ಭಕ್ತರ ಕೊಡುಗೆ ಅಪಾರ

16Aigali1
Published on

ಐಗಳಿ: ಶಿವಯೋಗಿ ಮಾಣಿಕಪ್ರಭುಗಳ ಜಾತ್ರೆ ಸುವ್ಯವಸ್ಥಿತವಾಗಿ ನಡೆಯಲು ಶ್ರೀಗಳ ಕೃಪಾಶೀರ್ವಾದ ಮತ್ತು ಭಕ್ತರ ಸೇವೆ ಕಾರಣ ಎಂದು ಮಾಜಿ ಶಾಸಕ ಶಹಜಹಾನ್​ ಡೊಂಗರಗಾಂವ ಹೇಳಿದರು.

ಐಗಳಿ ಕ್ರಾಸ್​ ಮಾಣಿಕಪ್ರಭುಗಳ ಜಾತ್ರೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ 3ನೇ ದಿನದ ಶಿವಾನುಭವ ಗೋಷ್ಠಿ ಹಾಗೂ ಉತ್ತಮ ಜಾನುವಾರುಗಳಿಗೆ ಪಾರಿತೋಷಕ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಜಾತ್ರೆ ಇಷ್ಟೊಂದು ವಿಜೃಂಭಣೆಯಿಂದ ನೆರವೇರಲು ಭಕ್ತರ ಕೊಡುಗೆ ಅಪಾರ ಎಂದರು.

ಬೀದರ ಜಿಲ್ಲೆಯ ಹೆಡಗಾಪುರ ಶಿವಲಿಂಗೇಶ್ವರ ಮಠದ ಷ.ಬ್ರ ದಾರುಕಲಿಂಗ ಶಿವಾಚಾರ್ಯರು ಮತ್ತು ಅಭಿನವ ರಾಚೋಟೇಶ್ವರ ದೇವರು ಆಶೀರ್ವಚನ ನೀಡಿದರು. ಹೊನವಾಡದ ಬಾಬುರಾವ ಶರಣರು, ಪ್ರಕಾಶ ಪೂಜಾರಿ ಮಾತನಾಡಿದರು. ಕೋಹಳ್ಳಿಯ ಮಲಗೌಡ ಪೋಲಿಸ್​ ಪಾಟೀಲ ಅವರ ಹೋರಿಗೆ ಉತ್ತಮ ಜಾನುವಾರು ಎಂದು ಅರ್ಧ ತೊಲ ಬಂಗಾರದ ಪದಕ, ಪ್ರಶಸ್ತಿ ಪತ್ರ ಹಾಗೂ ಉಳಿದ ಉತ್ತಮ ಜಾನುವಾರುಗಳಿಗೆ ಬಹುಮಾನ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಟ್ರಸ್ಟ್​ ಕಮಿಟಿ ಅದ್ಯ ಪ್ರಲ್ಹಾದ ಪಾಟೀಲ, ಮುಖಂಡರಾದ ಎ.ಎಸ್​.ನಾಯಿಕ, ಸಿ.ಎಸ್​.ನೇಮಗೌಡ, ಜಿ.ಎಸ್​.ಬಿರಾದಾರ, ಬೈರಪ್ಪ ಬಿಜ್ಜರಗಿ, ಪ್ರಕಾಶ ಪಾಟೀಲ, ಬಸವರಾಜ ಬಿರಾದಾರ, ಎ.ಎಸ್​.ಪಾಟೀಲ, ದುಂಡಪ್ಪ ದೊಡಮನಿ, ಬಾಳ ಮುಜಾವರ, ಬಂದೇನಮಾಜ ಮುಜಾವರ, ಅಣ್ಣಾರಾಯ ಹಾಲಳ್ಳಿ, ಬೈರಪ್ಪ ಹುಣಸಿಕಟ್ಟಿ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net