ಹಿಂದು ಧರ್ಮ ಉಳಿಸುವಲ್ಲಿ ಮರಾಠ ಸಮಾಜದ ಕೊಡುಗೆ ಅಪಾರ

Maratha Samaj Website
ಕುವೆಂಪು ರಂಗಮಂದಿರದಲ್ಲಿ ಮರಾಠ ಸಮಾಜದ ವೆಬ್‌ಸೈಟ್ ಅನಾವರಣಗೊಳಿಸಿದ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ. ಶ್ರೀಮಂಜುನಾಥ ಭಾರತೀ ಸ್ವಾಮೀಜಿ, ದಯಾನಂದಗಿರಿ ಸ್ವಾಮೀಜಿ, ಸಂತೋಷ್ ಲಾಡ್, ಬೇಳೂರು ಗೋಪಾಲಕೃಷ್ಣ, ಎಂ.ಜಿ.ಮುಳೆ, ಡಾ. ಧನಂಜಯ ಸರ್ಜಿ, ಸಚಿನ್ ಶಿವಾಜಿರಾವ್ ಸಿಂಧ್ಯಾ, ಎಂ.ಪ್ರವೀಣ್‌ಕುಮಾರ್, ಎಚ್.ಸಿ.ಯೋಗೇಶ್, ದೇವರಾಜ್ ಸಿಂಧ್ಯಾ, ಗೀತಾ ಸತೀಶ್ ಇದ್ದರು.
Published on

ಶಿವಮೊಗ್ಗ: ಸನಾತನ ಹಿಂದು ಧರ್ಮವನ್ನು ಉಳಿಸುವಲ್ಲಿ ಮರಾಠ ಸಮಾಜದ ಕೊಡುಗೆ ಅಪಾರವಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಕುವೆಂಪು ರಂಗಮಂದಿರದಲ್ಲಿ ಶನಿವಾರ ಜಿಲ್ಲಾ ಕ್ಷತ್ರಿಯ ಮರಾಠ ಸೇವಾ ಸಂಘದಿಂದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮರಾಠ ಸಮಾಜದ ವೆಬ್‌ಸೈಟ್ ಅನಾವರಣಗೊಳಿಸಿ ಮಾತನಾಡಿದ ಅವರು, ಮರಾಠರದ್ದು ರಾಷ್ಟ್ರಭಕ್ತ ಸಮಾಜವೂ ಆಗಿದೆ. ಶಿವಾಜಿಯ ತಾಯಿ ಜೀಝಾಬಾಯಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮಕ್ಕಳಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಸುವಲ್ಲಿ ಅವರು ಆದರ್ಶವಾಗಿದ್ದಾರೆ. ಶಿವಾಜಿ ಮಹಾರಾಜ್ ಅವರು ಹಿಂದು ಧರ್ಮದ ಉಳಿವಿಗಾಗಿ ಶ್ರಮಿಸುವರು ಎಂದರು.

ಮರಾಠ ಸಮಾಜವು ಕೇಂದ್ರ ಮತ್ತು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಮುಖ್ಯವಾಗಿ ಮಕ್ಕಳಿಗೆ ವಿದ್ಯಾಭ್ಯಾಸ ನೀಡಬೇಕು. ರಾಜ್ಯ ಸರ್ಕಾರದಲ್ಲೂ ಮರಾಠ ಸಮಾಜದ ಅಭಿವೃದ್ಧಿಗಾಗಿಯೇ ನಿಗಮವಿದೆ. ತಂದೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಈ ಸಮಾಜಕ್ಕೆ ಹಲವು ರೀತಿಯಲ್ಲಿ ನೆರವು ನೀಡಿದ್ದಾರೆ. ಮರಾಠ ಸಮಾಜದವರ ಬೇಡಿಕೆಯಂತೆ ಶಿವಮೊಗ್ಗದ ಆಲ್ಕೋಳ ವೃತ್ತದಲ್ಲಿ ಛತ್ರಪತಿ ಶಿವಾಜಿ ಪುತ್ಥಳಿ ನಿರ್ಮಾಣಕ್ಕೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರಿನ ಗೋಸಾಯಿ ಮಠದ ಶ್ರೀಮಂಜುನಾಥ ಭಾರತೀ ಸ್ವಾಮೀಜಿ ಹಾಗೂ ದಯಾನಂದಗಿರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಸಚಿನ್ ಶಿವಾಜಿರಾವ್ ಸಿಂಧ್ಯಾ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಸಚಿವ ಸಂತೋಷ್ ಲಾಡ್, ಶಾಸಕರಾದ ಬೇಳೂರು ಗೋಪಾಲಕೃಷ್ಣ, ಶಾರದಾ ಪೂರ‌್ಯಾನಾಯ್ಕ, ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್,ಸಮಾಜದ ಗೌರವಾಧ್ಯಕ್ಷ ಎಂ.ಪ್ರವೀಣ್‌ಕುಮಾರ್, ಮುಖಂಡರಾದ ಎಚ್.ಸಿ.ಯೋಗೇಶ್, ಎಸ್.ಕೆ.ಮರಿಯಪ್ಪ, ದೇವರಾಜ್ ಸಿಂಧ್ಯಾ, ಗೀತಾ ಸತೀಶ್, ಶಿವಾಜಿರಾವ್, ಪ್ರಕಾಶ್ ಭಾಗೋಜಿ, ಕವಿತಾ ಯೋಗಪ್ಪನವರ್, ಯಮುನಾ ರಂಗೇಗೌಡ, ಕೆ.ರಂಗನಾಥ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net