ಬಸವಾದಿ ಶರಣರ ಕೊಡುಗೆ ಅಪಾರ

5mnd3=
Published on

ಮುಂಡಗೋಡ: ಲಿಂಂಗಾಯತ ಧರ್ಮ ಶ್ರೇಷ್ಠವಾಗಲು ಬಸವಾದಿ ಶರಣರ ಕೊಡುಗೆ ಅಪಾರ ಎಂದು ಅತ್ತಿವೇರಿ ಬಸವಧಾಮದ ಬಸವೇಶ್ವರ ಮಾತಾಜಿ ಹೇಳಿದರು.

ಪಟ್ಟಣದ ಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ವೀರಶೈವ ಲಿಂಗಾಯತ ನೌಕರ ಸಂಘದ ವಾರ್ಷಿಕ ಸಭೆ, ವಧು-ವರರ ಸಮಾವೇಶ, ಪ್ರತಿಭಾ ಪುರಸ್ಕಾರ, ದಿನದರ್ಶಿಕೆ ಬಿಡುಗಡೆ, ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀವರ್ಚನ ನೀಡಿದರು. ಸಮಾಜಕ್ಕಾಗಿ ದುಡಿಯುವುದೇ ಶ್ರೇಷ್ಠತೆ. ಧರ್ಮದ ಲಾಂಛನಗಳನ್ನು ಪ್ರತಿಯೊಬ್ಬರೂ ಹಾಗೂ ಆಚರಿಸಬೇಕು. 103ಉಪ ಪಂಗಡಗಳು ಸೇರಿ ಲಿಂಗಾಯತ ಧರ್ಮವಾಗಿದೆ ಎಂದರು.

ಮಾಜಿ ಶಾಸಕ ವಿ.ಎಸ್. ಪಾಟೀಲ ಮಾತನಾಡಿ, ಮೊದಲು ಸಮಾಜ ಸೇವೆ ಮಾಡಬೇಕು ನಂತರ ಸಮಾಜದಿಂದ ಆಪೇಕ್ಷೆಪಡಬೇಕು. ನಾವೆಲ್ಲ ಒಗ್ಗಟ್ಟಾದಾಗ ಮಾತ್ರ ಏನಾದರೂ ಸಾಧಿಸಬಹುದು ಎಂದರು.

ಹನುಮಾಪುರ ಕಾಳಿಕಾದೇವಿ ಮಠದ ಸೋಮೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಿದರು. ಸಂಘದ 2025ನೇ ಸಾಲಿನ ದಿನದರ್ಶಿಕೆ ಬಿಡುಗಡೆ ಮಾಡಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳು, ವಿಶೇಷ ಸಾಧನೆ ಮಾಡಿದ ಸಮಾಜದ ಹಿರಿಯರು ಹಾಗೂ ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

ಬಸನಗೌಡ ಎಚ್.ಎನ್., ಬಸವರಾಜ ನಡವಿನಮನಿ, ನಿಂಗಯ್ಯ ಸುರಗಿಮಠ, ಬಸವರಾಜ ಪಾಟೀಲ, ಎಸ್.ವಿ. ಹೊಸಮನಿ, ಎಂ.ಎಸ್. ಕಾರ್ಕಳ, ಶ್ರೀಶೈಲ್ ಐನಾಪುರ, ಸಂಗಪ್ಪ ಕೋಳೂರ, ಷಣ್ಮುಖ ಬಾಗಿಲದವರ, ಎಸ್.ಎಂ. ವಾಲಿ, ಎನ್.ಜಿ. ಕಾಮನಳ್ಳಿ, ಎಸ್.ಬಿ. ಹೂಗಾರ, ಬಸವರಾಜ ತುರಮುರಿ, ಶಂಕರ ಬಾಗೇವಾಡಿ, ಕಲ್ಮೇಶ ದುಗ್ಗಳ್ಳಿ, ಎನ್.ಐ. ಕೋಟಿ, ವಿ.ವಿ. ಮಲ್ಲನಗೌಡ್ರ, ಯಲ್ಲಪ್ಪ ಹಳ್ಳಿ, ಮಲ್ಲಪ್ಪ ಮೇಟಿ, ಬಸವರೆಡ್ಡೆಪ್ಪ ಮೇಟಿ, ಪ್ರಕಾಶ ಮೊಸಳಗಿ, ನಾಗಪ್ಪ ಕಡಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net