

ಇಂಡಿ: ರಾಜ್ಯದ ಎಲ್ಲ ಮತಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತರ ಕೊಡುಗೆ ಅಪಾರವಾಗಿದೆ. ಅಲ್ಪಸಂಖ್ಯಾತರು ಜಾತ್ಯಾತೀತ ನಿಲುವು ನಂಬಿ, ಶಾಂತಿ ಮತ್ತು ಪ್ರೀತಿಯಿಂದ ಬಾಳಲು ಕಾಂಗ್ರೆಸ್‌ಗೆ ಮತ ನೀಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಹಿರೇಇಂಡಿ ರಸ್ತೆಯ ಅಮರ ಫಂಕ್ಸನ್ ಹಾಲ್‌ನಲ್ಲಿ ಸೋಮವಾರ ತಾಲೂಕು ಮುಸ್ಲಿಂ ಸಮಾಜದ ವತಿಯಿಂದ ಶಾಸಕ ಯಶವಂತರಾಯಗೌಡ ಪಾಟೀಲರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಎಲ್ಲ ಸಮಾಜದ ಮತದಾರರ ಸೇವಕ. ತಾಲೂಕಿನ ಎಲ್ಲ ಸಮುದಾಯದ ಮತದಾರರು ಕಳೆದ ಏಳು ಚುನಾವಣೆಯಲ್ಲಿ ನನಗೆ ಮತ ನೀಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಬಾರಿ ಮೂರು ಜನ ಶಾಸಕರು ಇದ್ದೇವು. ಈ ಬಾರಿ ಆರು ಜನ ಜಿಲ್ಲೆಯಲ್ಲಿ ಶಾಸಕರಾಗಲು ಎಲ್ಲ ಸಮುದಾಯದವರ ಬೆಂಬಲ ಕಾರಣ ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತರು ಬೆಂಬಲಿಸಿ ಗೆಲ್ಲಿಸಿದ್ದಾರೆ ಎಂದರು.
ನಮ್ಮಲ್ಲಿ ಅನೇಕ ಭಾಷೆ, ಜಾತಿ, ಉಡುಗೆ ತೊಡುಗೆಗಳಿಲ್ಲದ್ದರೂ ಭಾವೈಕ್ಯತೆಯಲ್ಲಿ ಏಕತೆಯನ್ನು ಕಾಣುವ ರಾಷ್ಟ್ರ ನಮ್ಮದು. ವಿರೇಂದ್ರ ಪಾಟೀಲರ ನಂತರ ನಡೆದ ಚುನಾವಣೆಯಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶೇ. 40ರಷ್ಟು ಮತಗಳನ್ನು ಈ ಸಾರಿ ಪಡೆದಿದೆ. ಇದಕ್ಕೆ ಎಲ್ಲ ಸಮುದಾಯದವರ ಬೆಂಬಲ ಕಾರಣ ಮತ್ತು ಇದರಲ್ಲಿ ಅಲ್ಪಸಂಖ್ಯಾತರ ಕೊಡುಗೆಯೂ ಇದೆ ಎಂದರು.
ಜಿಯಾವುಲ್ಲಹಕ್ ಉಮರಿ, ರಿಯಾಜ ಮುಕ್ತಿ, ಎಸ್.ಎಂ. ಪಾಟೀಲ ಗಣಿಯಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ ಮೋಮಿನ, ಇಲಿಯಾಸ ಬೋರಾಮಣಿ, ಆರಿಫ್ ತುರ್ಕಿ, ಮಾಜಿದ ಸೌದಾಗರ, ಆಶೀಫ್ ಜಮಾದಾರ, ಸೌದಾಗರ, ಇಂಡಿಕರ, ಮಹಮ್ಮದ ಮಕಾನದಾರ, ಆಯುಷಾ ತಾಂಬೆ, ಅರ್ಶಿಯಾ ಮುಲ್ಲಾ ಮಾತನಾಡಿದರು.
ಜಿಲಾ ಉಲ್‌ಹಕ್ ಮೌಲಾನಾ, ಮೌಲಾನಾ ಸಹಾವುದ್ದೀನ, ಸತ್ತಾರ ಬಾಗವಾನ, ಇಂಡಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಅಫಜಲ ಹವಾಲದಾರ, ಜಹಾಂಗೀರ ಸೌದಾಗರ, ಖಾಜಾಸಾಬ ಪಟೇಲ, ಅಯೂಬ ಬಾಗವಾನ, ಮುಕ್ತಾರ ಇಂಡಿಕರ, ಮಹಿಬೂಬ ಅರಬ, ಅಸಲಂ ಕಡಣಿ, ರುಕಮುದ್ದೀನ ತದ್ದೇವಾಡಿ, ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ ಮತ್ತು ಅಂಜುಮನ್ ಸಂಸ್ಥೆಯ ಸದಸ್ಯರು ಇದ್ದರು.
ಶಾಸಕರಿಗೆ ಅಂಜುಮನ್ ಇಸ್ಲಾಂ ಸಮಿತಿಯಿಂದ ಮತ್ತು ವಿವಿಧ ಗ್ರಾಮಗಳ ಅಂಜುಮನ್ ಇಸ್ಲಾಂ ಸಮಿತಿಯಿಂದ ಸನ್ಮಾನಿಸಲಾಯಿತು.