

ಬೇತಮಂಗಲ: ಬೇತಮಂಗಲದಲ್ಲಿರುವ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಜಾಗದಲ್ಲಿ ನೂತನ ನಾಡಕಚೇರಿ ಮತ್ತು ಗ್ರಾಪಂ ಕಟ್ಟಡ ನಿರ್ಮಾಣ ಮುಂದಾಗಿರುವುದು ವಿವಾದಕ್ಕೆ ಎಡೆ ಮಾಡಿದೆ.
ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳದಲ್ಲಿದ್ದ ಹಳೇ ಕಟ್ಟಡ ತೆರವುಗೊಳಿಸಲು ಗುರುವಾರ ಮುಂದಾದಾಗ ನೀರು ಸರಬರಾಜು ಮಂಡಳಿ ಅಧಿಕಾರಿಗಳು ಅಡ್ಡಿಪಡಿಸಿದರು. ಈ ವೇಳೆ ಮಂಡಳಿ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿ ಮಧ್ಯೆ ವಾಗ್ವಾದ ನಡೆಯಿತು.
ಜಲಮಂಡಳಿ ಜಾಗ: 1903ರಲ್ಲಿ ಬ್ರಿಟಿಷರು ಪಾಲಾರ್ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮಾಡಿದ ಸಂದರ್ಭದಲ್ಲಿ ನದಿ ಪಕ್ಕದಲ್ಲೆ ಸುಮಾರು 50 ಎಕರೆ ವಿಸ್ತೀರ್ಣದಲ್ಲಿ ನೀರು ಸರಬರಾಜು ಕೇಂದ್ರ, ಆಡಳಿತ ಕಚೇರಿ, ವಸತಿ ಗೃಹಗಳು, ಪ್ರವಾಸಿ ಬಂಗಲೆ ಹಾಗೂ ಪಾರ್ಕ್ ನಿರ್ಮಾಣ ಮಾಡಿದ್ದರು. ಬ್ರಿಟಿಷರ ಆಳ್ವಿಕೆಯ ನಂತರ ಈ ಸ್ವತ್ತನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ಹಸ್ತಾಂತರ ಮಾಡಲಾಗಿತ್ತು.
ಪ್ರಸ್ತುತ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ನಾಡಕಚೇರಿಗೆ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜಾಗವನ್ನೇ ನೀಡಲು ಬೇತಮಂಗಲ ಗ್ರಾಪಂಗೆ ಜಿಲ್ಲಾಡಳಿತ ಮನವಿ ಮಾಡಿದ್ದ ಮೇರೆಗೆ ಪಂಚಾಯಿತಿ ನಾಡಕಚೇರಿ ಜತೆಗೆ ಪಂಚಾಯಿತಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ನೀಡಿ ದಾಖಲೆ ನೀಡಿದೆ.
ಅದರಂತೆ ತಹಸೀಲ್ದಾರ್, ಜಿಲ್ಲಾಧಿಕಾರಿ ಮೂಲಕ ಕಂದಾಯ ಇಲಾಖೆ ಕಾರ್ಯದರ್ಶಿ ಕಚೇರಿಯಿಂದ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಪಡೆದು 18 ಲ ರೂ. ಬಿಡುಗಡೆ ಮಾಡಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಿದ್ದು, ಗುರುವಾರ ಕಂದಾಯ ನಿರೀಕ ಮುನಿವೆಂಕಟಸ್ವಾಮಿ ಮತ್ತು ಸಿಬ್ಬಂದಿ, ಗ್ರಾಪಂ ಅಧ್ಯ ವಿನು ಕಾರ್ತಿಕ್, ಪಿಡಿಒ ಮಂಜುನಾಥ ಹಾಗೂ ಬಹುತೇಕ ಸದಸ್ಯರ ಸಮ್ಮುಖದಲ್ಲಿ ನೂತನ ಸರ್ಕಾರಿ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಿದ್ದ ಸ್ಥಳದಲ್ಲಿದ್ದ ಹಳೇ ಕಟ್ಟಡ ಕೆಡವಲು ಮುಂದಾದ ಸಂದರ್ಭದಲ್ಲಿ ಕೆಯುಡಬ್ಲ್ಯುಎಸ್ ಸ್ಥಳಿಯ ಸಹಾಯ ಅಭಿಯಂತ ಶಿವಕುಮಾರ್ ಮತ್ತು ಸಿಬ್ಬಂದಿ ಅಡ್ಡಿಪಡಿಸಿ, ಮೇಲಧಿಕಾರಿಗಳಿಗೆ ಅರ್ಜಿ ಸಲ್ಲಿಸಿ, ಅವರು ಅನುಮತಿ ನೀಡಿದರೆ ತಕರಾರು ಇಲ್ಲ ಎಂದು ತಿಳಿಸಿದ್ದಾರೆ.
