ದೇಶದ ಬೆಳವಣಿಗೆಗೆ ವಕೀಲರ ಕೊಡುಗೆ ಅಗತ್ಯ

The contribution of lawyers is necessary for the development of the country
ಬಾಗಲಕೋಟೆ ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ಮಾಡಿದ ಬಿಜೆಪಿ ಅಭ್ಯರ್ಥಿ, ಸಂಸದ ಪಿ.ಸಿ. ಗದ್ದಿಗೌಡರ ಮತಯಾಚನೆ ಮಾಡಿದರು. ವಕೀಲರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ. ಪೂಜಾರ, ಸಂಘದ ಕಾರ್ಯದರ್ಶಿ ಎಸ್.ಎ. ಹಾವರಗಿ, ಜಿ.ಎನ್. ಪಾಟೀಲ್ ಹಾಗೂ ಸಿ.ವಿ. ಕೋಟಿ, ಶಿವಾನಂದ ಟವಳಿ, ಎಸ್.ಎಸ್. ಹಿರೇಮಠ ಎಂ.ಎಂ. ಹಂಡಿ ಇತರರಿದ್ದರು.
Published on

ಬಾಗಲಕೋಟೆ: ನಾನು ಕೂಡಾ ಕಾನೂನು ಪದವಿ ಪಡೆದು ವಕೀಲ ವೃತ್ತಿ ಮಾಡಿ ಸಮಾಜ ಸೇವೆ ಸಲ್ಲಿಸಲು ರಾಜಕೀಯಕ್ಕೆ ಬಂದಿರುವೆ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

ಲೋಕಸಭಾ ಚುನಾವಣಾ ಪ್ರಚಾರ ನಿಮಿತ್ತ ಬಾಗಲಕೋಟೆ ಜಿಲ್ಲಾ ವಕೀಲರ ಸಂಘಕ್ಕೆ ಭೇಟಿ ಮಾಡಿದ ಮತಯಾಚನೆ ಮಾಡಿದ ಅವರು, ನಮ್ಮ ಕುಟುಂಬದಲ್ಲಿ ನನ್ನನ್ನು ಹೊರತು ಪಡಿಸಿ ಕುಟುಂಬ ಸದಸ್ಯರು ಯಾರು ಗ್ರಾಮ ಪಂಚಾಯಿತಿ ಸದಸ್ಯರು ಕೂಡಾ ಆಗಿಲ್ಲಾ, ನಾನೊಬ್ಬನೆ ರಾಜಕಾರಣಕ್ಕೆ ಬಂದು ಜನರ ಸೇವೆ ಸಲ್ಲಿಸುತ್ತಿರುವೆ ಎಂದರು.

ಜಿಲ್ಲಾ ಪುನರ್ವಿಂಗಡಣಾ ಸಮಿತಿ ಅಧ್ಯಕ್ಷನಾಗಿ ಬಾಗಲಕೋಟೆಯನ್ನು ಜಿಲ್ಲೆಯನ್ನಾಗಿಸಲೂ ಪ್ರಾಮಾಣಿಕ ಪ್ರಯತ್ನ ಮಾಡಿರುವೆ. ತಮಗೆಲ್ಲಾ ಗೊತ್ತಿರುವಂತೆ ಪ್ರಧಾನಿ ಮೋದಿಯಿಂದಾಗಿ ದೇಶದಲ್ಲಿ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯೋಗಿಕವಾಗಿ ಸಾಕಷ್ಟು ಮುನ್ನಡೆಯನ್ನು ಸಾಧಿಸಿದೆ. ಎಲ್ಲರೂ ತಮ್ಮ ವೃತ್ತಿಗಳ ಮೂಲಕ ದೇಶದ ಸಾಮಾನ್ಯ ಜನರ ಸೇವೆ ಸಲ್ಲಿಸಬೇಕಾಗಿದೆ. ಆ ನಿಟ್ಟಿನಲ್ಲಿ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಎಲ್ಬರೂ ಭಾಗಿಯಾಗೋಣ, ಪ್ರಧಾನಿ ಮೋದಿಯ ಕೈಯನ್ನು ಬಲಪಡಿಸೋಣ ಎಂದು ತಮಗೆ ಮತ ನೀಡಿ ಎಂದು ಮತಯಾಚನೆ ಮಾಡಿದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಡಿ.ಬಿ. ಪೂಜಾರ, ಸಂಘದ ಕಾರ್ಯದರ್ಶಿ ಎಸ್.ಎ. ಹಾವರಗಿ, ಜಿ.ಎನ್. ಪಾಟೀಲ್ ಹಾಗೂ ಸಿ.ವಿ. ಕೋಟಿ, ಶಿವಾನಂದ ಟವಳಿ, ಎಸ್.ಎಸ್. ಹಿರೇಮಠ ಎಂ.ಎಂ. ಹಂಡಿ, ಜೆ.ಬಿ. ಬುದಿಹಾಳ, ಅಶೋಕ ಬೂದಿಹಾಳ, ಎಸ್.ಎಸ್. ದೇಸಾಯಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net