಿಮೆ ಕಾರ್ಯಕ್ರಮದಲ್ಲಿ ಕನ್ನಡ ವಿವಿಯ ಸಂಶೋಧನಾ ವಿದ್ಯಾರ್ಥಿ ಕೆ.ಅನಂತಾಚಾರ್ ಮಾತನಾಡಿದರು. ಪ್ರಮುಖರಾದ ಗೊಗ್ಗ ಚನ್ನಬಸವರಾಜ, ಹೂಗಾರ ಲೋಕೇಶ, ಎಸ್.ರಾಮಪ್ಪ ಇದ್ದರು.
Published on

ಕಂಪ್ಲಿ: ಆಯ್ದಕ್ಕಿ ಲಕ್ಕಮ್ಮಅಕ್ಕಿ ಮೇಲಿನ ಆಸೆಯನ್ನು ಬಿಡುವಂತೆ ಹೇಳಿದ್ದಲ್ಲ. ಬದಲಿಗೆ ಲಿಂಗ ಮೋಹವನ್ನು ತ್ಯಜಿಸುವಂತೆ ವಚನ ಮೂಲಕ ಸಾರಿದ್ದಾಳೆ ಎಂದು ಕನ್ನಡ ವಿವಿ ಸಂಶೋಧನಾ ವಿದ್ಯಾರ್ಥಿ ಕೆ.ಅನಂತಾಚಾರ್ ಹೇಳಿದರು.

ಇಲ್ಲಿನ ಗುರುಮಠದಲ್ಲಿ ಓದ್ಸೋ ಕರಿಬಸಯ್ಯ ಅವರ ಶಿವಾನಂದಾಶ್ರಮದಿಂದ ಗುರುಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗೊಗ್ಗಮರಿಸ್ವಾಮಿ ಸ್ಮರಣಾರ್ಥ 245ನೇಹುಣ್ಣಿಮೆ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯದಲ್ಲಿ ಮಹಿಳಾ ಪ್ರಜ್ಞೆ ಕುರಿತ ಉಪನ್ಯಾಸ ಕಾರ್ಯಕ್ರಮಲ್ಲಿ ಮಾತನಾಡಿದರು.

ಶರಣರು ಲಿಂಗ ತಾರತಮ್ಯವನ್ನು ವಚನಗಳ ಮೂಲಕ ವಿರೋಧಿಸಿದ್ದಲ್ಲದೆ, ಹೆಣ್ಣು ಮಾಯೆಯಲ್ಲ ಎಂದು ಪ್ರತಿಪಾದಿಸಿದರು. ಪ್ರಸ್ತುತ ದಿನಮಾನಗಳಲ್ಲಿ ಸ್ತ್ರೀವಾದ ಎಂದರೆ ಪುರುಷ ವಿರೋಧಿ ಎನ್ನುವ ಮನೋಭಾವನೆ ವ್ಯಕ್ತವಾಗುತ್ತಿರುವುದು ಸರಿಯಲ್ಲ. ಸ್ತ್ರೀವಾದವು ಲಿಂಗ ಸಮಾನತೆ ಸಾಧಿಸುವುದಾಗಿದೆ. ಲಿಂಗ ಪೂಜೆಗೆ ಸಮಯದ ಕಟ್ಟಳೆ, ಯಾವ ಹಂಗು ಇಲ್ಲದೆ ತನ್ನ ತಾನರಿಯುವುದೇ ನಿಜ ಲಿಂಗಪೂಜೆಯಾಗಿದೆ. ವಚನ ಸಾಹಿತ್ಯದಲ್ಲಿ ಶರಣೆಯರ ಪಾತ್ರ ಮಹತ್ವದ್ದಾಗಿದೆ ಎಂದರು.

ಎಮ್ಮಿಗನೂರು ಗ್ರಾಪಂ ಸದಸ್ಯ ಹೂಗಾರ ಲೋಕೇಶ ಮಾತನಾಡಿ, ಶರಣ ಸಾಹಿತ್ಯಅನುಷ್ಠಾನಗೊಳಿಸಿದಲ್ಲಿ ಮಾತ್ರ ಭ್ರಷ್ಟಾಚಾರ, ಅಜ್ಞಾನ, ಮೂಢನಂಬಿಕೆ, ಬಡತನ ತೊಲಗಿಸಲು ಸಾಧ್ಯ ಎಂದರು.

ಶಿವಾನಂದಾಶ್ರಮದ ಮುಖ್ಯಸ್ಥ ಗೊಗ್ಗ ಚನ್ನಬಸವರಾಜ, ಪ್ರಮುಖರಾದ ಘನಮಠದಯ್ಯ ಹಿರೇಮಠ, ಬಂಗಿ ದೊಡ್ಡ ಮಂಜುನಾಥ, ಕೆ.ಎಂ.ಚಂದ್ರಶೇಖರಯ್ಯ, ಎಚ್.ಎಂ.ಜಗದೀಶ, ಯೋಗೇಶ, ಎಸ್.ಡಿ.ಬಸವರಾಜ, ಅಶೋಕ ಕುಕನೂರು, ಬಿ.ಎಂ.ರುದ್ರಯ್ಯ, ಕಲ್ಗುಡಿ ನಾಗರತ್ನಾ, ಎ.ಟಿ.ಉಮಾದೇವಿ, ಯು.ಎಂ.ವಿದ್ಯಾಶಂಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net