ನೆಮ್ಮದಿ ಬದುಕು ಕಲ್ಪಿಸಿದ ಸಂವಿಧಾನ

kgf
Published on

ಕೆಜಿಎಫ್​: ಜಗತ್ತಿನ ಅತ್ಯಂತ ಪವಿತ್ರವಾದ ಸಂವಿಧಾನ ನಮ್ಮ ಭಾರತ ಸಂವಿಧಾನ. ಅದರ ಅಡಿಯಲ್ಲಿ ಎಲ್ಲರೂ ಸಮಾನ ಬದುಕು ಮತ್ತು ಹಕ್ಕುಗಳನ್ನು ಪಡೆದು ನೆಮ್ಮದಿಯಿಂದ ಬಾಳುವ ವ್ಯವಸ್ಥೆಯನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ವೆಂಕಟೇಶಪ್ಪ ತಿಳಿಸಿದರು.

ನಗರದ ಹೊರವಲಯದ ಪಾರಂಡಹಳ್ಳಿಯ ತಾಪಂ ಕಚೇರಿ ಸಮೀಪದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕೋಲಾರ ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆ ಫೋಕಸ್​ ಟ್ರಸ್ಟ್​ ಸಂಯುಕ್ತ ಆಶ್ರಯದಲ್ಲಿ 2024&-25ನೇ ಸಾಲಿನ ಪರಿಶಿಷ್ಟ ಜಾತಿ/ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ ಅನುಷ್ಠಾನದಡಿಯಲ್ಲಿ ಅಸ್ಪ-----ೃಶ್ಯತೆ ನಿಮೂರ್ಲನೆ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಬೀದಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ನಾವೆಲ್ಲರೂ ಸಮಾನರು, ಮೇಲು ಕೀಳು ಎಂಬ ಬೇಧಬಾವ ಮಾಡದೆ ಮನುಷ್ಯನನ್ನ ಮನುಷ್ಯರಂತೆ ಕಾಣುವ ಸಮಾಜ ನಿರ್ಮಾಣ ಮಾಡುವ ಶಕ್ತಿ ವಿದ್ಯಾರ್ಥಿಗಳಿಂದ ಮಾತ್ರ ಸಾಧ್ಯ ಎಂದರು.

ದಲಿತ ಸಂಘರ್ಷ ಸಮಿತಿ ಸಂಚಾಲಕ ಹಿರೇಕರಪ್ಪನಳ್ಳಿ ಯಲ್ಲಪ್ಪ ಮಾತನಾಡಿ, ಪ್ರಕೃತಿಗೆ ಇಲ್ಲದ ತಾರತಮ್ಯ ಈ ಮನುಷ್ಯನಿಗೆ ಯಾಕೆ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಆಧುನಿಕ ಜಗತ್ತಿನಲ್ಲಿ ನಾವು ಮುಂದುವರಿದಷ್ಟು ಪ್ರಜ್ಞಾವಂತ ಸಮಾಜ ಇನ್ನಷ್ಟು ಅಸ್ಪ-----ೃಶ್ಯ ಆಚರಣೆಯಲ್ಲಿ ತೊಡಗಿರುವುದು ವಿಷಾದ ಎಂದರು.

ಸಮಾಜ ಕಲ್ಯಾಣ ಇಲಾಖೆ ಈ ಸಾಮಾಜಿಕ ಪಿಡುಗನ್ನ ಹೋಗಲಾಡಿಸಲು ಅನೇಕ ಕಾರ್ಯಕ್ರಮ ರೂಪಿಸಿದೆ. ಅಲ್ಲದೆ ಸಮಾಜ ಕಲ್ಯಾಣ ಇಲಾಖೆಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಗುಣಮಟ್ಟದ ಶಿಕ್ಷಣ ಪಡೆಯಲು, ವಸತಿ ನಿಲಯಗಳ ಪ್ರವೇಶ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ಎಸ್​ಎಸ್​ಪಿ ಮೂಲಕ ವಿದ್ಯಾರ್ಥಿ ವೇತನ, ಉನ್ನತ ವ್ಯಾಸಂಗಕ್ಕೆ ಉತ್ತೇಜನ ಮತ್ತು ಧನಸಹಾಯ ನೀಡುವುದು, ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹಧನ, ಅಂಬೇಡ್ಕರ್​ ಮತ್ತು ವಾಲ್ಮೀಕಿ ಭವನಗಳ ನಿಮಾರ್ಣ, ಮಲಹೊರುವ ಪದ್ದತಿ ನಿಷೇಧ, ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಗಳಿಗೆ ಸಹಾಯಧನ, ಕಾನೂನು ಪದವೀಧರರಿಗೆ ಶಿಷ್ಯ ವೇತನ ಹಾಗೂ ಇನ್ನೂ ಅನೇಕ ಸೌಲಭ್ಯಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net