ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ

The contribution of Vishwakarma Samaj is immense
ಕಲಕೇರಿ ಗ್ರಾಮದದಲ್ಲಿ ಕಾಳಿಕಾದೇವಿ ದೇವಸ್ಥಾನ ಭೂಮಿಪೂಜೆ, ಧರ್ಮಸಭೆ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು. ಡಾ.ಪ್ರಭುಗೌಡ ಲಿಂಗದಳ್ಳಿ, ಅಜೇಂದ್ರ ಶ್ರೀಗಳು, ಕಾಳಹಸ್ತೇಂದ್ರ ಶ್ರೀಗಳು, ಪಂಪಾಪತಿ ಶ್ರೀಗಳು ಇತರರಿದ್ದರು.
Published on

ಕಲಕೇರಿ: ಕಾಯಕ ತತ್ವದಲ್ಲಿ ನಂಬಿಕೆ ಇಟ್ಟ ವಿಶ್ವಕರ್ಮ ಸಮಾಜದ ಬಾಂಧವರು ಎಲ್ಲರನ್ನೂ ಪ್ರೀತಿಸುವ ವಿಶಾಲ ಹೃದಯದವರಾಗಿದ್ದಾರೆ. ಜಗತ್ತಿಗೆ ಅವರ ಕೊಡುಗೆ ಅಪಾರವಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಕಾಳಿಕಾದೇವಿ ದೇವಸ್ಥಾನ ಸಮಿತಿ ವತಿಯಿಂದ ಹಮ್ಮಿಕೊಂಡ ದೇವಸ್ಥಾನ ಭೂಮಿಪೂಜೆ, ಧರ್ಮಸಭೆ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇವಸ್ಥಾನ ನಿರ್ಮಾಣಕ್ಕಾಗಿ ನನ್ನ ಅನುದಾನದ ಜತೆಗೆ ವೈಯಕ್ತಿಕವಾಗಿಯೂ ಆರ್ಥಿಕ ಸಹಾಯ ಮಾಡುತ್ತೇನೆ ಎಂದರು.

ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಸಾವಿರಾರು ವರ್ಷಗಳ ಹಿಂದೆ ವಿಶ್ವಕರ್ಮರು ವಿಶ್ವಕ್ಕೆ ಪರಿಚಯಿಸಿದ ಶಿಲ್ಪಕಲೆ ಸದ್ಯ ವಿಜ್ಞಾನ ಯುಗದಲ್ಲಿಯೂ ಪುನ: ಮಾಡಿ ತೋರಿಸಲು ಸಾಧ್ಯವಾಗದ ರೀತಿ ಇದೆ ಎಂದರು.

ಶಹಾಪುರದ ಅಜೇಂದ್ರ ಶ್ರೀಗಳು, ಕಾಳಹಸ್ತೇಂದ್ರ ಶ್ರೀಗಳು, ನಾಲತವಾಡದ ಪಂಪಾಪತಿ ಶ್ರೀಗಳು, ಆಲಮೇಲದ ರಾಮಚಂದ್ರ ಶ್ರೀಗಳು, ಬೋರಗಿಯ ಮಹಾಲಿಂಗೇಶ್ವರ ಶ್ರೀಗಳು, ಕಲಕೇರಿಯ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಾಹಿತಿಗಳಾದ ಮನು ಪತ್ತಾರ ಮಾತನಾಡಿದರು.

ತೆಲಗಿಯ ವಾಮನರಾವ್ ಶ್ರೀಧರ ಪತ್ತಾರ, ವಡವಡಗಿಯ ಗುರುರಾಜ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ರಾಜಅಹ್ಮದ ಸಿರಸಗಿ, ಇಂಡಿ ಸಹಕಾರ ಇಲಾಖೆಯ ಸಹಾಯಕ ನಿಬಂಧಕ ಕನಕರಾಜ ವಡ್ಡರ, ಸುರೇಶಗೌಡ ಪಾಟೀಲ, ಸಿದ್ದು ಬುಳ್ಳಾ, ಲಕ್ಕಪ್ಪ ಬಡಿಗೇರ, ಅಶೋಕಗೌಡ ಪಾಟೀಲ, ವಸಂತ ಬಡಿಗೇರ, ವಿಜಯಪುರದ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಾಳು ಗಿರಗಾಂವಕರ, ಉಪಾಧ್ಯಕ್ಷ ಪ್ರಮೋದ ಬಡಿಗೇರ, ಈರಣ್ಣ ಪತ್ತಾರ ಇತರರಿದ್ದರು.

ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ವಿಶ್ವಕರ್ಮ ಧ್ವಜಾರೋಹಣ, ಹೋಮ-ಹವನ ನಡೆದವು. ಗ್ರಾಮದ ಗುರುವೀರಘಂಟೈ ಮಡಿವಾಳೇಶ್ವರರಿಗೆ ಮಂಗಳಾರತಿ ಸಲ್ಲಿಸಲಾಯಿತು. ಧರ್ಮಸಭೆಯಲ್ಲಿ ವಿವಿಧ ಕ್ಷೇತ್ರದ ಗಣ್ಯರು ಮತ್ತು ಸಾಧಕರಿಗೆ ಗುರು ರಕ್ಷೆ ನೀಡಿ ಗೌರವಿಸಲಾಯಿತು. ಸಂಜೆ ಕಲಾ ಸಿಂಚನ ಮೆಲೋಡಿಸ್‌ನಿಂದ ರಸ ಮಂಜರಿ ನಡೆಯಿತು. ಬೆಳಗ್ಗೆಯಿಂದಲೇ ನಿರಂತರ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net