ಆಡಳಿತದಲ್ಲಿ ತುಲನಾತ್ಮಕ ವ್ಯವಸ್ಥೆಯ ಸಂವಿಧಾನ

The Constitution of the Comparative System in Administration
ಸಿಂದಗಿ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ತಹಸೀಲ್ದಾರ್ ಡಾ. ಪ್ರದೀಪ ಹಿರೇಮಠ ಧ್ವಜಾರೋಹಣ ನೆರವೇರಿಸಿದರು. ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ರಾಜಣ್ಣ ನಾರಾಯಣಕರ ಮತ್ತಿತರರಿದ್ದರು.
Published on

ಸಿಂದಗಿ: ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ದೇಶದ ಆಡಳಿತಕ್ಕೆ ಶಾಸಕಾಂಗ, ಕಾಯಾರ್ಂಗ, ನ್ಯಾಯಾಂಗದ ಮೂಲಕ ತುಲನಾತ್ಮಕ ವ್ಯವಸ್ಥೆಯ ಸಂವಿಧಾನ ನೀಡಿದ್ದಾರೆ ಎಂದು ತಹಸೀಲ್ದಾರ್ ಡಾ. ಪ್ರದೀಪ ಹಿರೇಮಠ ಹೇಳಿದರು.

ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಭಾನುವಾರ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಸಂವಿಧಾನದ ಆಶಯದಂತೆ ಸರ್ಕಾರಿ ಸೌಲಭ್ಯಗಳನ್ನು ಜನರ ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ.

ಸಿಂದಗಿ ಕಂದಾಯ ಇಲಾಖೆ ಪಹಣಿಗೆ ಆಧಾರ್ ಜೋಡಿಸುವ ಕಾರ್ಯದಲ್ಲಿ ಶೇ. 90ರಷ್ಟು ಸಾಧನೆಗೈದು ರಾಜ್ಯದಲ್ಲಿ ಹತ್ತನೇ ಸ್ಥಾನ, ವಿಜಯಪುರ ಜಿಲ್ಲೆಯಲ್ಲಿ ಮೊದಲ ಸ್ಥಾನ ಗಳಿಸಿದೆ. ಭೂಮಿ, ಅಟಲ್‌ಜೀ ತಂತ್ರಾಂಶ ಕೇಂದ್ರದ ತಾಲೂಕು ನಿರ್ವಹಣೆಯಲ್ಲಿ ಐದನೆಯ ಸ್ಥಾನದಲ್ಲಿದೆ. ಕೃಷಿ ಇಲಾಖೆಯಿಂದ ಐದು ರೈತರಿಗೆ ಸಬ್ಸಿಡಿಯಲ್ಲಿ ಕಬ್ಬು ಕಟಾವು ಯಂತ್ರ ಒದಗಿಸಲಾಗಿದೆ. ತಾಲೂಕಿನ ಸಮಾಜ ಕಲ್ಯಾಣ, ತೋಟಗಾರಿಕೆ ಸೇರಿ ಇತರ ಇಲಾಖೆಗಳಲ್ಲಿನ ಸವಲತ್ತುಗಳನ್ನು ಒದಗಿಸಲಾಗುತ್ತಿದೆ. ನಗರದ ಸೌಂದರ್ಯ ಹೆಚ್ಚಿಸಲು ಅತಿಕ್ರಮಣಗೊಂಡಿದ್ದ ಪ್ರಮುಖ ರಸ್ತೆಗಳನ್ನು ವ್ಯಾಪಾರಿಗಳ ಸಹಕಾರದಿಂದ ತೆರವುಗೊಳಿಸಲಾಗಿದೆ ಎಂದರು.

ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಮಾತನಾಡಿದರು. ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು.

ಸಮಾಜ ಕಲ್ಯಾಣಾಧಿಕಾರಿ ಭವಾನಿ ಪಾಟೀಲ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ, ಗ್ರೇಡ್-2 ತಹಸೀಲ್ದಾರ್ ಐ.ಎಂ. ಬಳಗಾನೂರ, ಕೃಷಿ ಅಧಿಕಾರಿ ಎಚ್.ವೈ. ಸಿಂಗೆಗೋಳ ಇದ್ದರು.

ಉತ್ತಮ ಕಾರ್ಯನಿರ್ವಹಿಸಿದ ಗ್ರಾಮ ಆಡಳಿತಾಧಿಕಾರಿ ಭೀಮಾಶಂಕರ ಕಾರಿಮುಂಗಿ, ಆಶಾ ಕಾರ್ಯಕರ್ತೆ ಖಾಜಾಬಿ ಬಾಗವಾನ, ಅರಣ್ಯ ಇಲಾಖೆಯ ಮಹಾದೇವ ಯಂಕಂಚಿ, ಸಿದ್ಲಿಂಗಪ್ಪ ರೆಬಿನಾಳ, ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಸಬಿಯಾ ಮರ್ತೂರ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು. ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿಂದ ಗೌರವ ವಂದನೆ ನಡೆಯಿತು.

ವಿದ್ಯಾರ್ಥಿ ವೇದಾಂತಗೌಡ ಬಿರಾದಾರ ಸಂವಿಧಾನದ ಪೀಠಿಕೆ, ಅದರ ರಚನಾ ಸಮಿತಿ ಸದಸ್ಯರನ್ನು ಪರಿಚಯಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net