ಪುರಂದಾಸರ ಕೊಡುಗೆ ಅಪಾರ

Published on

ಬಳ್ಳಾರಿ : ದಾಸ ಸಾಹಿತ್ಯಕ್ಕೆ ಪುರಂದರದಾಸರ ಕೊಡುಗೆ ಅಪಾರ ಎಂದು ಬಳ್ಳಾರಿ ಪೂರ್ವ ವಲಯದ ಬಿಇಒ ನಯಿಮೂರ್ ರಹೆಮಾನ್ ಹೇಳಿದರು.

ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದಾಸ ಸಾಹಿತ್ಯಕ್ಕೆ ಪುರಂದರದಾಸರ ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನ್ನಡ ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಪುರಂದರದಾಸರ ಸೇವೆ ಅನನ್ಯ. ಕನ್ನಡ ಸಾಹಿತ್ಯ, ಭಾಷೆ ಶ್ರೀಮಂತಗೊಳಿಸಿದ್ದಾರೆ. ಅವರ ಕೀರ್ತನೆಗಳು ಜನಸಾಮಾನ್ಯರೂ ಹಾಡುವಂತಿವೆ. ಸಂಗೀತ ಕ್ಷೇತ್ರದಲ್ಲಿ ಅವರ ಸಾಧನೆ ಗುರುತಿಸಿ ಅವರನ್ನು ಕರ್ನಾಟಕ ಸಂಗೀತ ಪಿತಾಮಹ ಎಂದೇ ಕರೆಯುತ್ತಾರೆ ಎಂದು ಹೇಳಿದರು.

ಶಾಲೆಯ ಮುಖ್ಯಗುರು ರವಿಚೇಳ್ಳಗುರ್ಕಿ ಮಾತನಾಡಿ, ಅಂಬಿಗ ನಾ ನಿನ್ನ ನಂಬಿದೆ, ಮಾನವ ಜನ್ಮ ದೊಡ್ಡದು ಅದನ್ನು ಹಾಳು ಮಾಡಿ ಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂಬ ಕೀರ್ತನೆಗಳು ಮಾನವನ ಬದುಕು ಹಸುನಾಗಿಸಲು ಬರೆದಿದ್ದಾರೆ.

ಶಾಸ್ತ್ರೀಯ ಸಂಗೀತವನ್ನು ಜನ ಸಾಮಾನ್ಯರು ಹಾಡುವಂತೆ ದಾರಿತೋರಿದ ಮಹಾವಿದ್ವಾಂಸರು. ಅದಕ್ಕಾಗಿಯೇ ಅವರನ್ನು ದಾಸರೆಂದರೆ ಪುರಂದರ ದಾಸರಯ್ಯ ಎಂದು ಕೊಂಡಾಡಿದ್ದಾರೆ.ಆದ್ದರಿಂದ, ವಿದ್ಯಾರ್ಥಿಗಳು ಪುರಂದರ ದಾಸರ ಹಾಗೂ ಕನಕದಾಸರ ಕೀರ್ತನೆಗಳನ್ನು ಸಂಗ್ರಹಿಸಿ ಹಾಡಲು ಕಲಿಯಿರಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net