

ಅಥಣಿ ಗ್ರಾಮೀಣ: ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಸೇವೆಗೆ ಮಠ&ಮಂದಿರಗಳ ಕೊಡುಗೆ ಅಪಾರ ಎಂದು ಶಾಸಕ ಲಕ್ಷ$್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಭರಮದೇವರ ಜಾತ್ರಾ ಮಹೋತ್ಸವ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯಲ್ಲಿ ಮಾತನಾಡಿ, ಪ್ರತಿಯೊಬ್ಬರೂ ದೇವರ ಸ್ಮರಣೆ ಮಾಡಬೇಕು. ಸಂತ, ಶರಣರ ವಾಣಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕೌಲಗುಡ್ಡದ ಅಮರೇಶ್ವರ ಮಹಾರಾಜರು, ನಾಗನೂರ ಪಿಎ ಗ್ರಾಮದ ಶಿವಸಿದ್ಧ ಮಹಾರಾಜರು ಮಾತನಾಡಿ, ಧರ್ಮ ಜಾಗೃತಿ ಮೌಲ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಹೇಳಿದರು.
ಮುಖಂಡ ಗಜಾನನ ಮಂಗಸೂಳಿ, ಯಕ್ಸಂಬಾದ ಮಾರುತಿ ಅಜ್ಜ ಮಾತನಾಡಿದರು. ಬೆಳಗ್ಗೆ ಭರಮದೇವರ ಗದ್ದುಗೆಗೆ ಮಹಾಭಿಷೇಕ, ವಿಶೇಷ ಪೂಜೆ ನೆರವೇರಿಸಿದರು. ಬಳಿಕ ಭರಮದೇವರ ಮೂರ್ತಿ ಪಲ್ಲಕ್ಕಿಯಲ್ಲಿಟ್ಟು ವಿವಿಧ ವಾದ್ಯಮೇಳ, ಕುಂಭಾರತಿಯೊಂದಿಗೆ ಮೆರವಣಿಗೆ ಮಾಡಲಾಯಿತು.
ಮುಖಂಡರಾದ ಪುಷ್ಪಕುಮಾರ ಪಾಟೀಲ, ಮಹಾದೇವ ಬಿಳಿಕುರಿ, ಪಿಕೆಪಿಎಸ್ ಅಧ್ಯಕ್ಷ ಬಸಪ್ಪ ಗುಮಟಿ, ಕೃಷ್ಣಾ ಸಕ್ಕರೆ ಕಾರ್ಖಾನೆ ನಿರ್ದೇಶಕ ಶಾಂತಿನಾಥ ನಂದೇಶ್ವರ, ಸುರೇಶ ಈಚೆರಿ, ರಾವಸಾಹೇಬ ಬೇವನೂರ, ಸಿದ್ದಪ್ಪ ಈಚೆರಿ, ಸತ್ಯಪ್ಪ ಬಾಗೆಣ್ಣವರ, ಯಲ್ಲಪ್ಪ ತೊಳಿ, ಮುರಿಯಪ್ಪ ಬಾಗೆಣ್ಣವರ, ಸಿದ್ದರಾಮ ಈಚೆರಿ ಇತರರಿದ್ದರು.