ನೆಲಮಂಗಲದಲ್ಲಿ ಭವನ ನಿರ್ಮಾಣ ಶ್ರೀರ್ಘ

28 06 2025_BGR RURAL_PAGE_03
ನೆಲಮಂಗಲದ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಶಾಸಕ ಎನ್​.ಶ್ರೀನಿವಾಸ್​ ಉದ್ಘಾಟಿಸಿದರು. ಬಸವನಹಳ್ಳಿ ಶಿವಾನಂದ ಆಶ್ರಮದ ಶ್ರೀ ರಮಾನಂದನಾಥ ಸ್ವಾಮೀಜಿ, ತಹಸೀಲ್ದಾರ್​ ಅಮೃತ್​ ಆತ್ರೇಶ್​, ತಾಪಂ ಇಒ ಲ್ಮನಾರಾಯಣ್​, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್​ಗೌಡ, ಸದಸ್ಯ ಬಿ.ಜಿ.ವಾಸು, ಮಾಜಿ ಅಧ್ಯಕ್ಷ ಸಿ.ಆರ್​.ಗೌಡ, ಹೇಮಂತ್​ಕುಮಾರ್​ ಇದ್ದರು.
Published on

ನೆಲಮಂಗಲ : ಶಾಸಕರ 5 ಕೋಟಿ ಅನುದಾನ, ವೈಯಕ್ತಿಕ ಒಂದು ಕೋಟಿ ಸೇರಿ ಸರ್ಕಾರದಿಂದ ವಿಶೇಷ ಅನುದಾನ ನೀಡಿ ನಗರದಲ್ಲಿ 25 ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತ ಬೃಹತ್​ ಕೆಂಪೇಗೌಡ ಭವನ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಒಕ್ಕಲಿಗರ ಸಮುದಾಯ ವಿವಿಧ ಸಂಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದರು. ಕೆಂಪೇಗೌಡರು ೇತ್ರದ ರೈತರಿಗೆ ಪ್ರಾಧಾನ್ಯತೆ ನೀಡಿದ್ದು, ತಾಲೂಕಿನ ಕೆರೆಗಳನ್ನು ತುಂಬಿಸುವ ಹಾಗೂ ಅಂತರ್ಜಲ ಹೆಚ್ಚಿಸುವ ಉದ್ದೇಶದಿಂದ ವೃಷಭಾವತಿ ಯೋಜನೆ ತರಲಾಗಿದೆ ಎಂದರು. ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಕೆಂಪೇಗೌಡರ ಇತಿಹಾಸ ಹಾಗೂ ಅವರ ಸಾಧನೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ಬೆಂಗಳೂರು ರಾಜ್ಯ ರಾಜಧಾನಿಯಾಗುವ ಸಾಮಾರ್ಥ್ಯ ತಂದು ಕೊಟ್ಟ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ ಎಂದರು.

ಶಾಸಕರಿಗೆ ಕೆಂಪೇಗೌಡ ರತ್ನ ಪ್ರಶಸ್ತಿ: ಒಕ್ಕಲಿಗ ಸಮುದಾಯದಿಂದ ಶಾಸಕ ಎನ್​.ಶ್ರೀನಿವಾಸ್​ ಅವರಿಗೆ ಕೆಂಪೇಗೌಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಧಕರಿಗೆ ಸನ್ಮಾನ: ವಿವಿಧ ೇತ್ರದಲ್ಲಿ ಸಾಧನೆ ಮಾಡಿದ್ದ ತಾಲೂಕಿನ 50ಕ್ಕೂ ಹೆಚ್ಚು ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಸಿಂಚನಾ ಕಲಾ ತಂಡದ ಸಿ.ಎಚ್​.ಸಿದ್ದಯ್ಯ ನೇತೃತ್ವದ ತಂಡ ಗೀತಗಾಯನ ನೇರವೇಸಿಕೊಟ್ಟರು.

ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಆನಂದ್​, ಸದಸ್ಯ ಪ್ರದಿಪ್​, ಶಿವಕುಮಾರ್​, ಅಂಜನಮೂರ್ತಿ, ಪೂರ್ಣಿಮಾ ಸುಗ್ಗರಾಜು, ಲತಾ ಹೇಮಂತ್​ ಕುಮಾರ್​, ಶಾರದಾ, ಲೋಲಾ, ಒಕ್ಕಲಿಗ ೇಮಾಭಿವೃದ್ಧಿ ಟ್ರಸ್​ ಅಧ್ಯಕ್ಷ ಎಂ.ಕೆ.ನಾಗರಾಜು, ಒಕ್ಕಲಿಗ ಮಹಿಳಾ ಚಾರಿಟಬಲ್​ ಟ್ರಸ್​ ಅಧ್ಯೆ ಚಂದಿಕಾ, ಪ್ರಧಾನ ಕಾರ್ಯದರ್ಶಿ ಮಂಜುಳಾ ಗಣೇಶ್​, ವಕೀಲ ರುನಾಥ್​, ಮುಖಂಡ ಎಚ್​.ಜಿ.ರಾಜು, ಮೋಹನ್​ ಕುಮಾರ್​, ನಟರಾಜು, ಚಿಕ್ಕಹನುಮೇಗೌಡ, ಜಗದೀಶ್​ಚೌಧರಿ, ಸಿ.ಎಂ.ಗೌಡ, ರಾಮಕೃಷ್ಣಪ್ಪ, ಟಿ.ನಾಗರಾಜು, ಮಧುಸೂದನ್​, ಚನ್ನಪ್ಪ, ಬೂದಿಹಾಲ್​ ಕಿಟ್ಟಿ, ಶೇಖರ್​, ವಿಷ್ಣು, ಆರ್​.ಪ್ರಮೋದ್​ಕುಮಾರ್​, ಮಂಜುನಾಥ್​ ಇದ್ದರು.

ಕೆರೆಗೆ ಕೆಂಪೇಗೌಡರ ಮರುನಾಮಕರಣ : ನಗರದ ಕೆರೆಗೆ 18 ಕೋಟಿ ರೂ. ಹಾಗೂ ಬಿನ್ನಮಂಗಲ ಕೆರೆಗೆ 12 ಕೋಟಿ ರೂ. ವೆಚ್ಚದಲ್ಲಿ ಶುದ್ಧೀಕರಣ ಹಾಗೂ ಅಭಿವೃದ್ಧಿ ಕಾರ್ಯಕ್ಕೆ ಅನುದಾನ ಮೀಸಲಿಡಲಾಗಿದೆ. ಶುದ್ಧೀಕರಿಸಿ ಎರಡು ಕೆರೆಗಳಿಗೆ ನಾಡಪ್ರಭು ಕೆಂಪೇಗೌಡರ ಹೆಸರು ನಾಮಕರಣ ಮಾಡುವುದಾಗಿ ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.

ಖಾತೆ ಹಸ್ತಾಂತರ : ನಗರಸಭೆ ವ್ಯಾಪ್ತಿಯ 35ಸಾವಿರ ಅಡಿ ವಿಸ್ತೀರ್ಣವುಳ್ಳ 10.5ಕೋಟಿ ಮೌಲ್ಯದ ನಿವೇಶವನ್ನು ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್​ಗೆ ನಗರಸಭೆಯಿಂದ ಇ&ಖಾತಾ ಮಾಡಿ ಸಮುದಾಯ ಮುಖಂಡರಿಗೆ ಶಾಸಕ ಎನ್. ಶ್ರೀನಿವಾಸ್​ ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net