ಪ್ರತಿಭಟನೆ ನಡೆಸಲು ಗುತ್ತಿಗೆದಾರರ ತೀರ್ಮಾನ

22 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಜ್ಯ ಸರ್ಕಾರ ಸಿವಿಲ್​ ಗುತ್ತಿಗೆದಾರರ ಬಾಕಿ ಹಣವನ್ನು ಜೂ. 30ರೊಳಗೆ ಸಂಪೂರ್ಣ ಪಾವತಿ ಮಾಡಬೇಕು. ಇಲ್ಲವಾದಲ್ಲಿ ಜು. 10ರಂದು ಪ್ರತಿಭಟನೆ ಹಮ್ಮಿಕೊಳ್ಳಲು ಉತ್ತರ ಕರ್ನಾಟಕ ಸಿವಿಲ್​ ಗುತ್ತಿಗೆದಾರರ ಸಂಘದ ಸದಸ್ಯರು ನಿರ್ಧರಿಸಿದ್ದಾರೆ.
ನಗರದ ಜಿಮಖಾನಾ ಕ್ಲಬ್​ನಲ್ಲಿ ಶನಿವಾರ ಏರ್ಪಡಿಸಿದ್ದ ಉತ್ತರ ಕರ್ನಾಟಕ ಸಿವ್ಹಿಲ್​ ಗುತ್ತಿಗೆದಾರರ ಸಂಘದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಸಂಘದ ಅಧ್ಯಕ್ಷ ಸುಭಾಷ ಪಾಟೀಲ ಮಾತನಾಡಿ, ಗುತ್ತಿದಾರರ ಬಾಕಿ ಪಾವತಿ ಕುರಿತು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬಾಕಿ ಪಾವತಿ ಆಗದ ಕಾರಣ ಕೆಲಸ ನಿರ್ವಹಿಸುವುದೇ ಕಷ್ಟಕರವಾಗಿದೆ. ಜೂ. 30ರೊಳಗೆ ಪಾವತಿ ಮಾಡದೇ ಇದ್ದಲ್ಲಿ ಹೋರಾಟ ನಡೆಸುವುದು ಅನಿವಾರ್ಯ. ಇದಕ್ಕೆ ಸಂಘದ ಎಲ್ಲ ಸದಸ್ಯರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಇದಕ್ಕೂ ಪೂರ್ವ ಗುತ್ತಿಗೆದಾರರ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚೆ ನಡೆಸಲಾಯಿತು. ಪ್ರರವೀಂದ್ರ ಮಾನೆ, ಖಜಾಂಚಿ ಅಷ್ಪಾಕ ಬೆಟಗೇರಿ, ಆಡಳಿತ ಮಂಡಳಿ ಸದಸ್ಯರಾದ ಸುಧಾಕರ ರೆಡ್ಡಿ, ಬಿ.ಎಂ. ಪಾಟೀಲ, ಧಾರವಾಡ ಜಿಲ್ಲಾ ಗುತ್ತಿಗೆದಾರರ ಸಂಘದ ಬಿ.ವಿ.ಹಿರೇಮಠ, ಎನ್​.ಪಿ. ಅಷ್ಟಗಿ, ಎಂ.ಬಿ. ಕಾಮಶೆಟ್ಟಿ, ಎಚ್​. ಜೆ. ಸಿಂಗ್​, ಶೇಖಪ್ಪ ಸೀತಿಮನಿ, ಎ​.ಎ. ಕುಂದಗೋಳ, ಯಂಕಪ್ಪ ಬಂಡಿವಡ್ಡರ, ಕೃಷ್ಣಾ ದಾಟನಾಳ, ಜಿ.ಎ. ಮಿಶ್ರಿಕೋಟೆ, ಕೆ.ಎಸ್​. ಚವ್ಹಾಣ, ಸದಸ್ಯರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net