

ಮಧುಗಿರಿ: ಪಟ್ಟಣದಲ್ಲಿ ಪಾವಗಡ ರಸ್ತೆಯಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಅವೈಜ್ಞಾನಿಕ ರಸ್ತೆ ವಿಭಜನೆಯಿಂದ ಸಂಭವಿಸುತ್ತಿದ್ದ ರಸ್ತೆ ಅಪಘಾತಗಳಿಗೆ ಮುಕ್ತಿ ಸಿಕ್ಕಂತಾಗಿದೆ.
ಪೊಲೀಸ್ ವೃತ್ತ ನಿರೀಕ್ಷಕ ಎಂ.ಎಸ್.ಸರ್ದಾರ್ ವಿಶೇಷ ಆಸಕ್ತಿಯ ಹಿನ್ನೆಲೆಯಲ್ಲಿ ವೈಜ್ಞಾನಿಕ ವೃತ್ತ ನಿರ್ಮಾಣವಾಗಿದ್ದು, ಸಾರ್ವಜನಿಕರಿಂದ ಪೊಲೀಸರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ರಾತ್ರಿ ವಾಹನ ಚಾಲಕರಿಗೆ ಸರಿಯಾಗಿ ಕಾಣದೆ ಬಹಳಷ್ಟು ಅಪಘಾತಗಳು ಈ ವೃತ್ತದಲ್ಲಿ ಸಂಭವಿಸಿದ್ದವು. ಪ್ರಸ್ತುತ ವೃತ್ತವನ್ನು ಎತ್ತರಪಡಿಸಿ ವಾಹನ ಸವಾರರಿಗೆ ಮಾರ್ಗಸೂಚಿಗಳ ಸ್ಟಿಕ್ಕರ್ ಕಾಣಿಸುವಂತೆ ಮಾಡಲಾಗಿದೆ. ಹಾಗೆಯೇ ರಾಜ ಚಿಕ್ಕಪ್ಪಗೌಡ ವೃತ್ತ, ಶಿರಾಗೇಟ್ ಬೆಸ್ಕಾಂ ಮುಂಭಾಗದ ವೃತ್ತ ವಿಸ್ತರಣೆಗೆ ‘ಶಿರಾಗೇಟ್ ಬಾಯ್ಸ್’ ಸ್ವಯಂ ಸೇವಕರಾಗಿ ಕೆಲಸಮಾಡಿದ್ದು ಅಲ್ಲಿಯೂ ಹೊಸ ಲುಕ್ ಕೊಟ್ಟಿದ್ದಾರೆ.
ಮಾರ್ಗಸೂಚಿ ಫಲಕ ಅಳವಡಿಸಿ!: ಮಧುಗಿರಿ ಪಟ್ಟಣದಲ್ಲಿ ಯಾವುದೇ ಬಡಾವಣೆ, ರಸ್ತೆ, ವೃತ್ತ ಗಳಿಗೆ ಅಧಿಕೃತವಾದ ಹೆಸರುಗಳಿಲ್ಲದೆ ಹಾಡುಭಾಷೆಯಲ್ಲಿಯೇ ಕರೆಯಲಾಗುತ್ತಿದೆ. ಸ್ಥಳೀಯ ಸಂಸ್ಥೆ ಮುತುವರ್ಜಿವಹಿಸಿ ರಸ್ತೆ ಹಾಗೂ ವೃತ್ತಗಳಿಗೆ ನಾಮಕರಣ ಮಾಡಬೇಕು.
ಪಟ್ಟಣದಲ್ಲಿ ಅವೈಜ್ಞಾನಿಕ ವೃತ್ತದ ಕಾರಣಕ್ಕೆ ಅಪಘಾತ ಹೆಚ್ಚಾಗಿದ್ದವು, ಸ್ಥಳೀಯರ ಸಹಕಾರದಿಂದ ಪಟ್ಟಣದ ಎಲ್ಲ ವೃತ್ತಗಳನ್ನು ವೈಜ್ಞಾನಿಕವಾಗಿ ನಿರ್ಮಿಸುವ ಸಂಕಲ್ಪವಿದೆ. ಎಂ.ಎಸ್.ಸರ್ದಾರ್ ವೃತ್ತ ನಿರೀಕ್ಷಕ, ಮಧುಗಿರಿ ಪೊಲೀಸ್ ಠಾಣೆ