

ಆಲ್ದೂರು: ಡಾ. ಬಿ.ಆರ್.ಅಂಬೇಡ್ಕರ್ ಹೋರಾಟದ ಫಲವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದವರು ಸಮಾನತೆ ಜೀವನ ನಡೆಸಲು ಸಾಧ್ಯವಾಗಿದೆ ಎಂದು ಬಿಎಸ್‌ಪಿ ಪಿ.ಪರಮೇಶ್ವರ್ ಹೇಳಿದರು.
ಮಾವಿನಗುಣಿ ಗ್ರಾಮದಲ್ಲಿ ಇತ್ತೀಚೆಗೆ ಅಂಬೇಡ್ಕರ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂವಿಧಾನ ಹಿಂದುಳಿದವರ ರಕ್ಷಾ ಕವಚ. ಪ್ರತಿಯೊಬ್ಬರೂ ಶಿಕ್ಷಣ ಪಡೆಯಬೇಕು. ಸರ್ಕಾರಗಳು ಎಡವಿದರೆ ಪ್ರಶ್ನಿಸುವುದನ್ನು ಕಲಿತುಕೊಳ್ಳಬೇಕು. ಜತೆಗೆ ಸಂವಿಧಾನ ರಕ್ಷಿಸಬೇಕು ಎಂದರು. ಬಿಎಸ್‌ಪಿ ಮುಖಂಡ ಎಂ.ಡಿ.ಶಂಕರ್, ಧರ್ಮೇಶ್, ಲೋಕೇಶ್ ಹುಣಸೇಮಕ್ಕಿ, ರಾಜು, ಪರ್ವತ, ಸಂದೀಪ್ ಇತರರಿದ್ದರು.