

ತೇರದಾಳ: ಶಿಕ್ಷಣ ಸಂಸ್ಥೆಗಳನ್ನು ಕಟ್ಟುವುದು ಮುಖ್ಯವಲ್ಲ. ಬದಲಾಗಿ ಅಲ್ಲಿ ಮಕ್ಕಳಿಗೆ ಎಂತಹ ಶಿಕ್ಷಣ ಹಾಗೂ ಏನು ಸಂಸ್ಕಾರ ನೀಡುತ್ತಿದ್ದೇವೆ ಎಂಬುದರ ಮೇಲೆ ಸಂಸ್ಥೆಯ ಏಳಿಗೆ ಕಾಣುತ್ತದೆ. ಆ ದಿಸೆಯಲ್ಲಿ ದಾನಿಗೊಂಡ ಅವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಮಾಜಿ ಸಚಿವ ಮುರುಗೇಶ ನಿರಾಣಿ ಹೇಳಿದರು.
ಇಲ್ಲಿನ ಡಾ. ಸಿದ್ಧಾಂತ ದಾನಿಗೊಂಡ ಸೆಂಟ್ರಲ್ ಸ್ಕೂಲ್‌ನಲ್ಲಿ ಸಂಜೆ ಹಮ್ಮಿಕೊಂಡಿದ್ದ ಜರ್ನಿ ಆಫ್ ಲೆಜೆಂಡ್ಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಂಬಿಬಿಎಸ್ ಕಾಲೇಜ್ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಮಾಡಿಸುವುದು ನನ್ನ ಜವಾಬ್ದಾರಿ ಎಂದು ಅಭಿಮಾನದಿಂದ ಹೇಳಿದರು.
ಬೆಂಗಳೂರಿನ ವಿಜ್ಞಾನಿ ವೆಂಟಕೇಶ್ವರಾವ್ ಕೌಶಿಕ, ಅಲೇನ್ ಕೋಚಿಂಗ್ ಮುಖ್ಯಸ್ಥ ಸೀತಾರಾಮ ನಂದೂರಿ ಮಾತನಾಡಿ, ಪಾಲಕರು ಮಕ್ಕಳನ್ನು ಬರೀ ಶಾಲೆಗೆ ಕಳುಹಿಸಿದರೆ ಸಾಲದು, ಶಿಕ್ಷಕರ ಜತೆಗೆ ಮಕ್ಕಳ ಆಗು-ಹೋಗುಗಳ ಬಗ್ಗೆ ಕಾಳಜಿ ವಹಿಸಬೇಕೆಂದರು.
ಭಾರತ ಇಂದು ಜಗತ್ತಿನ ಯಾವುದೇ ರಾಷ್ಟ್ರಗಳಿಗೆ ಕಡಿಮೆ ಇಲ್ಲ. ಅಷ್ಟೊಂದು ಸದೃಢವಾಗಿದೆ. ಸದೃಢವಾದ ಸಮಾಜ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಸಂಸ್ಥೆ ಚೇರ್ಮನ್ ಡಾ. ಮಹಾವೀರ ದಾನಿಗೊಂಡ, ವಿನಯ ಪಾಟೀಲ ಮಾತನಾಡಿ, ಸಾಧನೆ ಮಾಡುವಾಗ ಯಾವತ್ತೂ ಆತ್ಮ ವಿಶ್ವಾಸ ಕಳೆದುಕೊಳ್ಳಬೇಡಿ. ಅದನ್ನು ಕಳೆದುಕೊಂಡರೆ ಸಾಧನೆ ಶಿಖರ ಏರುವುದನ್ನು ಕುಗ್ಗಿಸುತ್ತದೆ. ಪಾಲಕರು ಕೂಡ ಮಕ್ಕಳ ಅಂಕಗಳ ವಿಷಯದಲ್ಲಿ ಹಠ ಸಾಧಿಸಬೇಡಿ ಎಂದು ಹೇಳಿದರು.
ಸಂಸ್ಥೆಯ ಪ್ರತಿಭಾ ದಾನಿಗೊಂಡ, ವ್ಯವಸ್ಥಾಪಕ ನಿರ್ದೇಶಕ ಡಾ. ಪುಷ್ಪದಂತ ದಾನಿಗೊಂಡ, ಪ್ರಾಚಾರ್ಯ ಪ್ರದೀಪ ಪಾಟೀಲ, ಆಡಳಿತಾಧಿಕಾರಿ ರಾಜೇಂದ್ರ ಪರೀಟ್, ಮೆಡಿಕಲ್ ಕಾಲೇಜ್ ಅಧೀಕ್ಷಕ ಡಾ. ಪಿ.ಬಿ. ಅಪರಾಜ, ಪ್ರಭು ಹಿಪ್ಪರಗಿ, ಅಜೀತ ದೇಸಾಯಿ, ಡಾ. ರವಿ ಜಮಖಂಡಿ, ಡಾ. ಮಧುರಾ ದಾನಿಗೊಂಡ, ಪ್ರವೀಣ ನಾಶಿ ಮತ್ತಿತರಿದ್ದರು.