ದಾಖಲೆ ಇಟ್ಟು ಮಾತಾಡು ಎಂದ ಡಿಸಿ
ಏಕ ವಚನದಲ್ಲೇ ಮಾತನಾಡಿದ ಜಿಲ್ಲಾಧಿಕಾರಿ, ಜಿಲ್ಲೆಗೆ ನಾನೇ ಸುಪ್ರೀಂ, ಅಲ್ಲಿ ಸರ್ಕಾರಿ ಕಟ್ಟಡ ಕಟ್ಟುತ್ತೇವೆ. ನೀನು ಅಡ್ಡಿ ಮಾಡಬೇಡ ಎಂದಿದ್ದಾರೆ. ಆದರೆ, ಅದಕ್ಕೆ ಒಪ್ಪದ ಶಿವಕುಮಾರ್, ನಮ್ಮ ಮಂಡಳಿಯ ಎಂಡಿ ಹತ್ರ ಮಾತಾಡಿ ನನ್ನದೇನೂ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ. ಅದಕ್ಕೆ ಮತ್ತಷ್ಟು ಕೋಪಗೊಂಡ ಡಿಸಿ, ಸ್ಥಳಕ್ಕೆ ಬಂದು ಅಭಿಯಂತ ಶಿವಕುಮಾರ್ ವಿರುದ್ಧ ಕೆಂಡಾಮಂಡಲರಾದರು. ನಿಮ್ಮ ಮಂಡಳಿಯ ಆಸ್ತಿ ಅಂತ ನಿಮ್ಮ ಹತ್ರ ಏನ್ರೀ ದಾಖಲೆ ಇದೆ ತಗೊಂಡು ಬನ್ನಿ. ಇದು ನಮ್ಮ ಆಸ್ತಿ, ಗ್ರಾಮ ಠಾಣೆಗೆ ಸೇರಿದ ಆಸ್ತಿ, ನಾನು ಜಿಲ್ಲಾ ಪಂಚಾಯಿತಿ ಸಿಇಒ ಆಗಿದ್ದೇನೆ. ನಾನು ಹೇಳಿದ ಹಾಗೆ ಪಂಚಾಯಿತಿಯವರು ಮಾಡಿದ್ದಾರೆ, ಕೆಲಸಕ್ಕೆ ಅಡ್ಡಿಪಡಿಸಬೇಡಿ ಎಂದು ಗದರಿದ್ದಾರೆ. ಆಗಲೂ ಶಿವಕುಮಾರ್, ನಮ್ಮ ಮೇಲಾಧಿಕಾರಿ ಹತ್ತಿರ ಒಂದ್ಸಲ ಮಾತಾಡಿ ಎಂದಾಗ, ಅವರನ್ನೆ ನನ್ನ ಹತ್ರ ಮಾತಾಡಿದಕ್ಕೆ ಹೇಳ್ರಿ ಎಂದು ಸ್ಥಳದಲ್ಲೇ ಇದ್ದ ಜೆಸಿಬಿ ಬಿಟ್ಟು ಹಳೇ ಕಟ್ಟಡ ನೆಲಸಮ ಮಾಡಿಸಿದರು. ನಂತರ ಪಕ್ಕದ ಸಭಾಂಗಣದಲ್ಲಿ ಸಭೆ ನಡೆಸಿ, ಯಾವುದೇ ಕಾರಣಕ್ಕೂ ಕಾಮಗಾರಿ ನಿಲ್ಲಿಸದಂತೆ ಸೂಚಿಸಿದರು. ಜಿಲ್ಲಾಧಿಕಾರಿಗಳೇ ಈ ರೀತಿ ಸಮರಕ್ಕೆ ಮುಂದಾದರೆ ನಾವೇನು ಮಾಡಲು ಸಾಧ್ಯ ಎನ್ನುವಂತೆ ನೀರು ಸರಬರಾಜು ಮಂಡಳಿ ಸಿಬ್ಬಂದಿ ಏನೂ ಮಾಡಲಾಗದೆ ಮೂಕ ಪ್ರೇಕರಂತೆ ಸುಮ್ಮನಾದರು.
