ಸಮಾನ ಸಮಾಜಕ್ಕೆ ಸಂವಿಧಾನವೇ ಮೂಲಾಧಾರ

The Constitution is the foundation for an equal society.
ಬೀಳಗಿಯ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಡಾ. ಬಿ.ಆರ್. ಆಂಬೇಡ್ಕರ್ ಅವರ 134ನೇ ಜಯಂತ್ಯುತ್ಸವದಲ್ಲಿ ಭಾವಚಿತ್ರಕ್ಕೆ ಶಾಸಕ ಜೆ.ಟಿ. ಪಾಟೀಲ ಪೂಜೆ ಸಲ್ಲಿಸಿದರು. ತಹಸೀಲ್ದಾರ್ ವಿನೋಹ ಹತ್ತಳ್ಳಿ, ಶ್ರೀನಿವಾಸ ಪಾಟೀಲ, ಮುತ್ತು ಬೀರ್ಜಿ ಮತ್ತಿತರರಿದ್ದಾರೆ.
Published on

ಬೀಳಗಿ : ಸರಿಸಮನ ಸಮಾಜ ನಿರ್ಮಾಣ ಮಾಡುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಮೂಲಾಧಾರವಾಗಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ. ಪಾಟೀಲ ಹೇಳಿದರು.

ಸ್ಥಳೀಯ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಬಿ.ಆರ್.ಆಂಬೇಡ್ಕರ್ ಅವರ 134ನೇ ಜಯಂತ್ಯುತ್ಸವದಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ದೇಶದಲ್ಲಿರುವ ಎಲ್ಲ ಸಮುದಾಯಗಳು ಒಂದೇ ವೇದಿಕೆಯಲ್ಲಿ ಬರುವಂತೆ ಸಂವಿಧಾನ ಬರೆದಿದ್ದಾರೆ. ಆದನ್ನು ಆಚರಣೆಗೆ ತರುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಇದೆ. 70 ವರ್ಷ ಕಳೆದರೂ ಅವರ ಆಸೆ ಇಡೇರಿಸುವಲ್ಲಿ ನಾವು ವಿಲರಾಗಿದ್ದೇವೆ. ಅವರು ಬರೆದ ಸಂವಿಧಾನ ಹಾಗೂ ಜಗಜ್ಯೋತಿ ಬಸವಣ್ಣನವರು ಹಾಕಿಕೊಟ್ಟ ವಚನಗಳ ತತ್ವದಡಿಯಲ್ಲಿ, ಮಹತ್ಮಾ ಗಾಂಧೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಮನ್ನಡೆಯಬೇಕಾಗಿದೆ ಎಂದರು.

ತಹಸೀಲ್ದಾರ್ ವಿನೋದ ಹತ್ತಳ್ಳಿ, ತಾಪಂ ಪ್ರಭಾರಿ ಇಒ ಹಾಗೂ ಕೃಷಿ ಅಧಿಕಾರಿ ಶ್ರೀನಿವಾಸ ಪಾಟೀಲ, ಪಪಂ ಅಧ್ಯಕ್ಷ ಮುತ್ತು ಬೀರ್ಜಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಣವೀರಯ್ಯ ಪ್ಯಾಠಿಮಠ, ಪಪಂ ಮುಖ್ಯಾಧಿಕಾರಿ ದೇವೇಂದ್ರ ಧನಪಾಲ, ಸಿಪಿಐ ಎಚ್.ಬಿ.ಸಣ್ಣಮನಿ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿ.ಎಸ್.ಗಡ್ಡದೇವರಮಠ, ಬಿಇಒ ಆರ್.ಎಸ್.ಆದಾಪೂರ, ಸಿಡಿಪಿಒ ಕವಟೇಕರ, ನೋಂದಣಿ ಅಧಿಕಾರಿ ಮುಂಡರಗಿ, ಮಾಜಿ ಜಿಪಂ ಸದಸ್ಯ ಹನುಮಂತ ಕಾಖಡಂಕಿ, ಪಪಂ ಮಾಜಿ ಅಧ್ಯಕ್ಷ ಅನಿಲ ಗಚ್ಚಿನಮನಿ, ಮಹಾದೇವ ಹಾದಿಮನಿ, ಪ್ರವೀಣ ಪಾಟೀಲ, ಮುತ್ತು ಲಮಾಣಿ, ಬಸವರಾಜ ಹಳ್ಳದಮನಿ, ಪಡಿಯಪ್ಪ ಕಳ್ಳಿಮನಿ, ಶಿವಾನಂದ ಮಾದರ, ರವಿ ಮಂಟೂರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net