

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಹಿಂದು ಸಮಾಜಕ್ಕೆ ದೈವ ಮತ್ತು ಗರಡಿಗಳು ದೊಡ್ಡ ಕೊಡುಗೆ ಕೊಟ್ಟಿದೆ. ಗರಡಿಗಳು ಬಡವರ ಕಣ್ಣೀರು ಒರೆಸುವ ಕೆಲಸ ಮಾಡಿದೆ ಎಂದು ಸಾಂದೀಪನಿ ಸಾಧನಾಶ್ರಮ ಕೇಮಾರು ಮಠದ ಸ್ವಾಮೀಜಿ ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಹೇಳಿದರು.
ಚಾರ ಮೇಲ್ಬೇಟ್ಟು ಶ್ರೀ ಬ್ರಹ್ಮಬೈದರ್ಕಳ ಮತ್ತು ಶಿವರಾಯ ಗರಡಿ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ ಗುರುವಾರ ಉದ್ಘಾಟಿಸಿ ಮಾತನಾಡಿದರು. ದಾನಿಗಳು, ವಲಯ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಿ.ಹರ್ಷ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯ್ಕುಮಾರ್ ಸೊರಕೆ, ಉದ್ಯಮಿಗಳಾದ ಸುಗ್ಗಿ ಸುಧಾಕರ ಶೆಟ್ಟಿ, ಪ್ರಸನ್ನ ಸೂಡ, ಸತೀಶ್ ಪೈ, ರಾಜೇಶ್ ನಾಯಕ್, ಕನ್ಯಾನ ಲಕ್ಷ್ಮೀನಾರಾಯಣ್ ನಾಯಕ್, ವಕೀಲ ಪ್ರಸನ್ನ ಶೆಟ್ಟಿ, ಗರಡಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಗೌರವಾಧ್ಯಕ್ಷ ಬಿ.ಹರ್ಷ ಶೆಟ್ಟಿ ಹುತ್ತುರ್ಕೆ, ಆನುವಂಶಿಕ ಆಡಳಿತ ಮೊಕ್ತೇಸರ ಸುರೇಶ ಹೆಗ್ಡೆ ತಾರಾಳಿ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಸಿ.ಎಂ.ಪ್ರಸನ್ನ ಕುಮಾರ್ ಶೆಟ್ಟಿ, ಆರ್ಥಿಕ ಸಮಿತಿ ಅಧ್ಯಕ್ಷ ವಾದಿರಾಜ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ಮಿಥುನ್ ಶೆಟ್ಟಿ ಚಾರ, ಪುರೋಹಿತ್ ಸುಬ್ರಹ್ಮಣ್ಯ ಹೇರಳೆ, ಗರಡಿ ಪೂಜಾರಿ ವರ್ಗದವರಾದ ಲಕ್ಷ್ಮಣ ಪೂಜಾರಿ, ಸುಧಾಕರ ಪೂಜಾರಿ, ಆಡಳಿತ ಮಂಡಳಿ, ಜೀರ್ಣೋದ್ಧಾರ ಸಮಿತಿ, ಆನುವಂಶಿಕ 9 ಮನೆಯವರು, ವಾರ್ಡ್ ಸಮಿತಿ ಮುಖ್ಯಸ್ಥರು, ಸದಸ್ಯರು ಉಪಸ್ಥಿತರಿದ್ದರು.
ಸತ್ಯ ನ್ಯಾಯಕ್ಕೆ ದುಡಿದ ಅಪೂರ್ವ ವ್ಯಕ್ತಿತ್ವ ಕೋಟಿ ಚೆನ್ನಯರು. ತುಳುನಾಡಿನ ಆಚಾರ ವಿಚಾರ, ಸಂಪ್ರದಾಯ, ಪರಂಪರೆ, ಆಹಾರ ಪದ್ಧತಿಗಳು ಪವಿತ್ರವಾದದ್ದು. ಮುಂದಿನ ದಿನಗಳಲ್ಲಿ ಈ ಪುಣ್ಯ ಪುರುಷರ ಬಗ್ಗೆ ಮತ್ತಷ್ಟು ಅಧ್ಯಯನ ನಡೆಯಲಿ. -ವಿನಯ್ಕುಮಾರ್ ಸೊರಕೆ ಮಾಜಿ ಸಚಿವ https://www.vijayavani.net/folk-art-passed-down-from-generation-to-generation https://www.vijayavani.net/karkala-taluk-in-fear-of-artificial-flooding