ವೀರಶೈವ ಲಿಂಗಾಯತ ಮಠಗಳ ಕೊಡುಗೆ ಅನನ್ಯ

The contribution of Veerashaiva Lingayat monasteries is unique.
ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದ ಹಿರೇಮಠದಲ್ಲಿ ಮುಗಳಖೋಡ ಯಲ್ಲಾಲಿಂಗ ಮಹಾರಾಜರ ಪುರಾಣವನ್ನು ಗಣ್ಯರು ಉದ್ಘಾಟಿಸಿದರು. ಜೆಡಿಎಸ್ ರಾಜ್ಯಉಪಾಧ್ಯಕ್ಷ ಸೋಮನಗೌಡ ಪಾಟೀಲ್, ಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ, ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯರು ಇದ್ದರು.
Published on

ಬಸವನಬಾಗೇವಾಡಿ : ಸಮಾಜದ ಏಳಿಗೆಯಲ್ಲಿ ವೀರಶೈವ ಲಿಂಗಾಯತ ಮಠಗಳ ಕೊಡುಗೆ ಅಪಾರವಾಗಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸೋಮನಗೌಡ ಪಾಟೀಲ್ ಮನಗೂಳಿ ಹೇಳಿದರು.

ತಾಲೂಕಿನ ಮನಗೂಳಿ ಹಿರೇಮಠದಲ್ಲಿ ಲಿಂ. ಶ್ರೀ ಸಂಗನಬಸವ ಶಿವಾಚಾರ್ಯರ 42ನೇ ಪುಣ್ಯರಾಧನೆ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಡಾ. ಮಹಾಂತ ಶಿವಾಚಾರ್ಯರ 12 ನೇ ಯಾತ್ರಾ ಮಹೋತ್ಸವದ ನಿಮಿತ್ತ ಮುಗಳಖೋಡ ಯಲ್ಲಾಲಿಂಗ ಮಹಾರಾಜರ ಪುರಾಣ ಉದ್ಘಾಟನೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸರ್ಕಾರಗಳು ಮಾಡದಿರುವ ಕೆಲಸವನ್ನು ವೀರಶೈವ ಲಿಂಗಾಯತ ಮಠಗಳು ಮಾಡುತ್ತಿವೆ. ಅನ್ನ ದಾಸೋಹದ ಜತೆ ಜ್ಞಾನ ದಾಸೋಹ ಗೈಯುವ ಮೂಲಕ ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿವೆ ಎಂದು ಬಣ್ಣಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಮನಗೂಳಿ ಹಿರೇಮಠಕ್ಕೆ ಸಹಸ್ರಾರು ವರ್ಷಗಳ ಇತಿಹಾಸವಿದ್ದು, ಅಪಾರ ಭಕ್ತರನ್ನು ಹೊಂದಿದೆ ಎಂದರು.

ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಮೇ 9 ರಿಂದ 22 ವರಿಗೆ ಸಂಜೆ 7 ಕ್ಕೆ ಮುಗಳಖೋಡ ಯಲ್ಲಾಲಿಂಗ ಮಹಾರಾಜರ ಪುರಾಣ ಜರುಗಿದೆ. 21 ರಂದು ಮಹಿಳಾ ಗೋಷ್ಠಿ, 23 ರಂದು ಕುಂಭಮೇಳ, ಧರ್ಮಸಭೆ, ರಥೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

ಪ.ಪಂ. ಸದಸ್ಯಪ್ರಕಾಶ ಮನಗೂಳಿ, ಯುವ ಮುಖಂಡ ರವಿಗೌಡ ಪಾಟೀಲ, ಈರಪ್ಪ ಹುಣಸಿಕಟ್ಟಿ, ಈರಪ್ಪ ತಪಶೆಟ್ಟಿ, ಶಿವಾನಂದ ಬಿರಾದಾರ, ಎಸ್.ಬಿ. ಇಬ್ರಾಂಪುರ, ಎಂ.ಎಸ್. ಗುಜಗೊಂಡ, ಈರಣ್ಣ ಬಾವಿಕಟ್ಟಿ ಪಾಲ್ಗೊಂಡಿದ್ದರು.

ಎಸ್.ಐ. ಗೆಣ್ಣೂರ ಸ್ವಾಗತಿಸಿದರು. ಬಸವರಾಜ ಬೀರಲಿನ್ನಿ ವಂದಿಸಿದರು. ಮಾಂತೇಶ ಮನಗೂಳಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net