ಚಳವಳಿಯಲ್ಲಿ ಧಾರವಾಡದ ಕೊಡುಗೆ ಅಪಾರ

11 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ಕಾಲೇಜು ಸೇರಿ ಧಾರವಾಡದ ಅನೇಕ ಐತಿಹಾಸಿಕ ಶಿಕ್ಷಣ ಸಂಸ್ಥೆಗಳು ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ಇತಿಹಾಸದ ವಿಭಾಗದ ಮುಖ್ಯಸ್ಥ ಪ್ರೊ. ಜಗದೀಶ ಕಿವುಡನವರ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ ಹಾಗೂ ಕರ್ನಾಟಕ ಕಲಾ ಕಾಲೇಜಿನ ಇತಿಹಾದ ವಿಭಾಗವು ಪ್ರವಾಸೋದ್ಯಮ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕದ ಏಕೀಕರಣದಲ್ಲಿ ಧಾರವಾಡ ಶಿಕ್ಷಣ ಸಂಸ್ಥೆಗಳ ಪಾತ್ರ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧಾರವಾಡ ಶಿಕ್ಷಣ ಕಾಶಿ, ಸಾಂಸ್ಕೃತಿಕ ನಗರವಾಗಿ ದೇಶ ಮತ್ತು ನಾಡಿಗೆ ತನ್ನದೇ ಆದ ಕೊಡುಗೆ ನೀಡಿದೆ. ನಗರದ ಹೆಸರಾಂತ ಶಿಕ್ಷಣ ಸಂಸ್ಥೆಗಳು ಅನೇಕ ಹೋರಾಟಗಾರರನ್ನು ರೂಪಿಸಿವೆ. ಸ್ವಾತಂತ್ರ್ಯದ ಕಾಲಘಟ್ಟದಲ್ಲಿ ಕರ್ನಾಟಕ ಕಾಲೇಜು, ಟ್ರೇನಿಂಗ್​ ಕಾಲೇಜು ಸೇರಿ ವಿವಿಧ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯದ ಮಹತ್ವ ತಿಳಿಸಿವೆ. ಅದರಲ್ಲಿ ಅನೇಕ ವಿದ್ಯಾರ್ಥಿ ಚಳವಳಿಗಳು ಶಿಕ್ಷಣ ಸಂಸ್ಥೆಗಳ ಆವರಣದಲ್ಲೇ ರೂಪುಗೊಂಡಿವೆ ಎಂದರು.
ಪ್ರಭು ಕುಂದರಗಿ ಹಾಗೂ ತಂಡ ದೇಶಭಕ್ತಿ ಗೀತೆ ಪ್ರಸ್ತುತಪಡಿಸಿದರು. ಮೇಘಾ ಪಾಟೀಲ, ಮಾಲತೇಶ ಹುಣಸೀಮರದ, ವಿನಾಯಕ ಶೇಠ, ಪಾರ್ವತಿ ಪಟ್ಟಣಶೆಟ್ಟಿ, ಶೈಲಜಾ ವಡಕಣ್ಣವರ, ಡಾ. ಸುಷ್ಮಾ ಮಳಿಗಿ, ಸಂದೀಪ ಘೋರ್ಪಡೆ, ಸುಷ್ಮಾ ಅರಳಿ, ಶಿಲ್ಪಾ ರೇವಣಕರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net