ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠ

VV DIGITAL
Published on

ಹೊಳೆಆಲೂರ: ಹಲವು ದೇಶಗಳ ಉತ್ತಮ ಸಂಗತಿಗಳನ್ನು ಅಧ್ಯಯನ ಮಾಡಿ ಭಾರತೀಯ ಸಂವಿಧಾನ ರಚನೆ ಮಾಡಿರುವುದರಿಂದ ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಠ ಸಂವಿಧಾನ ಎಂದು ಗುರುತಿಸಲ್ಪಟ್ಟಿದೆ ಎಂದು ಸಾಹಿತಿ ಈರಣ್ಣ ಮಾದರ ಹೇಳಿದರು. ಗ್ರಾಮದ ಯಚ್ಚರೇಶ್ವರ ವಿದ್ಯಾಸಂಸ್ಥೆಯ ಪ್ರೌಢಶಾಲಾ ಸಂಸತ್ ಉದ್ಘಾಟನೆ, 8ನೇ ವರ್ಗದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಪಠ್ಯೇತರ ಚಟುವಟಿಕೆ ಉದ್ಘಾಟನಾ ಸಮಾರಂಭದ ಅತಿಥಿಯಾಗಿ ಮಾತನಾಡಿದರು. ಸಾಹಿತಿ ಎ.ಎಂ. ಮದರಿ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಯಚ್ಚರೇಶ್ವರ ಮಠದ ಗಂಗಾಧರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎ.ಎನ್. ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಗೌರವ ಅಧ್ಯಕ್ಷ ಕೆ.ಸಿ.ಹಿರೇಮಠ ಪಾಟೀಲ, ಕಾರ್ಯದರ್ಶಿ ಪಿ.ವಿ. ಪತ್ತಾರ, ಬಿ.ಆರ್. ಬಡಿಗೇರ, ಮಹೇಶಪ್ಪ ಐವಳ್ಳಿ, ವಿ.ಎಂ. ವಸ್ತ್ರದ, ಸಿಆರ್‌ಪಿ ನಾಗಪ್ಪ ಗೋಂದಿ, ಎ.ಪಿ. ಹಿರೇಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net