ಜನರ ನೆಮ್ಮದಿ ಜೀವನಕ್ಕೆ ಸೈನಿಕರ ಕೊಡುಗೆ ಅಪಾರ

The contribution of soldiers to the peaceful life of the people is immense
ಬಸವನಬಾಗೇವಾಡಿ ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾರ್ಗಿಲ್​ ಹುತಾತ್ಮ ವೀರಯೋಧ ಅಶೋಕ ಜಾಧವ ಅವರ ಪ್ರತಿಮೆಗೆ ವಿವಿಧ ಸಂಟನೆಗಳ ಪದಾಧಿಕಾರಿಗಳು, ಗಣ್ಯರು ನಮನ ಸಲ್ಲಿಸಿದರು.
Published on

ಬಸವನಬಾಗೇವಾಡಿ: ಕಾರ್ಗಿಲ್​ ಯುದ್ಧದಲ್ಲಿ ನಮ್ಮ ದೇಶದ ಸೈನಿಕರು ತಮ್ಮ ಪ್ರಾಣ ಲೆಕ್ಕಿಸದೆ ಶತ್ರುಗಳ ವಿರುದ್ದ ಹೋರಾಡಿ ಜಯ ಸಾಧಿಸಿದ್ದಾರೆ ಎಂದು ವಿವೇಕ ಬ್ರಿಗೇಡ್​ ಸಂಟನೆ ಮುಖ್ಯಸ್ಥ ವಿನೂತ ಕಲ್ಲೂರ ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿವೇಕ ಬ್ರಿಗೇಡ್​, ಅಖಿಲ ಭಾರತ ವಿದ್ಯಾರ್ಥಿ ಪರಿಷತ್​, ವಿವಿಧ ಸಂಟನೆಗಳ ಸಹಯೋಗದಲ್ಲಿ ಕಾರ್ಗಿಲ್​ ವಿಜಯ ದಿವಸ ಅಂಗವಾಗಿ ಶುಕ್ರವಾರ ಕಾರ್ಗಿಲ್​ ಯುದ್ಧದಲ್ಲಿ ಹುತಾತ್ಮ ವೀರಯೋಧ ಅಶೋಕ ಜಾಧವ ಅವರ ಪ್ರತಿಮೆಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಸೈನಿಕರು ದೇಶದ ಗಡಿ ಕಾಯುತ್ತಿರುವುದರಿಂದ ನಾವೆಲ್ಲರೂ ನೆಮ್ಮದಿಯಿಂದ ಜೀವನ ಸಾಗಿಸುತಿದ್ದೇವೆ. ಯುವಕರು ಸೈನ್ಯಕ್ಕೆ ಸೇರುವ ಮೂಲಕ ದೇಶ ಸೇವೆಯಲ್ಲಿ ತೊಡಗಲು ಮುಂದಾಗಬೇಕು ಎಂದು ಹೇಳಿದರು.

ಎಬಿವಿಪಿ ಮುಖಂಡ ಸುನೀಲ ಜಮಖಂಡಿ ಮಾತನಾಡಿದರು. ಸೈನಿಕ ಪ್ರಜ್ವಲ ಬಂಡಿವಡ್ಡರ ಅವರನ್ನು ಸನ್ಮಾನಿಸಲಾಯಿತು. ಮುಖಂಡರಾದ ರವಿಗೌಡ ಚಿಕ್ಕೊಂಡ, ವಿಜಯಕುಮಾರ ರೆಡ್ಡಿ, ಪ್ರಾಚಾರ್ಯ ಎಸ್​.ಡಿ.ಪಾಟೀಲ, ಮಾಜಿ ಸೈನಿಕರಾದ ಪ್ರಕಾಶ ಮುಕಾರ್ತಿಹಾಳ, ಎಸ್​.ಎಸ್​.ಯವಲಿ, ಶಿವಾನಂದ ತೊಳನೂರ, ವಿವೇಕಾನಂದ ಕಲ್ಯಾಣಶೆಟ್ಟಿ, ಉಪನ್ಯಾಸಕರಾದ ಜಿ.ಎಸ್​.ಡೊಮನಾಳ, ಎಸ್​.ಎಸ್​.ಸಜ್ಜನ, ರಾಜಕುಮಾರ ಮುರಗೋಡ, ಮಲ್ಲಿಕಾರ್ಜುನ ಹೂಗಾರ, ಮಹಾನಂದ ನಾಯಕ, ಕಾಶೀನಾಥ ಅವಟಿ, ಎಚ್​.ಡಿ.ಬಿರಾದಾರ, ಎ.ಎಸ್​.ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net