

ವಿಜಯಪುರ: ಜಯದೇವ ಜಗದ್ಗುರುಗಳು ಸಮಾಜದಿಂದಾಗಲಿ, ಸರ್ಕಾರದಿಂದಾಗಲಿ ಯಾವುದೇ ಅನುದಾನ, ದೇಣಿಗೆ ಪಡೆಯದೆ ತಮ್ಮ ಕಾಯಕದಿಂದಲೇ ಸಮಾಜಕ್ಕೆ ದೊಡ್ಡ ಕೊಡುಗೆ ಸಲ್ಲಿಸಿದ್ದಾರೆ ಎಂದು ಶಾಸಕ ಲಕ್ಷ$್ಮಣ ಸವದಿ ಹೇಳಿದರು.
ನಗರದ ಜಿ.ಪಂ. ಬಳಿಯ ವನಶ್ರೀ ಸಂಸ್ಥಾನ ಮಠದಲ್ಲಿ ಗಾಣಿಗ ಗುರುಪೀಠದ ಪ್ರಥಮ ಜಗದ್ಗುರು ಜಯದೇವ ಜಗದ್ಗುರುಗಳ 8ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಯದೇವ ಜಗದ್ಗುರುಗಳ ಪ್ರಣವ ಮಂಟಪ ಲೋಕಾರ್ಪಣೆ, ವೃತ್ತದ ಕಂಚಿನ ಮೂರ್ತಿ ಅನಾವರಣ ಹಾಗೂ ಗುರುಭವನದ ಭೂಮಿಪೂಜೆ ನೆರವೇರಿಸಿದ ಬಳಿಕ ನಡೆದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ಶ್ರೀಮಠದಲ್ಲಿ ಗುರುಭವನ ನಿರ್ಮಾಣಕ್ಕೆ ಸಮಾಜದ ಮುಖಂಡರು ಕೈಜೋಡಿಸಬೇಕು. ನಾನು ಕೂಡ ಪ್ರಥಮ ಹಂತವಾಗಿ 21 ಲ ರೂ. ದೇಣಿಗೆ ನೀಡುತ್ತೇನೆ ಎಂದು ತಿಳಿಸಿದರು.
ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಸಾಮರಸ್ಯ ಸೃಷ್ಟಿಸುವಲ್ಲಿ ಜಯದೇವ ಅಪ್ಪರವರ ಆಶೀರ್ವಾದವಿದೆ. ಸರ್ಕಾರದಿಂದಲೂ ಮಾಡಲಾಗದ ಸಾಧನೆ ವೀರಶೈವ ಲಿಂಗಾಯತ ಧರ್ಮ ಮಾಡಿದೆ. ಸುತ್ತೂರು, ಸಿದ್ಧಗಂಗಾ ಹಿಡಿದು ಬೀದರವರೆಗೂ ಎಲ್ಲ ಮಠಮಾನ್ಯಗಳು ಶಿಣದ ಜತೆಗೆ ತ್ರಿವಿಧ ದಾಸೋಹ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಿವೆ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ದೇಶ, ಹಿಂದು ಧರ್ಮ, ಮಠ ಮಂದಿರಗಳು, ರೈತರ ಆಸ್ತಿ ಹಾಗೂ ನಮ್ಮತನ ಉಳಿಯಬೇಕಾದರೆ ಲಿಂಗಾಯತ ಧರ್ಮದ ಒಳ ಪಂಗಡದವರೆಲ್ಲರೂ ಒಂದಾಗಬೇಕಾದ ಅನಿವಾರ್ಯತೆ ಇದೆ. ಅದಕ್ಕೂ ಮುನ್ನ ಎಲ್ಲ ಸಮಾಜಗಳ ಪೂಜ್ಯರು ಒಂದಾಗಬೇಕು. ಯಾರ ಮಾತಿಗೂ ಕಿವಿಗೊಡದೆ ನನಗೆ ಮತ ಹಾಕುವ ಗಾಣಿಗರ ಉಪಕಾರ ನನ್ನ ಮೇಲಿದ್ದು, ವನಶ್ರೀ ಮಠದ ಗುರುಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ 11,01,111 ರೂ. ನೀಡುವುದಾಗಿ ಶಾಸಕರು ವಾಗ್ದಾನ ಮಾಡಿದರು.
ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ ಅಧ್ಯಕ್ಷತೆ ವಹಿಸಿದ್ದರು. ಶಾಸಕ ವಿಠಲ ಕಟಕದೊಂಡ, ಸಂದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೂಡಲಸಂಗಮ ಲಿಂಗಾಯತ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಟ್ರಸ್ಟ್ ನಿರ್ದೇಶಕ ಶ್ರೀಕಾಂತ ಶಿರಾಡೋಣ, ವಿ.ಪ. ಮಾಜಿ ಸದಸ್ಯ ಬಿ.ಜಿ.ಪಾಟೀಲ ಹಲಸಂಗಿ ಮತ್ತಿತರರಿದ್ದರು.
ರ್ಮಸಭೆಗೂ ಮುನ್ನ ನಗರದ ಸಿದ್ಧೇಶ್ವರ ದೇವಸ್ಥಾನದಿಂದ ಜಯದೇವ ಜಗದ್ಗುರುಗಳ ಭಾವಚಿತ್ರದ ಮೆರವಣಿಗೆ ವಿವಿಧ ಮಾರ್ಗಗಳ ಮೂಲಕ ಸಂಚರಿಸಿ ವನಶ್ರೀ ಸಂಸ್ಥಾನ ಮಠಕ್ಕೆ ಆಗಮಿಸಿತು. ವಾದ್ಯ ವೈಭವಗಳೊಂದಿಗೆ 1,501 ಸುಮಂಗಲೆಯರಿಂದ ವಚನ ಕುಂಭಮೇಳ ಜರುಗಿತು.
ಜಯದೇವ ಜಗದ್ಗುರುಗಳ ಪ್ರಣವ ಮಂಟಪ (ಗದ್ದುಗೆ) ವನ್ನು ಸಂಸದ ಪಿ.ಸಿ. ಗದ್ದಿಗೌಡರ ಉದ್ಘಾಟಿಸಿದರು.
ಗುರುಭವನ ಕಟ್ಟಡಕ್ಕೆ ಸಚಿವ ಶಿವಾನಂದ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಜಯದೇವ ಜಗದ್ಗುರುಗಳ ವೃತ್ತದಲ್ಲಿರುವ ಕಂಚಿನ ಮೂರ್ತಿಯನ್ನು ಶಾಸಕ ಲಕ್ಷ$್ಮಣ ಸವದಿ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅನಾವರಣಗೊಳಿಸಿದರು.