ಶೈಕ್ಷಣಿಕ ಕ್ಷೇತ್ರಕ್ಕೆ ಜೈನರ ಕೊಡುಗೆ ಅಪಾರ

24Huk1
Published on

ಹುಕ್ಕೇರಿ: ಶಿಕ್ಷಣ ಹಾಗೂ ಧಾರ್ಮಿಕ ಕ್ಷೇತ್ರಕ್ಕೆ ಜೈನ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾವೀರ ಶಿಕ್ಷಣ ಸಂಸ್ಥೆಯ ವಿಜಯಮಾಲಾ ನಿಲಜಗಿ ಬಿಸಿಎ ಮತ್ತು ಬಿಕಾಂ ಪದವಿ ಕಾಲೇಜಿನ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು.

ಮಾಜಿ ಸಂಸದ ರಮೇಶ ಕತ್ತಿ ಮಾತನಾಡಿ, ಜೈನ ಧರ್ಮದಲ್ಲಿ ಸಂಸ್ಕೃತಿ ಹಾಗೂ ಸಂಸ್ಕಾರಗಳಿಗೆ ವಿಶೇಷ ಮಾನ್ಯತೆ ಇದೆ. ಈ ಸಮುದಾಯದಲ್ಲಿ ಗಂಡು-ಹೆಣ್ಣು ಲಿಂಗಾನುಪಾತದಲ್ಲಿ ಬಹಳಷ್ಟು ವ್ಯತ್ಯಾಸವಿದ್ದು, ಸಮಾನಾಂತರವಾಗಬೇಕಿದೆ ಎಂದರು.

ಹಿರಿಯ ವಕೀಲ ಪಿ.ಆರ್.ಚೌಗಲಾ ಮಾತನಾಡಿ, ಗ್ರಾಮೀಣ ಭಾಗದ ಬಡ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆ ಕಟ್ಟಿದ ಸಂಸ್ಥಾಪಕ ಜಿನೈಕ್ಯ ವಸಂತ ನಿಲಜಗಿ ಅವರ ಕಾರ್ಯ ಶ್ಲಾಘನೀಯ ಎಂದರು.

ಹೊಂಬುಜ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹಾಗೂ ಕೊಲ್ಲಾಪುರದ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಮಾತನಾಡಿ, ನಿಸ್ವಾರ್ಥ ಹಾಗೂ ಸೇವಾ ಮನೋಭಾವನೆಯೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ನಿಲಜಗಿ ಕುಟುಂಬ ಕಾರ್ಯ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೊಂದಾ ಸ್ವಾದಿ ದಿಗಂಬರ ಸಂಸ್ಥಾನ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಎನ್.ಆರ್.ಪುರ ಸಿಂಹನಗದ್ದೆ ಜೈನ ಮಠದ ಲಕ್ಷ್ಮಿಸೇನ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ, ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ವಡನಬೈಲು ಧರ್ಮದರ್ಶಿ ಎಚ್.ಎಂ.ವೀರರಾಜಯ್ಯನವರು ಆಶೀರ್ವಚನ ನೀಡಿದರು.

ವಸತಿ ಗಹಗಳ ಉದ್ಘಾಟನೆ, ಹೋಮ ಹವನ ಹಾಗೂ ವಿವಿಧ ವಾದ್ಯಮೇಳದೊಂದಿಗೆ ಸ್ವಾಮೀಜಿ, ಅತಿಥಿಗಳನ್ನು ಸ್ವಾಗತ ಕಾರ್ಯಕ್ರಮ ನೆರವೇರಿತು.

ಮುಖಂಡರಾದ ಉತ್ತಮ ಪಾಟೀಲ, ಧನ್ಯಕುಮಾರ ಗುಂಡೆ, ವಿನೋದ ದೊಡ್ಡಣ್ಣವರ, ಡಾ.ನೇಮಿನಾಥ ಮಗದುಮ್, ರವಿರಾಜ ಪಾಟೀಲ, ಡಿ.ಎ.ಸದಲಗಿ, ಮಾರುತಿ ಅಷ್ಟಗಿ, ಪರಮೇಶ್ವರ ಹೆಗಡೆ, ಬಾಹುಬಲಿ ಸೊಲ್ಲಾಪುರೆ, ಪ್ರಜ್ವಲ ನಿಲಜಗಿ ಇತರರಿದ್ದರು. ಸಂಸ್ಥೆ ಅಧ್ಯಕ್ಷ ಮಹಾವೀರ ನಿಲಜಗಿ ಸ್ವಾಗತಿಸಿದರು. ಡಾ.ಎಂ.ಎಸ್.ಖರಾಡೆ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net