ಹಿಗ್ಗಾಮುಗ್ಗಾ ತರಾಟೆ
ಇದಕ್ಕೂ ಮೊದಲು ಸ್ಥಳ ಪರಿಶೀಲಿಸಿದ ಜಿಲ್ಲಾಧಿಕಾರಿ ಅಕ್ರಂಪಾಷಾ ಕಾರ್ಯಾಚರಣೆ ನಡೆಸುವಂತೆ ಕಂದಾಯ ಇಲಾಖೆ ಮತ್ತು ಗ್ರಾಪಂ ಅಧಿಕಾರಿಗಳಿಗೆ ಸೂಚನೆ ನೀಡಿ ಕೆಜಿಎ್ಗೆ ತೆರಳಿದ್ದರು. ನೀರು ಸರಬರಾಜು ಕೇಂದ್ರ ಅಧಿಕಾರಿಗಳು ಅಡ್ಡಿ ಮಾಡುತ್ತಿರುವ ಬಗ್ಗೆ ಕೆಜಿಎ್ ತಹಸೀಲ್ದಾರ್ ನಾಗವೇಣಿ ಮೂಲಕ ಮಾಹಿತಿ ಪಡೆದ ಅಕ್ರಂಪಾಷಾ ಅಲ್ಲಿಂದಲೇ ಮೊಬೈಲ್ ಮೂಲಕ ಮಂಡಳಿ ಅಭಿಯಂತ ಶಿವಕುಮಾರ್ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
ನೂರಾರು ವರ್ಷಗಳಿಂದ ಈ ಆಸ್ತಿ ಮಂಡಳಿ ನಿಯಂತ್ರಣದಲ್ಲಿದೆ. ಪಾಲಾರ್ ಕೆರೆ ನಿರ್ವಹಣೆ ಜತೆಗೆ ಇದಕ್ಕೆ ಹೊಂದಿಕೊಂಡಿರುವ ಸುಮಾರು 50 ಎಕರೆ ಪ್ರದೇಶದಲ್ಲಿರುವ ಎಲ್ಲ ಆಸ್ತಿಯನ್ನು ನಿರ್ವಹಣೆ ಮಾಡುತ್ತಿದ್ದೇವೆ. ಇಂದಿನ ಟನೆಗೆ ಸಂಬಂಧಪಟ್ಟಂತೆ ನಡೆದಿರುವ ಮಾಹಿತಿಯನ್ನು ಮಂಡಳಿಯ ಎಂಡಿಗೆ ತಿಳಿಸಿದ್ದೇನೆ. ಅವರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ನೋಡಬೇಕು. - ಶಿವಕುಮಾರ್,ಸಹಾಯಕ ಅಭಿಯಂತರರು ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ
ಬೇತಮಂಗಲದ ಕಟ್ಟಡ ತೆರವು ಸ್ಥಳದಲ್ಲಿ ಜಿಪಂ ಸಿಇಒ ಅಕ್ರಂಪಾಷಾ ಅವರೊಂದಿಗೆ ತಹಸೀಲ್ದಾರ್ ನಯನಾ, ಗ್ರಾಪಂ ಅಧ್ಯಕ್ಷ ವಿನು ಕಾರ್ತಿಕ್ ಇತರ ಅಧಿಕಾರಿಗಳು ಮತ್ತು ಗ್ರಾಪಂ ಸದಸ್ಯರು ಇದ್ದರು.