ದೇಶದ ಉನ್ನತಿಗೆ ಯುವಪೀಳಿಗೆ ಕೊಡುಗೆ ಅಪಾರ

sri-1 (5)
Published on

ಶೃಂಗೇರಿ: ಯುವಪೀಳಿಗೆ ರಾಷ್ಟ್ರದ ಶಕ್ತಿ. ಸಮಾಜ ಹಾಗೂ ದೇಶದ ಉನ್ನತಿಗೆ ಅವರ ಕೊಡುಗೆ ಅನನ್ಯ ಎಂದು ತಾಪಂ ಎನ್‌ಆರ್‌ಎಲ್‌ಎಂ ವಿಭಾಗದ ವಲಯ ಮೇಲ್ವಿಚಾರಕಿ ಸುಪ್ರೀತಾ ಅಂಜನ್ ಹೇಳಿದರು.

ಸಂಜೀವಿನಿ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ನೆಮ್ಮಾರ್ ಗ್ರಾಪಂ ಮಟ್ಟದ ಒಕ್ಕೂಟದಲ್ಲಿ ಮಾದಕದ್ರವ್ಯ ಮುಕ್ತ ಭಿತ್ತಿಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಸ್ತುತ ಯುವಜನತೆ ಮಾದಕದ್ರವ್ಯ ಸೇವನೆಗೆ ದಾಸರಾಗುತ್ತಿದ್ದಾರೆ. ಇದು ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ದೇಶದ ಅಭಿವೃದ್ಧಿಗಾಗಿ ಯುವಪೀಳಿಗೆ ಶಿಕ್ಷಣದ ಜತೆ ಉನ್ನತ ವಿವೇಚನೆ ಬೆಳೆಸಿಕೊಳ್ಳಬೆಕು. ತಾತ್ಕಾಲಿಕ ನೆಮ್ಮದಿ ನೀಡುವ ಮಾದಕ ದ್ರವ್ಯ ಸೇವನೆಯಿಂದ ಕುಟುಂಬದ ಜತೆ ಸಮಾಜದಲ್ಲಿ ಯುವಪೀಳಿಗೆ ತಮ್ಮ ಗೌರವ ಕಳೆದುಕೊಳ್ಳುತ್ತದೆ ಎಂದರು.

ಮಾದಕದ್ರವ್ಯ ಸೇವನೆ ವಿರುದ್ಧ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಗ್ರಾಪಂ ಪಿಡಿಒ ಶ್ರೀಕಾಂತಿ, ಎನ್‌ಆರ್‌ಎಲ್‌ಎಂ ಸಿಬ್ಬಂದಿಗಳಾದ ವಿನಯ್, ಪವಿತ್ರ, ಜಿಪಿಎಲ್‌ಎ್ ಪದಾಧಿಕಾರಿಗಳಾದ ಸುನೀತಾ, ವಸಂತಿ, ಮಧುಮತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net